Body
- Prabina Kabi
Everyday,
Before the breaking of dawn
I engage in a battle with my youth,
My desires carnal,
a battle against my restraint
and abstinence too !
Every morning as my eyes open,
I find beside me a body
In which lie interred hunger,
fire and fishy - smelling blood !
By the time I collect my bearing,
The battle lines are already drawn,
The divine conchshell has been blown
and the master archer's bowstring drawn !
In the arena,
Sides have already been taken,
my mortal frame on one side
and on the other side, it is god !
A hissing body ready on one side to sting
and on the other side
the reverberating call of the conchshell,
It is hunger against supplication,
Surrender against creation that be !
And a brief battle rages
On the terrain of my tattered being.
Sometimes invisible arms
subdue visible emotions,
and at other times
spells of magic born from love's charm
Pierce impenetrable devotion.
Thus proceeds the battle , but time flies!
Enemies get older,
Blood spills on the arena in vein .
As the sun sets the battle is done,
But the divine chant fails to cool the vein
and entomb the temper infernal, vain !
While God lies hurt
In the chamber of worship
body triumphs,
it's mark of triumph emblazoned,
and sins get laid in time's vault secure !!
Poem 1
In a narrow space, without even a pencil lead slipping,
between four lines, a small cage, the letter "Sha" is tricky,
how to join it, imagining the head as zero,
it's easy to think, but writing together is childish.
Tests of patience, forgetting, and slipping,
limits crossed in a moment of carelessness,
one box won't suffice, you need many,
write and rewrite what you've written.
Even if you're tired or sleepy,
tomorrow's task is today's responsibility,
in books, children's writing is amusing,
unbeknownst to them, a life story in each letter.
Children's writing varies - clean, crooked, or unclear,
pages fill up quickly,
no fear for tomorrow,
measurement is patience,
the more patience, the higher the marks,
patience is the measure for letters and life.
|| hey! Wounded man! ||
Now, I am in the urge of
Sprinkling water on earth…
’n searching for it in the sky.
..
Myself,
Peeping from the edges of last shoots…
The soul of the deep roots…
..
Myself,
Wailing for unripe fallen fruits
Reading the stories of confined humans
..
Myself,
Hearing the charred anthems
Of, the wounded souls
Myself,
Recalling the fables ..
Of, the persisted sleeping tombs …..
..
How magical is this past!?
It, deprived …
The yield of the black soil..
The rain of the sky..
from the double handfuls ..
Which are waiting in the last branches..
Now, I am gazing at the arboretum
..
Hey… wounded man..!
Silence is not a war
Let us sing your agony like a song…!
The present vacuum… will be filled tomorrow.
Time endorses ..
Someone sails in your footsteps..!
Attainable is not far away….
From your first steps.!
On the edge of the dark…
The raging flag is also fluttering!!
ದೇಹ
ಪ್ರತಿ ದಿನ
ಕೋಳಿ ಕೂಗುವ ಮುನ್ನವೇ
ನನ್ನ ಯೌವನಭರಿತ ದೇಹದೊಂದಿಗೆ ನನ್ನ ಯುದ್ದ ಆರಂಭವಾಗುತ್ತದೆ.
ನನ್ನ ಬಯಕೆಗಳು ಕೆರಳುತ್ತವೆ
ಹಾಗೂ ನನಗಿರುವ ಅಡೆತಡೆಗಳು ಮತ್ತು ಇಂದ್ರೀಯ ನಿಗ್ರಹಗಳ ವಿರುದ್ಧ ನನ್ನ ಯುದ್ಧ ಶುರುವಾಗುತ್ತದೆ!
ಪ್ರತಿ ಮುಂಜಾನೆ
ನಾನು ಕಣ್ಣು ಬಿಟ್ಟಾಗ
ನನ್ನ ಬಳಿ ದೇಹವೊಂದು ಮಲಗಿರುವದು ಕಾಣುತ್ತದೆ
ಆ ದೇಹದಲ್ಲಿ ತಡೆದಿಟ್ಟ ಹಸಿವು, ಬೆಂಕಿಯಂಥ ಬಯಕೆ ಹಾಗೂ ರಕ್ತದ ವಾಸನೆ ಕಾಣಿಸುತ್ತದೆ
ನಾನು ನನ್ನ ಸಮತೋಲನವನ್ನು ಸಾಧಿಸುವ ವೇಳೆಗೆ,
ಯುದ್ಧರೇಖೆಗಳು ಅದಾಗಲೇ ಮೂಡಿರುತ್ತವೆ,
ಹಾಗೂ ದೈವೀ ಶಂಖನಾದವು ಮೊಳಗಿರುತ್ತದೆ
ಮತ್ತು ಮಹಾನ್ ಬಿಲ್ಲುಗಾರನ ಬಿಲ್ಲಿನ ತಂತಿಯನ್ನು ಬಿಗಿಯಲಾಗಿರುತ್ತದೆ!
ಅಖಾಡದಲ್ಲಿ,
ಪಕ್ಷಗಳು ಈಗಾಗಲೇ ಉದ್ಭವವಾಗಿವೆ,
ನನ್ನ ನಶ್ವರ ದೇಹ ಒಂದು ಕಡೆ,
ಇನ್ನೊಂದು ಕಡೆ ದೇವರು!
ಒಂದು ಕಡೆ ಕಚ್ಚಲು ತಯಾರಾದ ಬುಸುಗುಟ್ಟುವ ದೇಹ,
ಮತ್ತೊಂದು ಕಡೆ ಶಂಖನಾದದ ಪ್ರತಿಧ್ವನಿ,
ಇದು ಬಯಕೆಯ ವಿರುದ್ಧದ ಹಸಿವಿನ ಪ್ರಾರ್ಥನೆ,
ಮತ್ತು ಇರಿಯುವ ಆದರೆ ತೂರಲಾಗದ ಭಕ್ತಿ!
ಈ ರೀತಿ ಯುದ್ದ ಸಾಗುತ್ತದೆ
ಆದರೆ ಸಮಯ ಸರಿಯುತ್ತದೆ
ಶತ್ರುಗಳಿಗೆ ವಯಸ್ಸಾಗುತ್ತದೆ
ರಂಗದ ಮೇಲೆ ರಕ್ತ ವೃಥಾ ಸುರಿಯುತ್ತದೆ!
ಸೂರ್ಯನು ಅಸ್ತಮಿಸುತ್ತಿದ್ದಂತೆ ಯುದ್ಧ ಮುಗಿಯುತ್ತದೆ,
ಆದರೆ ದೈವೀ ಜಪವು ಕುದಿಯುತ್ತಿರುವ ರಕ್ತವನ್ನು ಶಾಂತಗೊಳಿಸಲು
ಮತ್ತು ಬೇಸರದಿಂದುದಿಸಿದ ಕೋಪವನ್ನು ಸಮಾಧಿ ಮಾಡಲು ವಿಫಲವಾಗುತ್ತದೆ.
ಗರ್ಭಗುಡಿಯಲ್ಲಿ ದೇವರು ಗಾಯಗೊಂಡಾಗ,
ದೇಹವು ಜಯಶೀಲವಾಗುತ್ತದೆ,
ಜಯದ ಗುರುತು ಮೂಡುತ್ತದೆ,
ಮತ್ತು ಪಾಪಗಳು ಕಾಲಗರ್ಭದಲ್ಲಿ ಹೂತುಹೋಗುತ್ತವೆ!!
ಒರಿಯಾ ಮೂಲ: ಪ್ರಬಿನಾ ಕಬಿ
ಕನ್ನದಕ್ಕೆ: ಉದಯ ಇಟಗಿ
ಕವಿತೆ 1
ಕಿರಿದಾದ ಜಾಗದಲ್ಲಿ, ಪೆನ್ಸಿಲ್ ಸೀಸವೂ ಜಾರಿಕೊಳ್ಳದೆ,
ನಾಲ್ಕು ಸಾಲುಗಳ ನಡುವೆ, ಒಂದು ಸಣ್ಣ ಗೊಂದಲವುಂಟಾಗಿದೆ
ಈ "ಶ" ಅಕ್ಷರವು ಎಷ್ಟೊಂದು ಕ್ಲಿಷ್ಟವಾಗಿದೆ
ತಲೆಯನ್ನು ಶೂನ್ಯ ಎಂದು ಊಹಿಸಿ ಅದನ್ನು ಹೇಗೆ ಜೋಡಿಸುವುದು,
ಯೋಚಿಸುವುದು ಸುಲಭ,
ಆದರೆ ಒಟ್ಟಿಗೆ ಬರೆಯುವುದು ಎಷ್ಟೊಂದು ಬಾಲಿಶ!.
ತಾಳ್ಮೆಯ ಪರೀಕ್ಷೆಗಳು,
ಒಂದೇ ಒಂದು ಕ್ಷಣದ ಅಜಾಗರೂಕತೆಯ ಕ್ಷಣದಲ್ಲಿ ಮಿತಿಗಳನ್ನುದಾಟಿವೆ
ಒಂದು ಬಾಕ್ಸ್ ಸಾಕಾಗುವುದಿಲ್ಲ, ನಿಮಗೆ ಬಹಳಷ್ಟು ಬೇಕು,
ನೀವು ಬರೆದದ್ದನ್ನು ಬರೆಯಿರಿ ಮತ್ತು ಪುನಃ ಬರೆಯಿರಿ.
ನೀವು ದಣಿದಿದ್ದರೂ ಅಥವಾ ನಿದ್ರಿಸಿದರೂ ಸಹ,
ನಾಳೆಯ ಕೆಲಸ ಇಂದಿನ ಜವಾಬ್ದಾರಿ
ಮಾಡಿ ಮುಗಿಸಬೇಕು
ಪುಸ್ತಕಗಳಲ್ಲಿ, ಮಕ್ಕಳ ಬರವಣಿಗೆ ವಿನೋದಮಯವಾಗಿದೆ,
ಹಾಗೂ ಅವರಿಗೆ ತಿಳಿಯದಂತೆ, ಪ್ರತಿ ಪತ್ರದಲ್ಲಿ ಜೀವನದ ಕಥೆಯಿದೆ
ಮಕ್ಕಳ ಬರವಣಿಗೆಯೇ ಹಾಗೆ- ಒಂದು ಸಾರಿ ಸ್ವಚ್ಛ, ಒಂದು ಸಾರಿ ವಕ್ರ, ಒಂದು ಸಾರಿ ಅಸ್ಪಷ್ಟ,
ಪುಟಗಳು ಬೇಗನೆ ತುಂಬುತ್ತವೆ,
ನಾಳೆಯ ಭಯವಿಲ್ಲ,
ಅಳತೆ ಎಂದರೆ ತಾಳ್ಮೆ,
ಹೆಚ್ಚು ತಾಳ್ಮೆ, ಹೆಚ್ಚಿನ ಅಂಕಗಳು,
ತಾಳ್ಮೆಯು ಅಕ್ಷರಗಳು ಮತ್ತು ಜೀವನದ ಅಳತೆಗೋಲಾಗಿದೆ.
ಒರಿಯಾ ಮೂಲ: ಪ್ರಬಿನಾ ಕಬಿ
ಕನ್ನದಕ್ಕೆ: ಉದಯ ಇಟಗಿ
ಹೇ, ಗಾಯಗೊಂಡ ಮನುಷ್ಯನೇ!
ಹೇ! ಗಾಯಗೊಂಡ ಮನುಷ್ಯನೇ!
ಈಗ, ನನಗೆ ಭೂಮಿಯ ಮೇಲೆ
ನೀರನ್ನು ಚಿಮುಕಿಸುವ ತುರ್ತಿದೆ
ಅದಕ್ಕಾಗಿ ಆಕಾಶದಲ್ಲಿ ನೀರನ್ನು ಹುಡುಕುತ್ತಿದ್ದೇನೆ.
..
ನಾನು
ಆಳವಾದ ಬೇರುಗಳ ಆತ್ಮವಾದ
ಕೊನೆಯ ಚಿಗುರಿನ ಅಂಚುಗಳಿಂದ ಇಣುಕುತ್ತಿರುವೆ..
ನಾನು,
ಬಂಧಿಯಾದ ಮಾನವರ ಕಥೆಗಳನ್ನು ಓದುತ್ತಾ
ಬಲಿಯದೆ ಉದುರಿದ ಹಣ್ಣುಗಳಿಗಾಗಿ ಅಳುತ್ತಿದ್ದೇನೆ
ನಾನು,
ಗಾಯಗೊಂಡ ಆತ್ಮಗಳ
ಸುಟ್ಟ ಗೀತೆಗಳನ್ನು ಕೇಳುತ್ತಿದ್ದೇನೆ
ನಾನೇ,
ನಿರಂತರ ಮಲಗಿರುವ ಗೋರಿಗಳ
ನೀತಿಕಥೆಗಳನ್ನು ಜ್ನಾಪಿಸಿಕೊಳ್ಳುತ್ತಿರುವೆ
ಈ ಭೂತಕಾಲ ಎಷ್ಟೊಂದು ಮಾಂತ್ರಿಕವಾಗಿದೆ!?
ಇದು ಕಪ್ಪು ಮಣ್ಣಿನ ಇಳುವರಿಯನ್ನು
ಹಾಗೂ ಆಗಸದ ಮಳೆಯನ್ನು
ಎರಡೆರೆಡು ಬಾರಿ ವಂಚಿಸಿದೆ
ಈಗ ನಾನು ಸಸ್ಯೋದ್ಯಾನವನ್ನು ನೋಡುತ್ತಿದ್ದೇನೆ
ಹೇ! ಗಾಯಗೊಂಡ ಮನುಷ್ಯನೇ!
ಮೌನ ಯುದ್ಧವಲ್ಲ
ನಿನ್ನ ಸಂಕಟವನ್ನು ಹಾಡಿನಂತೆ ಹಾಡೋಣ...!
ಪ್ರಸ್ತುತ ನಿರ್ವಾತ... ನಾಳೆ ತುಂಬಲಿದೆ.
ಸಮಯ ಅನುಮೋದಿಸುತ್ತದೆ..
ನಿನ್ನ ಹೆಜ್ಜೆಯಲ್ಲಿ ಯಾರೋ ಸಾಗುತ್ತಾರೆ..!
ಕೈಗೆಟಕುವುದು
ನಿಮ್ಮ ಮೊದಲ ಹೆಜ್ಜೆಗಳಿಂದ ದೂರವೇನಿಲ್ಲ.... !
ಕತ್ತಲೆಯ ಅಂಚಿನಲ್ಲಿ...
ಕೆರಳಿದ ಬಾವುಟವೂ ಕುಣಿಯುತ್ತಿದೆ!!
ಒರಿಯಾ ಮೂಲ: ಪ್ರಬಿನಾ ಕಬಿ
ಕನ್ನದಕ್ಕೆ: ಉದಯ ಇಟಗಿ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ