Demo image Demo image Demo image Demo image Demo image Demo image Demo image Demo image

A Drop of Romance

  • ಗುರುವಾರ, ಏಪ್ರಿಲ್ 30, 2020
  • ಬಿಸಿಲ ಹನಿ
  • A poem of Therly Shekhar in my English translation. 

    Last night
    She and I
    Went into the Eden garden
    There
    We sinned
    By eating 
    The forbidden fruit of God

    We were so hungry that
    She ate me up
    And I too ate her up 
    Ultimately                        
    We melted away
    In each other
    As if 
    Leaving nothing

    From Kannada: Therly Shekhar
    To English: Uday Itagi

    A Prayer for Making Romance

  • ಬಿಸಿಲ ಹನಿ
  • O merciful God,

    Please grant us again

    With the same long night 

    When the world was fast asleep!



    Like that night

    This night too

    Like your tears of joy 

    Let it rain torrentially

    ;

    Like that night

    This night too

    Like your heart beat 

    Let it thunder tunefully



    Like that night

    Even this night

    As the flash of your eyes 

    Let the eye-piercing light shine brightly



    Once again

    Like that night, we

    Embracing each other

    Will become the thunder of your heart beat.



    Like that night, we

    Hugging

    And rubbing each other

    Will become the light of your sparkling eyes 



    Like that night, we

    Hugging each other

    Throughout that long night

    Let us become the torrential rain!



    From Kannada: Therly Shekhar

    To English: Uday Itagi

    ಫೀಡೆಲ್ ಕ್ಯಾಸ್ಟ್ರೋ ಮತ್ತು ಮೌಮರ್ ಗಡಾಫಿ ಎಂಬ ಎರಡು ಫಿನಿಕ್ಸ್ ಹಕ್ಕಿಗಳು

  • ಬಿಸಿಲ ಹನಿ
  • ಅವಧಿಯಲ್ಲಿ ಪ್ರಕಟವಾಗಿದ್ದ ನನ್ನ ಲಿಬಿಯಾ ಡೈರಿಅಂಕಣವನ್ನು 2018 ರಲ್ಲಿ ಪುಸ್ತಕವಾಗಿಹೊರತರಬೇಕೆಂದುಕೊಂಡಾಗ ಅದಕ್ಕೆ ಮುನ್ನುಡಿಯನ್ನು ಯಾರಿಂದ ಬರೆಸಬೇಕು ಎಂದು ಯೋಚಿಸುತ್ತಿರುವಾಗ ನನಗೆ ಮೊದಲು ಹೊಳೆದ ಹೆಸರು ಅವಧಿ ಸಂಪಾದಕರಾಗಿದ್ದ ಜಿ.ಎನ್.ಮೋಹನ್ ಸರ್ ಅವರದು. ಅದಕ್ಕೆ ಮುಖ್ಯ ಕಾರಣ ಅವರ ಪುಸ್ತಕನನ್ನೊಳಗಿನ ಹಾಡು ಕ್ಯೂಬಾಆಗಷ್ಟೇ ಬಿಡುಗಡೆಯಾಗಿ ಸುದ್ದಿ ಮಾಡಿತ್ತು. ನಾನಿನ್ನೂ ಪಸ್ತಕವನ್ನು ಓದಿರಲಿಲ್ಲ. ಆದರೆ ಅಮೆರಿಕಾ ಕ್ಯೂಬಾದಲ್ಲಿ ನಡೆಸಿದ ಕುತಂತ್ರಗಳ ಬಗೆಗಿನ ಚಿತ್ರಣ ಪುಸ್ತಕದಲ್ಲಿದೆ ಎನ್ನುವದನ್ನು ಅಲ್ಲಿ-ಇಲ್ಲಿ ಓದಿ ತಿಳಿದುಕೊಂಡಿದ್ದೆ. ನನ್ನ ಪುಸ್ತಕವೂ ಲಿಬಿಯಾದಲ್ಲಿ ಅಮೆರಿಕಾ ನಡೆಸಿದ ಹುನ್ನಾರಗಳ ಕುರಿತೇ ಇದ್ದುದರಿಂದ ಮೋಹನ್ ಸರ್ ಗೆ ವಿಷಯ ಚನ್ನಾಗಿ ಅರ್ಥವಾಗುತ್ತದೆಂದುಕೊಂಡು ಅವರೇ ಸೂಕ್ತವಾದ ವ್ಯಕ್ತಿ ಎಂದು ಅವರನ್ನು ಕೇಳಿಕೊಂಡಾಗ ಅವರು ಸಮಯದಲ್ಲಿ ಬಿಡುವಿಲ್ಲದ ಕಾರಣ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾ ಆಗುವದಿಲ್ಲ ಎಂದು ಹೇಳಿಬಿಟ್ಟರು. ಮುಂದೆ ಯಾರನ್ನು ಹುಡುಕುವದು ಎಂದು ಯೋಚಿಸುತ್ತಿರವಾಗಲೇ ನನಗೆ ತಟ್ಟನೆ ಹೊಳೆದಿದ್ದು ಸಂಧ್ಯಾರಾಣಿ ಮೇಡಮ್ ಅವರ ಹೆಸರು, ಆಗ ಅವರುಅವಧಿ ಉಪಸಂಪಾದಕಿಯಾಗಿದ್ದರು ಮತ್ತು ಅದರಲ್ಲಿ ಪ್ರಕಟವಾಗುವ ಎಲ್ಲ ಅಂಕಣಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಎಲ್ಲವನ್ನೂ ಪರಾಮರ್ಶಿಸಿ ಪ್ರಕಟಿಸುವ ಹೊಣೆ ಅವರ ಮೇಲಿದ್ದ ಕಾರಣಕ್ಕಾಗಿ ಅವರು ಹೆಚ್ಚು-ಕಮ್ಮಿ ನನ್ನ ಮೊದಲ ಓದುಗರಾಗಿದ್ದರು. ಹಾಗಾಗಿ ಅವರೇ ಸೂಕ್ತವಾದ ವ್ಯಕ್ತಿ ಎಂದು ನಾನವರಿಗೆ ಫೋನಾಯಿಸಿ ಮುನ್ನುಡಿ ಬರೆದುಕೊಡಿ ಎಂದು ಕೇಳಿಕೊಂಡಾಗ ಅವರೂ ಕೂಡ ಆಗತಾನೆ ಹೊಸ ಪ್ರಾಜೆಕ್ಟ್ ವೊಂದರಲ್ಲಿ ತೊಡಗಿಕೊಂಡಿದ್ದರಿಂದ ಸಧ್ಯಕ್ಕೆ ಆಗುವದಿಲ್ಲವೆಂದೂ ಮತ್ತು ಬರೆಯುವದಕ್ಕೆ ತಾವು ಸೂಕ್ತ ವ್ಯಕ್ತಿ ಅಲ್ಲವೆಂದು ಹೇಳುತ್ತಾ ನಯವಾಗಿ ನಿರಾಕರಿಸಿದರು. ನಾನು ಬಿಡದೆ ಅವರನ್ನು ಒತ್ತಾಯಿಸುತ್ತಾ ಒಂದು ಹೆಣ್ಣಾಗಿ ನೀವು ಗಡಾಫಿಯನ್ನು ಮತ್ತು ಲಿಬಿಯಾವನ್ನು ಹೇಗೆ ನೋಡಬಯಸುತ್ತೀರಿ?’ ಎಂಬುದನ್ನು ಬರೆದುಕೊಡಿ ಎಂದು ಗಂಟುಬಿದ್ದೆ. ಕೊನೆಗೆ ನನ್ನ ಒತ್ತಾಯಕ್ಕೆ ಮತ್ತು ಪ್ರೀತಿಗೆ ಮಣಿದು ಬರೆಯಲು ಒಪ್ಪಿಕೊಂಡರು. ಅದಕ್ಕಾಗಿ ನಾನವರಿಗೆ ಚಿರಋಣಿ.

    ಸಂಧ್ಯಾರಾಣಿಯವರು ಮುನ್ನುಡಿ ಬರೆಯುತ್ತಾ ಉದಯ್ ಇಟಗಿಯವರ ಪುಸ್ತಕ ಓದುವಾಗ ನನ್ನ ಮನಸ್ಸಿನಲ್ಲಿದ್ದ ಇನ್ನೊಂದು ದೇಶ ಕ್ಯೂಬಾ. ಒಂದು ಅಧಿವೇಶನದಲ್ಲಿ ಭಾಗವಹಿಸಲೆಂದು ಕ್ಯೂಬಾಕ್ಕೆ ಹೋಗಿದ್ದ ಹಿರಿಯ ಮಾಧ್ಯಮ ತಜ್ಞರಾದ ಜಿ.ಎನ್.ಮೋಹನ್ ಅವರು ಕ್ಯೂಬಾವನ್ನು ನೆಪವಾಗಿಟ್ಟುಕೊಂಡು ಇಡೀ ಲ್ಯಾಟಿನ್ ಅಮೆರಿಕಾ ದೇಶಗಳನ್ನು ನಿಯಂತ್ರಿಸಲು ದಾಳ ಉರುಳಿಸುವ ಅಮೆರಿಕಾದ ಹುನ್ನಾರುಗಳನ್ನು ಬಿಡಿಸಿಡುತ್ತಾ ಹೋಗುತ್ತಾರೆ. ಉದಯ್ ಅವರು ಬರೆದ ಪುಸ್ತಕದ ಹಲವಾರು ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ನನಗೆ ಜಿ.ಎನ್.ಮೋಹನ್ ಅವರನನ್ನೊಳಗಿನ ಹಾಡು ಕ್ಯೂಬಾನೆರವಾಯಿತುಎಂದು ಆರಂಭದಲ್ಲಿಯೇ ಹೇಳುತ್ತಾರೆ. ಅವರ ಮಾತು ಇದೀಗ ನಾನು ನನ್ನೊಳಗಿನ ಹಾಡು ಕ್ಯೂಬಾಪುಸ್ತಕವನ್ನು ಓದಿದ ಮೇಲೆ ನನಗೆ ಮತ್ತೊಮ್ಮೆ ಮನದಟ್ಟಾಯಿತು. ಅದಕ್ಕೆ ಪುಷ್ಟಿಕರಣವೆಂಬಂತೆ ನಾನು ಲಿಬಿಯಾದಲ್ಲಿದ್ದುಕೊಂಡೇ ಅಂಕಣ ಬರೆಯುವಾಗ ಅಲ್ಲಿನ ಬಹಳಷ್ಟು ನಾಗರಿಕರನ್ನು ಭೇಟಿ ಮಾಡಿದ್ದೆ. ಗಡಾಫಿ ಕಾಲದ ಲಿಬಿಯಾ ಹೇಗಿತ್ತು? ಮತ್ತು ಆತನ ನಂತರ ಅದು ಹೇಗಾಯಿತು? ಎನ್ನುವದನ್ನು ಪ್ರತ್ಯಕ್ಷ ಕಣ್ಣಾರೆ ಕಂಡಿದ್ದರೂ ಕ್ರಾಂತಿಯ ನಂತರ ಅಲ್ಲಿಯ ಜನತೆ ಗಡಾಫಿ ಬಗ್ಗೆ ಏನು ಹೇಳುತ್ತಾರೆ ಎನ್ನುವದರ ಆಧಾರದ ಮೇಲೆ ನನಗೆ ಆತನನ್ನು ಹಿಡಿದಿಡುವದು ಮುಖ್ಯವಾಗಿತ್ತು. ಹಾಗೆಂದೇ ನಾನು ಲಿಬಿಯಾದ ನಾಲ್ಕೂ ಮೂಲೆಗಳನ್ನು ಓಡಾಡಿ ರಹಸ್ಯವಾಗಿ ಆತನ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದೆ. ಸಮಯದಲ್ಲಿ ಬಹಳಷ್ಟು ಲಿಬಿಯಾದ ಜನತೆ ಮೊಹಮ್ಮದ್ ಗಡಾಫಿಯನ್ನು ಚೆಗುವಾರನಿಗೆ ಹೋಲಿಸುತ್ತಾ ಅವನನ್ನು ಆಫ್ರಿಕಾದ ಚೆಗುವಾರನೆಂದು ಕರೆಯಬಹುದೆಂದು ಹೆಮ್ಮೆಯಿಂದ ಹೇಳಿದ್ದರು. ಮಾತ್ರವಲ್ಲ ಮುಂದುವರಿದು ಆತನನ್ನು ಕ್ಯೂಬಾದ ಹರಿಕಾರ ಫೀಡೆಲ್ ಕ್ಯಾಸ್ಟ್ರೋಗೂ ಹೋಲಿಸಿದ್ದರು. ಆದರೆ ನನಗೆ ಗಡಾಫಿಯನ್ನು ಯಾರಿಗೂ ಹೋಲಿಸದೇ ಅವನನ್ನು ಅವನಿರುವಂತೆ, ಜನರ ಮನದಲ್ಲಿ ರೂಪಿತಗೊಂಡಂತೆ ಹಿಡಿದಿಡುವದು ಮುಖ್ಯವಾಗಿತ್ತು. ಪರಿಣಾಮವಾಗಿ ನನ್ನ ಪುಸ್ತಕದೊಳಗಿನ ಗಡಾಫಿ ರೂಪಿತಗೊಂಡಿದ್ದು ಹೀಗೆ.

    ಲೇಖನವನ್ನು ಮುಂದುವರಿಸುವ ಮೊದಲು ನಾನು ನಿಮಗೊಂದು ಸತ್ಯವನ್ನು ಹೇಳಿಬಿಡುತ್ತೇನೆ. ನಾನು 2007 ರಲ್ಲಿ ಲಿಬಿಯಾಕ್ಕೆ ಬಂದಿಳಿದಾಗ ನಮ್ಮ ಕಾಲೇಜಿನಲ್ಲಿ ನನ್ನೊಟ್ಟಿಗೆ ನಾಲ್ಕು ಜನ ಇರಾಕಿ ಪ್ರೊಫೆಸರ್ ಗಳು ಕೆಲಸ ಮಾಡುತ್ತಿದ್ದರು. ನಾನವರನ್ನು ಕಂಡೊಡನೆ ”Was Saddam Hussein really so cruel? Did he really exploit you? How did you tolerate his atrocities?” ಎಂದೆಲ್ಲಾ ಅವರನ್ನು ಕೇಳಿದಾಗ ಅವರಲ್ಲಿ ಒಂದಿಬ್ಬರು ಸಪ್ಪೆ ಮುಖ ಮಾಡಿದರೆ ಇನ್ನೊಬ್ಬರು ಅತ್ತೇ ಬಿಟ್ಟರು. ನಾನು ಗಾಭರಿ ಬಿದ್ದು ಯಾಕೆ ಏನಾಯಿತೆಂದು ಕೇಳಿದಾಗ ಅವರೆಲ್ಲಾ ಅದು ಅಮೆರಿಕಾ ಹೇಳಿದ ಸುಳ್ಳು ಸುದ್ದಿ, ಇರಾಕಿನಲ್ಲಿದ್ದ ತೈಲ ಸಂಪತ್ತನ್ನು ದೋಚಲು ಅಮೆರಿಕಾ ಏನೆಲ್ಲಾ ಹುನ್ನಾರಗಳನ್ನು ಮಾಡಿತು ಮತ್ತು ಸದ್ದಾಂ ಹುಸೇನ್ ಎಷ್ಟೆಲ್ಲಾ ಒಳ್ಳೆಯವನಾಗಿದ್ದ ಎಂಬುವದನ್ನು ಸೂಚ್ಯವಾಗಿ ಹೇಳಿದ್ದರು. ಅಷ್ಟೇ ಅಲ್ಲದೇ ಸಧ್ಯದಲ್ಲಿಯೇ ಲಿಬಿಯಾಕ್ಕೂ ಕೂಡ ಗತಿ ಬರಬಹುದೆಂದು ಹೇಳಿದಾಗ ನಾನವರನ್ನು ನಂಬಿರಲಿಲ್ಲ. ಆದರೆ 2011 ರಲ್ಲಿ ಲಿಬಿಯಾದಲ್ಲಿ ಕ್ರಾಂತಿ ಆರಂಭವಾದಾಗ ಜಗತ್ತಿನ ಬಹುತೇಕ ಮಾಧ್ಯಮಗಳು ಗಡಾಫಿ ಮತ್ತು ಆತನ ಲಿಬಿಯಾದ ಬಗ್ಗೆ ವ್ಯತಿರಿಕ್ತವಾದ ಚಿತ್ರಣಗಳನ್ನು ತೋರಿಸುವಾಗ ಅವರ ಮಾತುಗಳು ವಾಸ್ತವದಲ್ಲಿ ಅರಿವಾಗಿ ಅಮೆರಿಕಾ ತನ್ನ ಬೇಳೆ ಬೇಯಿಸಿಕೊಳ್ಳುವದಕ್ಕಾಗಿ ಏನೆಲ್ಲಾ ಮಾಡುತ್ತದೆ ಎಂದು ತಿಳಿದು ಭಾರೀ ನೋವಾಗಿತ್ತು

    ಅರಬ್ ವಸಂತ” 2010 ರಲ್ಲಿ ಟ್ಯುನಿಶಿಯಾದಲ್ಲಿ ಆರಂಭವಾಗಿ ಈಜಿಪ್ಟ್, ಸಿರಿಯಾದ ಮೂಲಕ ಹಾದು ಕೊನೆಗೆ 2011 ರಲ್ಲಿ ಲಿಬಿಯಾದಲ್ಲಿ ಮುಕ್ತಾಯಗೊಂಡಾಗ ಅದರ ಹಿಂದೆ ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳ ಕೈವಾಡ ಎಷ್ಟಿತ್ತು ಎಂಬುದು ಬಲ್ಲವರಿಗೆ ಮಾತ್ರ ಗೊತ್ತಿತ್ತು. ಎಲ್ಲ ದೇಶಗಳಲ್ಲಿ ತಮಗೆ ಬೇಡವಾಗಿದ್ದ ನಾಯಕರನ್ನು ಕಿತ್ತೆಸೆದು ತನಗೆ ಬೇಕಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವಲ್ಲಿ ಅಂತೂ ಅಮೆರಿಕಾ ಯಶಸ್ವಿಯಾಗಿತ್ತು. ನನಗೆ ಅಮೆರಿಕಾದ ಹುನ್ನಾರಗಳನ್ನು ಟ್ಯುನಿಶಿಯಾದ ಓರ್ವ ನಾಗರಿಕನೊಬ್ಬ ಒಮ್ಮೆ ನಾನು ಕೈರೋದಿಂದ ಟ್ಯುನಿಶಿಯಾದ ಮೂಲಕ ಬೆಂಗಾಜಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಪ್ರಯಾಣದುದ್ದಕ್ಕೂ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದನು; ಹಾಗೆ ನೋಡಿದರೆ ಟ್ಯುನೀಶಿಯಾದಲ್ಲಿ ಕ್ರಾಂತಿಯೊಂದರ ಅವಶ್ಯಕತೆಯೇ ಇರಲಿಲ್ಲ. ಅಲ್ಲಿಯ ದೊರೆ ಆಡಳಿತವನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದ. ಆದರೆ ಅಮೆರಿಕಾದವರಿಗೆ ಲಿಬಿಯಾದೊಳಕ್ಕೆ ನುಗ್ಗಲು ಒಂದು ನೆಪ ಮತ್ತು ಸಮರ್ಥನೆ ಬೇಕಿತ್ತು. ಹಾಗಾಗಿ ಪಕ್ಕದ ರಾಷ್ಟ್ರವಾದ ಟ್ಯುನಿಶಿಯಾವನ್ನು ದಾಳವಾಗಿ ಉಪಯೋಗಿಸಿಕೊಂಡು ಲಿಬಿಯಾದೊಳಕ್ಕೂ ನುಗ್ಗಿಬಿಟ್ಟರು. ನೇರವಾಗಿ ನುಗ್ಗುವ ಬದಲು ಅಮೆರಿಕಾದವರು ತಂತ್ರವನ್ನು ಬಳಸಿದರು. ಕೇಳಿ ನಾನು ದಿಗ್ಭ್ರಾಂತನಾಗಿದ್ದೆ.

    ನಾನು ಮೋಹನ್ ಅವರನನ್ನೊಳಗಿನ ಹಾಡು ಕ್ಯೂಬಾಓದಿದ ಮೇಲೆ ಮೇಲಿನ ಎಲ್ಲ ಘಟನೆಗಳು ನನಗೆ ಮತ್ತೊಮ್ಮೆ, ಮಗದೊಮ್ಮೆ ಮನದಟ್ಟಾದವು. ಅಮೆರಿಕಾದ ಕುತಂತ್ರಕ್ಕೆ, ಅದರ ಸ್ವಾರ್ಥಕ್ಕೆ ಬಲಿಯಾದ ತೃತಿಯ ಜಗತ್ತಿನ ರಾಷ್ಟ್ರಗಳು ಎಷ್ಟೊಂದಿಲ್ಲ? ಪ್ರತಿ ಸಾರಿ ಅಮೆರಿಕಾ ರಾಷ್ಟ್ರಗಳಲ್ಲಿ ತಮಗೆ ಬೇಕಾದ ಹೊಸದೊಂದು ಸರಕಾರವನ್ನು ಸ್ಥಾಪಿಸಿದಾಗ ಹೊರಜಗತ್ತಿಗೆ ಗೊತ್ತಾಗುವ ಸತ್ಯವೇ ಬೇರೆ, ಒಳಜಗತ್ತಿನ್ನಲಿರುವ ಸತ್ಯವೇ ಬೇರೆ. ಜಗತ್ತಿನ ಅತ್ಯಂತ ಹೈಟೆಕ್ ಆದ ಎಪಿ (ಅಸೋಸಿಯೇಟ್ ಪ್ರೆಸ್) ಸುದ್ದಿ ಸಂಸ್ಥೆಯು ಅಮೆರಿಕಾದವರ ಕೈಯಲ್ಲಿರಬೇಕಾದರೆ ತಮಗೆ ಬೇಕಾದಂತೆ ಸುದ್ದಿಯನ್ನು ತಿರುಚಿ ಇಡಿ ಜಗತ್ತಿಗೆ ಕಾಮಾಲೆ ಕಣ್ಣು ತೊಡಿಸುವದು ದೇಶಕ್ಕೆ ಕಷ್ಟದ ಕೇಲಸವೇನಲ್ಲ. ಕೆಲಸವನ್ನು ಅದು ಮುಂಚಿನಿಂದಲೂ ವ್ಯವಸ್ತಿತವಾಗಿ ಮಾಡಿಕೊಂಡು ಬಂದಿರುವದರಿಂದ ಇತಿಹಾಸದಲ್ಲಿ ಎಷ್ಟೋ ಸತ್ಯಗಳು ಹಾಗ್ಹಾಗೆ ಹೂತುಹೋಗಿವೆ ಮತ್ತು ಅಮೆರಿಕಾದಿಂದಾದ ಅನ್ಯಾಯಗಳು ಕೂಡಾ ಮುಚ್ಚಿಹೋಗಿವೆ, ಹಿನ್ನೆಲೆಯಲ್ಲಿ ಮೋಹನ್ ಅವರ ಪುಸ್ತಕನನ್ನೊಳಗಿನ ಹಾಡು ಕ್ಯೂಬಾಅಮೆರಿಕಾ, ಕ್ಯೂಬಾದಲ್ಲಿ ನಡೆಸಿದ ಕುತಂತ್ರಗಳು, ಫೀಡೆಲ್ ಕ್ಯಾಸ್ಟ್ರೋಗೆ ಕೊಟ್ಟ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ ಹೋಗುತ್ತದೆ.

    ಪುಸ್ತಕವನ್ನು ಓದುವಾಗ ಗದಾಫಿಯ ಲಿಬಿಯಾ ಮತ್ತು ಫೀಡೆಲ್ ಕ್ಯಾಸ್ಟ್ರೋರವರ ಕ್ಯೂಬಾ ಒಟ್ಟೊಟ್ಟಿಗೆ ನನ್ನ ಕಣ್ಮುಂದೆ ಸಾಗುತ್ತಿದ್ದವು. ಮುಖ್ಯವಾಗಿ ಇಬ್ಬರೂ ನಾಯಕರುಗಳಲ್ಲಿ ಸಾಕಷ್ಟು ಸಾಮ್ಯತೆಗಳಿರುವದು ಕಂಡು ಬಂತು. ಇಬ್ಬರೂ ರಾಜಕೀಯವಾಗಿ ಬಹಳಷ್ಟು ಸಂವೇದನಾಶೀಲರಾಗಿದ್ದರು. ಇಬ್ಬರೂ ತಂತಮ್ಮ ದೇಶದ ಜನಕ್ಕಾಗಿ ಬಡಿದಾಡಿದರು. ಇಬ್ಬರೂ ತಮ್ಮ ದೇಶದ ಜನತೆಗಾಗಿ ಒಂದು ಘನತೆಯನ್ನು ತಂದುಕೊಟ್ಟರು. ಇಬ್ಬರೂ ಹಸಿದವರಿಗೆ ಅನ್ನ ನೀಡಿದವರು, ಬಾಯಾರಿದವರಿಗೆ ನೀರೂಣಿಸಿದರು, ಬೆತ್ತಲೆ ನಿಂತವರಿಗೆ ಬಟ್ಟೆ ನೀಡಿದವರು, ಸೂರಿಲ್ಲದವರಿಗೆ ಆಶ್ರಯ ನೀಡಿದವರು, ವಿಧವೆಯರಿಗೆ, ರೋಗಿಗಳಿಗೆ ಆರೋಗ್ಯ ನೀಡಿದರು. ಇಬ್ಬರೂ ಅಮೆರಿಕಾದವರಿಗೆ ಸೆಡ್ಡು ಹೊಡೆದು ನಿಂತರು. ಇಬ್ಬರೂ ಅಮೆರಿಕಾದ ಸಾಮ್ರಾಜ್ಯಶಾಹಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು ಮತ್ತು ಅದನ್ನು ತಂತಮ್ಮ ಜನರಲ್ಲಿ ಬಲವಾಗಿ ಬಿತ್ತಿದರು, ಇದು ಎಷ್ಟು ಬಲವಾಗಿತ್ತೆಂದರೆ ಮೋಹನ್ ಸರ್ ಹೇಳುವಂತೆ ಕ್ಯೂಬನ್ನರು ಸದಾ ಅಮೆರಿಕಾದ ಮೂತಿಗೆ ಗುದ್ದಲು ತುದಿಗಾಲಲ್ಲಿ ನಿಂತಿದ್ದರು. ಅಂತಯೇ ಲಿಬಿಯಾದಲ್ಲಿ ಹುಟ್ಟುವ ಪ್ರತಿಯೊಂದು ಮಗುವೂ ಅಮೆರಿಕನ್ನರ ದ್ವೇಷಿಯಾಗಿಯೇ ಹುಟ್ಟುತ್ತಿತ್ತು. ಇದೇ ಕಾರಣಕ್ಕಾಗಿ ಇಬ್ಬರೂ ಇನ್ನಿಲ್ಲದ ಕಷ್ಟವನ್ನು ಅನುಭವಿಸಿದರು. ಆದರೂ ಅವುಗಳನ್ನೆಲ್ಲಾ ಮೆಟ್ಟಿ ನಿಂತು ಇಬ್ಬರೂ ಹೊಸ ನಾಡೊಂದನ್ನು ಕಟ್ಟಿದರು. ಇಬ್ಬರೂ ಮಾನವಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ. ಕೃಷಿ-ಕೈಗಾರಿಕೆಗಳಿಗೆ ಒತ್ತು ಕೊಟ್ಟರು. ಇಬ್ಬರೂ ವಿಶ್ಚಸಂಸ್ಥೆಯಲ್ಲಿ ಅಮೆರಿಕಾದವರಿಂದ ಅವಮಾನಕ್ಕಳಗಾದರು. ಇಬ್ಬರೂ ಅನೇಕ ವರ್ಷಗಳ ಕಾಲ ಅಮಿರಿಕಾದಿಂದ ನಿರ್ಭಂದಕ್ಕೊಳಗಾದರು. ಮತ್ತು ನಾನಾ ಕಾರಣಗಳಿಗಾಗಿ ಅನೇಕ ಬಾರಿ ಅಮೆರಿಕಾದವರಿಂದ ಹತ್ಯೆಯ ಪ್ರಯತ್ನಕ್ಕೊಳಪಟ್ಟವರು. ಅಮೆರಿಕಾ ಕ್ಯಾಸ್ಟ್ರೋರವರನ್ನುಭೂತಎಂದು ಕರೆದರೆ ಗಡಾಫಿಯನ್ನುಹುಚ್ಚು ನಾಯಿಎಂದು ಕರೆಯಿತು.

    ಬೇರೆಯವರಿಗೆಯುದ್ಧಎಂಬ ಮಾತು ಅಮೆರಿಕಾದ ಬಾಯಲ್ಲಿಶಾಂತಿ ಕಾರ್ಯಾಚರಣೆ’, ಮಾನವೀಯ ಸಂಬಂಧ ಬೆಳೆಸುವ ಪ್ರಯತ್ನ ಎಂದು ಹೇಳುತ್ತಲೇ ಅಮೆರಿಕಾ ಇರಾಕ್ ಮತ್ತು ಲಿಬಿಯಾದೊಳಕ್ಕೆ ನುಗ್ಗಿ ಅಲ್ಲಿನ ಶ್ರೇಷ್ಟ ಸರ್ವಾಧಿಕಾರಿಗಳನ್ನು ಕಿತ್ತೆಸೆದು ಅಲ್ಲಿನ ತೈಲ ಸಂಪತ್ತನ್ನು ಕೊಳ್ಳೆ ಹೊಡೆದಿದ್ದೇಸ್ಟೋ? ಅಮೆರಿಕಾದೊಂದಿಗೆ ವ್ಯವಹರಿಸುವ ದೇಶಗಳು ಕ್ಯೂಬಾದೊಡನೆ ಸಂಬಂಧ ಬೆಳೆಸುವದನ್ನು ಅಮೆರಿಕ ಇಚ್ಚಿಸುವದಿಲ್ಲ ಎನ್ನುವ ಮೋಹನ್ ಸರ್ ಅವರ ಮಾತು ಕ್ಯೂಬಾದಲ್ಲಿ ಎಷ್ಟು ಸತ್ಯವಿತ್ತೋ ಅಷ್ಟೇ ಸತ್ಯ ಲಿಬಿಯಾದಲ್ಲಿ ಕೂಡಾ ಇತ್ತು.  ನನಗೆ ಇನ್ನೊಂದು ಮುಖ್ಯ ಅಂಶ ಕಂಡು ಬಂದುದೇನೆಂದರೆ ಎರಡೂ ದೇಶಗಳು ಸಮಾಜವಾದದಲ್ಲಿ ನಂಬಿಕೆಯಿಟ್ಟು ಅಕ್ಷರಶಃ ಅದನ್ನು ಜಾರಿಗೆ ತಂದರು. ಎರಡೂ ದೇಶಗಳಲ್ಲಿನ ಅಲ್ಲಿನ ರಾಜಕೀಯ ನಡೆ ಒಂದೇ ತೆರನಾಗಿತ್ತು. ಕ್ಯೂಬಾದಲ್ಲೂ ಮತ್ತು ಲಿಬಿಯಾದಲ್ಲಿ ಚುನಾವಣಾ ಪ್ರಕ್ರಿಯೆ ಹೆಚ್ಚು ಕಮ್ಮಿ ಒಂದೇ ತೆರ ಇರುವಂಥದ್ದು. ಮುಕ್ತ ಮತದಾನದ ಮೂಲಕ ಅಬ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು. ಕ್ಯೂಬಾದಲ್ಲಿರುವಂತೆಯೇ ಲಿಬಿಯಾದಲ್ಲಿಯೂ ಸಹ ರಾಜಕೀಯ ವ್ಯಕ್ತಿಗಳು ಜನರಿಗೆ ಅತಿ ಸುಲಭವಾಗಿ ಸಿಗುತ್ತಿದ್ದರು, ಸಾಮಾನ್ಯ ಜನರಲ್ಲಿ ತಾವೂ ಸಾಮಾನ್ಯ ಜನರಾಗಿ ಬದುಕುತ್ತಿದ್ದರು. ಆಯ್ಕೆಯಾದ ಪ್ರತಿನಿಧಿಗಳೂ ಅಷ್ಟೇ. ಕಾರು, ಬಂಗಲೆ, ಮತ್ತೆ ಐದು ವರ್ಷಕ್ಕೆ ಕೈ ಜೋಡಿಸುವ ಯಾವ ಪದ್ಧತಿಯೂ ಇರಲಿಲ್ಲ  ನಾನು ಕೆಲಸ ಮಾಡುವ ಘಾತ್ಪ್ರಾಂತ್ಯದ ಕಾರ್ಮಿಕ ಮಂತ್ರಿಯೊಬ್ಬರು ನನ್ನ ಸಹೋದ್ಯೋಗಿಯಾಗಿದ್ದರು. ಅವರು ಮಂತ್ರಿ ಎಂಬ ಕಾರಣಕ್ಕೆ ಅವರಿಗೆ ಪ್ರತ್ಯೇಕ ಸರಕಾರಿ ಕಾರ್ ಆಗಲಿ, ಬೇರೆ ಸೌಲತ್ತುಗಳಾಗಲಿ ಇರಲಿಲ್ಲ. ತಮ್ಮದೇ ಸ್ವಂತ ಕಾರಿನಲ್ಲಿ ಯಾವುದೇ ಸೆಕ್ಯೂರಿಟಿ, ಎಸ್ಕಾರ್ಟ್ ಇಲ್ಲದೆ ನಮ್ಮ ಕಾಲೇಜಿಗೆ ಬಂದು ಪಾಠ ಮಾಡಿಹೋಗುತ್ತಿದ್ದರು. ಬ್ಯಾಂಕುಗಳಲ್ಲಿ ಮತ್ತು ಸರಕಾರಿ ಕಛೇರಿಗಳಲ್ಲೂ ಅಷ್ಟೆ, ಅವರಿಗೆ ಯಾವುದೇ ವಿಶೇಷ ರಿಯಾಯಿತಿ ತೋರಿಸುತ್ತಿರಲಿಲ್ಲ. ಎಲ್ಲರಂತೆ ಅವರೂ ಕೂಡ ಕ್ಯೂನಲ್ಲಿ ನಿಂತಿಕೊಂಡು ತಮ್ಮ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದರು. ಜೊತೆಗೆ ಅಲ್ಲಿನ ಗವರ್ನರ್ ಗಳ, ಮಂತ್ರಿಗಳು ಮತ್ತು ರಾಜಕೀಯ ಪ್ರತಿನಿಧಿಗಳು ಸಾಮಾನ್ಯರೊಳಗೊಬ್ಬರಾಗಿ ಬದುಕುತ್ತಿದ್ದರು

    ಗಡಾಫಿ ಮತ್ತು ಕ್ಯಾಸ್ಟ್ರೋ ಅವರ ಗೆಳೆತನ ಸಾಯುವವರೆಗೂ ಗಟ್ಟಿಯಾಗಿತ್ತು. 1977 ವಸಂತ ಋತುವಿನ ಒಂದು ದಿನ ಫೀಡೆಲ್ ಕ್ಯಾಸ್ಟ್ರೋ ಅವರು ಲಿಬಿಯಾಕ್ಕೆ ಬಂದಿಳಿದಾಗ ಗಡಾಫಿ ಅವರಿಗೆ ರತ್ನಗಂಬಳಿ ಸ್ವಾಗತವನ್ನು ಕೋರಿದ್ದ. ಮಾಧ್ಯಮದ ಕ್ಯಾಮೆರಾಗಳ ಮುಂದೆ ಒಂದು ಕ್ಷಣ ಇಬ್ಬರೂ ಒಬ್ಬರೊನ್ನೊಬ್ಬರು ನೋಡಿಕೊಂಡು ತಮ್ಮ ನಡುವಿನ ಸಾಮ್ಯತೆಗಳಿಗಾಗಿ ಮುಗಳ್ನಕ್ಕಿದ್ದರು. ನಂತರ ಇಬ್ಬರೂ ಬಾಗಿಲು ಮುಚ್ಚಿದ ಕೋಣೆಯೊಂದರಲ್ಲಿ ಕುಳಿತು ಲಿಬಿಯಾ ಮತ್ತು ಕ್ಯೂಬಾದ ಮುಂದಿನ ಮೂವತ್ತು ವರ್ಷಗಳ ಸಂಬಂಧದ ಒಪ್ಪಂದಕ್ಕೆ ಭದ್ರ ಬುನಾದಿಯನ್ನು ಹಾಕಿದ್ದರು. ಮುಂದೆ ಅಂದರೆ 1980 ರಲ್ಲಿ ಕ್ಯೂಬಾ ಅಮೆರಿಕಾದವರ ದಾಳಿಗೆ ತುತ್ತಾದಾಗ ಗಡಾಫಿ, ಫೀಡೆಲ್ ಕ್ಯಾಸ್ಟ್ರೋ ಅವರಿಗೆ ಸಹಾಯ ಹಸ್ತವನ್ನು ನೀಡಿದ್ದ. ಕ್ಯೂಬಾದಲ್ಲಿ ಕ್ಯಾಸ್ಟ್ರೋ ಅವರು ಎರಡನೇ ಕಮ್ಯೂನಿಷ್ಟ್ ಪಾರ್ಟಿ ಕಾಂಗ್ರೇಸಿನ ಸೆಕ್ರೇಟರಿಯಾದಾಗ ಗಡಾಫಿ ಅವರನ್ನು ಮನದುಂಬಿ ಹಾರೈಸಿದ್ದ. ಇಬ್ಬರೂ ತಂತಮ್ಮ ದೇಶಗಳನ್ನು ಬಹಳ ಬೇಗನೆ ಅಭಿವೃದ್ಧಿಗೊಳಿಸಿ ಜಗತ್ತಿನ ಭೂಪಟದಲ್ಲಿ ಮಿಂಚಿಸಿತೊಡಗಿದಾಗ ಅಮೆರಿಕಾದವರ ಕೆಂಗಣ್ಣಿಗೆ ಗುರಿಯಾದರು. ಕುಸ್ತಿ ಅಂಕಣದಲ್ಲಿ ಕ್ಯೂಬಾ ತಾನು ಸ್ಪರ್ಧಿ ಎಂದು ಘೋಷಿಸಿದಾಗ ಅಮೆರಿಕದ ಸಿಟ್ಟು ನೆತ್ತಿಗೇರಿತು. ಅಮೆರಿಕಾ ಕ್ಯೂಬಾವನ್ನು ಏಡ್ಸ್ ನಗರವೆಂದು ಅಪಪ್ರಚಾರ ಮಾಡಿತು, ಅತ್ತ ಗಡಾಫಿ ಲಿಬಿಯಾದಲ್ಲಿ ಅಧಿಕಾರ ವಹಿಸಿಕೊಂಡ ತಕ್ಷಣ ಅಮೆರಿಕನ್ ಮಿಲಿಟರಿ ಪಡೆಯನ್ನು ಲಿಬಿಯಾದಿಂದ ಹೊರಗೆ ನೂಕಿದ ದಿನದಿಂದಲೇ ಆತನ ಬಗ್ಗೆಯೂ ಅಪಪ್ರಚಾರ ಶುರುವಾಯಿತು. ಮಾತ್ರವಲ್ಲ ತೈಲ ಕಂಪನಿಗಳ ಗುತ್ತಿಗೆಯನ್ನು ಮರುಪರಿಶೀಲಿಸಿ ಹತೋಟಿಗೆ ತೆಗೆದುಕೊಂಡಾದ ಮೇಲೆ ಅವರ ಆರ್ಥಿಕತೆಗೆ ಬಲವಾದ ಏಟು ಬಿತ್ತು, ಮುಂದೆ ಆತ ಪರಿಚಯಿಸಿದ ಹೊಸಹೊಸ ವಿದೇಶಿ ನಿಯಮಗಳು ಮತ್ತು ಆರ್ಥಿಕ ನೀತಿಗಳು ಅವರನ್ನು ಕಂಗೆಡುಸುತ್ತಾ ಹೋದಂತೆ ಗಡಾಫಿ ಬಗೆಗಿನ ಅಪ ಪ್ರಚಾರವೂ ಹೆಚ್ಚುತ್ತಾ ಹೋಯಿತು.

    ಇಬ್ಬರೂ ಹೋರಾಟಗಾರರೇ. ಇಬ್ಬರೂ ಅಮೆರಿಕಾದ ವಿರೋಧಿಗಳೇ. ಇಬ್ಬರೂ ಸಾಮ್ರಾಜ್ಯಶಾಹಿ ಧೋರಣೆಯನ್ನು ಖಂಡಿಸುತ್ತಲೇ ಸಮಾನತೆಯ ಸಿದ್ಧಾಂತಕ್ಕಾಗಿ ಹಪಹಪಿಸಿದವರು. ಅಗಾಧ ಕನಸುಗಳನ್ನು ಕಾಣುತ್ತಲೇ ತಮ್ಮ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದವರು. ಇಬ್ಬರೂ ನವಯುಗದ ಹರಿಕಾರರೇ. ಇಬ್ಬರೂ ಅಮೆರಿಕಾದ ದಾಳಿಗೆ ಹಲವು ಬಾರಿ ತುತ್ತಾದವರೇ. ಆದರೆ ಒಬ್ಬರು (ಫೀಡೆಲ್ ಕ್ಯಾಸ್ಟ್ರೋ) ಇವೆಲ್ಲವುಗಳಿಂದ ಪಾರಾಗಿ ಕೊನೆಯಲ್ಲಿ ಸಹಜ ಸಾವನ್ನು ಸತ್ತರೆ ಇನ್ನೊಬ್ಬರು (ಮೌಮರ್ ಗಡಾಫಿ) ಅಮೆರಿಕಾದ ಕುತಂತ್ರಕ್ಕೆ ಬಲಿಯಾದವರು. ಗಡಾಫಿ ಹತ್ಯೆಯನ್ನು ಕ್ಯಾಸ್ಟ್ರೋ ಅವರು ಮನುಷ್ಯ ಲೋಕದ ಒಂದು ದುರಂತ ಎಂದು ಹೇಳುತ್ತಾ ಇದು ಅಮೆರಿಕಾದ ಕೇಡಿನ ಪರಮಾವಧಿಯೆಂದು ತೀವ್ರವಾಗಿ ಖಂಡಿಸಿದ್ದರು. ಜೊತೆಗೆ ಲಿಬಿಯಾದಲ್ಲಿ ರಚಿತವಾಗುವ ಹೊಸ ಸರಕಾರವನ್ನು ತಾವು ಗುರುತಿಸುವದಿಲ್ಲ ಎಂದು ಹೇಳಿ ಕೂಡಲೇ ಲಿಬಿಯಾದಲ್ಲಿದ್ದ ತಮ್ಮ ರಾಯಭಾರ ಕಛೇರಿಯನ್ನು ವಾಪಾಸು ಕರೆಸಿಕೊಂಡಿದ್ದರು. ಇದು ಅವರು ಗಡಾಫಿ ಮೇಲೆ ಇಟ್ಟಿದ್ದ ವಿಶ್ವಾಸವನ್ನು ಸಾಬೀತುಪಡಿಸುತ್ತದೆ. ಅಮೆರಿಕಾ ಕೊಟ್ಟ ಕಷ್ಟಗಳಿಗೆ ಇಬ್ಬರೂ ಫಿನಿಕ್ಸ್ ಹಕ್ಕಿಯಂತೆ ಮತ್ತೆ ಮತ್ತೆ ಹುಟ್ಟಿಬಂದವರು. ಮತ್ತೆ ಮತ್ತೆ ಅವರಿಗೆ ಸಡ್ಡು ಹೊಡೆದು ನಿಂತರು. ದುರಂತವೆಂದರೆ ಅಮೆರಿಕಾದಿಂದಾಗಿ ಮಹಾನ್ ನಾಯಕರು ಪಟ್ಟ ಕಷ್ಟ ಎಲ್ಲಿಯೂ ಬಹಿರಂಗವಾಗುವದಿಲ್ಲ. ಬದಲಿಗೆ ಹೊರಜಗತ್ತಿಗೆ ಇವರು ಖಳನಾಯಕರೆಂಬಂತೆ ಬಿಂಬಿತರಾಗುತ್ತಾರೆ

    ಹಾಗಾಗಿ ನನಗೆ ಮತ್ತು ಮೋಹನ್ ಸರ್ ಅಂಥವರಿಗೆ ಗಡಾಫಿಯ ಲಿಬಿಯಾ ಮತ್ತು ಕ್ಯಾಸ್ಟ್ರೋರವರ ಕ್ಯೂಬಾ ನೋಡಿದಾಗಲೆಲ್ಲಾ ಸಹಜವಾಗಿ ಅವರ ಬಗ್ಗೆ ಹೆಮ್ಮೆಯ ಭಾವವೊಂದು ಮೂಡುತ್ತದೆ. ಮರುಕ್ಷಣವೇ ಅಮೆರಿಕಾದಿಂದಾಗಿ ಇವರಿಬ್ಬರು ಪಟ್ಟ ಕಷ್ಟವನ್ನು ನೋಡಿ ಕಣ್ಣೀರು ಬರುತ್ತದೆ. ಕಣ್ಣೀರು ಒಮ್ಮೊಮ್ಮೆ ನಮ್ಮ ಎದೆಯ ನೋವಾಗಿಯೂ ಕಾಡತೊಡಗುತ್ತದೆ. ಇದನ್ನೆಲ್ಲಾ ಅರ್ಥಮಾಡಿಕೊಳ್ಳಲು ಜನರು ಪೂರ್ವಾಗ್ರಹಪೀಡಿತರಾಗಿರಬಾರದು. ಇದಕ್ಕಿಂತ ಹೆಚ್ಚಾಗಿ ಜನರ ಹೃದಯದಲ್ಲಿ ಪ್ರೀತಿ ಇರಬೇಕು. ಉದಾರ ಮನೋಭಾವ ಇರಬೇಕು. ಪ್ರೀತಿ-ವಾತ್ಸಲ್ಯ ಇರುವ ಜನಕ್ಕೆ ಇವನ್ನೆಲ್ಲಾ ಅರ್ಥಮಾಡಿಸಬಹುದು. ಆದರೆ ಇಲ್ಲದವರಿಗೆ ಅರ್ಥ ಮಾಡಿಸುವದಾದರೂ ಹೇಗೆ?
    http://avadhimag.com/?p=227245


    -ಉದಯ್ ಇಟಗಿ