The Father
The man who walks along
With the load of a mountain
On his back
Is my Father, who looks all
Absorbed, serious, morose and stunned
As though he were
A still sculpture on the temple wall.
It's really difficult to become
A father
Whom the God felt as a bare need
For his creation to move on
As he scratched out
His image with chisels, mallets
And hammers.
All fathers love to bear
The pains of the simmering sand
The burns and scalds of a burning cauldron
But they never open their mouth
Nor do they shed tears.
Father is like a basket full
Of empathy and love,
Who stands like a scarecrow
Amid all wounds and cracks
To scare them away
His head raised high as ever.
All Alone
I have left behind
A slice of love
Deep inside a closed room
Which had clung onto
The last night's
Dense darkness.
But I still preserve the night's
Secret kisses, the nail marks,
Sweats and the aroma of
Dishevelled hair
Which like a river drifts across
My every artery and vein.
I searched for the past
Relationship - soft and tender
All alone
The sandalwood forests
The hollow of the shells
Yet, I could not find her smiles
Or even a wee bit temper.
Tonight
I shall take the night train
To go back to her
To return to her the heaps of thrills
And sensations
All the madness
All the jingles of her anklets.
She might wear a smile on her lips
Pretend to move away
From all my closeness
Yet, she will drive me into the dark room
Again.
The Paper Boat
It's a long time since
I had floated away ನಾನು
The paper boat down the stream
Of the rainwater that fell
From the thatched roof.
I have flung away my childhood
Adolescence, youth, and
Teachers' canemarks
The torn pieces of rough papers
From my schoolbag,
And the sticks that were
Hurled at the mango tree
Laden with fruits
In the midday sun.
Since there was no boatman
I killed a cricket
To take his place
In the heart of the paper boat.
Getting drenched in the truant rain
He went away, laughing, far, too far
Rowing the boat himself
Down the stream of the village street
Beyond our vision,
To the mouth of the water.
The paper boat was lost
In the village vortex
Maybe he fell in the love of water
In the mid-ocean.
Perhaps it will never return
Again like the age that never
Comes back once it passed
Like the clock's hands
On their reverse track.
The peanut pods, the chocolate
Covers, the coconut shells,
Mucks, the petals of palash flowers
Bodies of dead ants
Which my boat carried on its back.
Let it not return any more
I shall go away
To the deep and real sea
And search in its depth
The face of the alphabets
Scratched on the paper boat.
If in the fathomless sea
I happen to bump into my paper boat
I will tell the sea,
"Please give me back my paper boat
Return my chocolate game
If you can, take away all my wealth
My prowess, my ego
My dreams, my love, my hatred
My victories, my defeats
My greed, my profits."
O Sea! I know
You always give back
All that you take
Now please return
My paper boat, my empty hands.
….
Sushir Kumar Swain
ಅಪ್ಪ
ಬೆನ್ನ ಮೇಲೆ ಸದಾ ಬೆಟ್ಟದಷ್ಟು ಭಾರವನ್ನು
ಹೊತ್ತುಕೊಂಡು ನಡೆಯುವ ಮನುಷ್ಯನೇ ನನ್ನ ಅಪ್ಪ!
ದೇವಸ್ಥಾನದ ಗೋಡೆಯ ಮೇಲೆ ಕೆತ್ತಿದ ಶಿಲ್ಪಕಲಾಕೃತಿಯಂತೆ ಸದಾ ತಲ್ಲೀನ, ಗಂಭೀರ, ದಿಗ್ಭ್ರಮೆಗೊಂಡಂತೆ
ಕಾಣುವ ಮನುಷ್ಯನೇ ನನ್ನ ಅಪ್ಪ!!
ಅಪ್ಪನಾಗಿರುವದು ನಿಜವಾಗಿಯೂ ತುಂಬಾ ಕಷ್ಟ
ದೇವರು ಯಾರನ್ನು ಬರಿಯ ಅಗತ್ಯವೆಂದು ಭಾವಿಸಿದನೋ ಹಾಗೂ ಅವನ ಸೃಷ್ಟಿ ಮುಂದುವರಿಯಲು
ಅವನ ಸುತ್ತಿಗೆ, ಉಳಿಯನ್ನು ತೆಗೆದುಕೊಂಡು ಅವನ ಚಿತ್ರವನ್ನು ಕಡೆದಿಟ್ಟನಂತೆ
ಎಲ್ಲಾ ತಂದೆಯಂದಿರು ಕಷ್ಟಸಹಿಷ್ಣಿಗಳು
ತಳಮಳಿಸುವ ಮರಳಗಾಡುಗಳು
ಸುಡುಸುಡುವ ಅಗ್ನಿಕುಂಡಗಳು
ಆದರೆ ಅವರು ಎಂದಿಗೂ ತಮ್ಮ ನೋವುಗಳನ್ನು ಬಾಯಿ ಬಿಟ್ಟು ಹೇಳಿಕೊಳ್ಳುವದಿಲ್ಲ
ಕಣ್ಣೀರು ಸುರಿಸುವುದಿಲ್ಲ.
ತಂದೆ ಪರಾನುಭೂತಿ ಮತ್ತು ಪ್ರೀತಿಯ
ಪೂರ್ಣ ಬುಟ್ಟಿಯಿದ್ದಂತೆ,
ಹಾಗೂ ಎಲ್ಲಾ ಗಾಯಗಳು ಮತ್ತು ಬಿರುಕುಗಳ ಮಧ್ಯೆ
ಬೆದರುಬೊಂಬೆಯಂತೆ ನಿಲ್ಲುವವನು
ಎಂದಿನಂತೆ ಅವನು ತನ್ನ ತಲೆಯೆತ್ತಿ ನಿಂತು
ಎಲ್ಲಾ ಕಷ್ಟಗಳನ್ನು ಬೆದರಿಸಿ ಕಳಿಸುತ್ತಾನೆ
ಮೂಲ ಓರಿಯಾ: ಸುಶೀರ್ ಕುಮಾರ್ ಸ್ವೇನ್
ಕನ್ನದಕ್ಕೆ: ಉದಯ ಇಟಗಿ
ಒಬ್ಬಂಟಿಯಾಗಿ...
ಮುಚ್ಚಿದ ಕೋಣೆಯ ಒಳಗೆ
ಕೊನೆಯ ರಾತ್ರಿಯ
ದಟ್ಟವಾದ ಕತ್ತಲೆಗೆ
ಅಂಟಿಕೊಂಡಿದ್ದ
ಪ್ರೀತಿಯ ತುಣುಕೊಂದನ್ನು
ನಾನು ಹಿಂದೆ ಬಿಟ್ಟುಬಂದಿದ್ದೇನೆ
ಆದರೆ ಆ ರಾತ್ರಿಯಲ್ಲಿ ನಡೆದ ರಹಸ್ಯ ಚುಂಬನಗಳು, ಉಗುರು ಗುರುತುಗಳು,
ಬೆವರ ಹನಿಗಳು,
ಸುಖದ ನರಳಿಕೆಗಳು,
ಕೆದರಿದ ಕೂದಲುಗಳ ಸುವಾಸನೆ
ಹಾಗೂ ನದಿಯಂತೆ ಹರಿದುಹೋದ
ನನ್ನ ಪ್ರತಿ ಅಪಧಮನಿ ಮತ್ತು ರಕ್ತನಾಳಗಳು....
ಎಲ್ಲವೂ ಎಲ್ಲವನ್ನು ನಾನಿನ್ನೂ ಕಾಪಿಟ್ಟುಕೊಂಡಿದ್ದೇನೆ
ನಾನು ಹಿಂದಿನದನ್ನು ಹುಡುಕಿದೆ-
ಸಂಬಂಧ ಮತ್ತದರ ಮೃದುತ್ವ ಹಾಗೂ ಕೋಮಲತೆಯನ್ನು
ನಾನು ಏಕಾಂಗಿಯಾಗಿ
ಶ್ರೀಗಂಧದ ಕಾಡುಗಳನ್ನು
ಟೊಳ್ಳು ಚಿಪ್ಪುಗಳನ್ನು ಕಂಡುಹಿಡಿದೆ
ಆದರೂ ನನಗವಳ ನಗುವನ್ನು ಕಂಡುಹಿಡಿಯಲಾಗಲಿಲ್ಲ
ಹಾಗೂ ಅವಳ ಕೋಪವನ್ನು ಸಹ
ಈ ರಾತ್ರಿ
ನಾನು ರೈಲಿನಲ್ಲಿ ಹೋಗುತ್ತೇನೆ
ಅವಳ ಬಳಿಗೆ ಹಿಂತಿರುಗಲು
ರಾಶಿರಾಶಿ ರೋಚಕತೆಗಳನ್ನು,
ಸಂವೇದನೆಗಳನ್ನು,
ಹುಚ್ಚಾಟಗಳನ್ನು,
ಹಾಗೂ ಕಿಣಿಕಿಣಿಸುವ ಅವಳ ಕಾಲ್ಗೆಜ್ಜೆಗಳ ನಾದವನ್ನು ಹಿಂತಿರುಗಿಸಲು
ಅವಳು ತನ್ನ ತುಟಿಗಳಲ್ಲಿ ನಗು ಧರಿಸಿ
ನನ್ನ ಎಲ್ಲ ಸಾಮಿಪ್ಯದಿಂದ
ದೂರ ಸರಿಯುವಂತೆ ನಟಿಸಬಹುದು
ಆದರೆ ನನಗೆ ಖಾತ್ರಿಯಿದೆ
ಅವಳು ಮತ್ತೆ ನನ್ನನ್ನು ಕತ್ತಲಕೋಣೆಯೊಳಗೆ ತಳ್ಳಿ
ಮುದ್ದಾಡುತ್ತಾಳೆಂದು
ಮೂಲ ಓರಿಯಾ: ಸುಶೀರ್ ಕುಮಾರ್ ಸ್ವೇನ್
ಕನ್ನದಕ್ಕೆ: ಉದಯ ಇಟಗಿ
ಕಾಗದದ ದೋಣಿ
ಚಪ್ಪರದ ಮೇಲಿಂದ ಸುರಿದ ಮಳೆನೀರಿನ ಹಳ್ಳದಲ್ಲಿ ನಾನು ಕಾಗದದ ದೋಣಿಯನ್ನು ತೇಲಿಬಿಟ್ಟು ಬಹಳ ದಿನಗಳಾಯಿತು
ನಾನು ನನ್ನ ಬಾಲ್ಯ, ಕಿಶೋರತನ, ಯೌವನ, ಛಡಿಯೇಟಿನ ಗುರುತುಗಳು ಹಾಗೂ
ಹರಿದುಹೋದ ಹಾಳೆಗಳೆಲ್ಲವನ್ನೂ
ನನ್ನ ಸ್ಕೂಲು ಬ್ಯಾಗಿನಿಂದ ಕಿತ್ತೆಸೆದಿದ್ದೇನೆ
ಹಾಗೂ ನಡು ಮಧ್ಯಾಹ್ನ
ಹಣ್ಣು ಬಿಟ್ಟ
ಮಾವಿನ ಮರದಡಿ
ಎಸೆದ ಕೋಲುಗಳನ್ನು
ನಾವಿಕನಿರದಿದ್ದರಿಂದ
ಜೀರುಂಡೆಯನ್ನು ಕೊಂದು
ಅವನ ಜಾಗದಲ್ಲಿರಿಸಿದೆ
ಅವನು ಸುರಿವ ಬಿರುಮಳೆಯಲ್ಲಿ ನೆನೆಯುತ್ತಾ,
ನಗುತ್ತಾ ತನ್ನಷ್ಟಕ್ಕೆ ತಾನೇ ಹುಟ್ಟುಹಾಕುತ್ತಾ ದೂರದೂರಕ್ಕೆ ಹೋದನು
ಬೀದಿಯ ಕೊನೆಗೆ
ನಮ್ಮ ದೃಷ್ಟಿಯಿಂದಾಚೆಗೆ ಮತ್ತು ನೀರಿನೊಳಕ್ಕೆ
ನೀರಿನ ಸುಳಿಗೆ ಸಿಕ್ಕು
ಕಾಗದದ ದೋಣಿ ಕಳೆದುಹೋಯಿತು
ಬಹುಶಃ ಅವನು ಸಮುದ್ರಮಧ್ಯದಲ್ಲಿ
ನೀರಿನ ಪ್ರೀತಿಯ ಸುಳಿಗೆ ಸಿಕ್ಕಿರಬೇಕು!
ಬಹುಶಃ, ಅದು ಎಂದಿಗೂ ಹಿಂದಿರಿಗುವದಿಲ್ಲ
ಕಳೆದ ಕಾಲ ಮತ್ತೆ ಮರಳದಂತೆ
ಗಡಿಯಾರದ ಮುಳ್ಳುಗಳು ಮತ್ತೆ
ಹಿಂದೆ ಚಲಿಸದಂತೆ
ಕಡ್ಲೆಕಾಯಿ ಸಿಪ್ಪೆಗಳು, ಚಾಕೋಲೇಟ್ ಕವರ್ ಗಳು,
ತೆಂಗಿನಕಾಯಿ ಚಿಪ್ಪುಗಳು, ಕಪ್ಪೆಜೊಂಡುಗಳು,
ಮುತ್ತುಗದ ಪಕಳೆಗಳು,
ಸತ್ತ ಇರುವೆಗಳ ದೇಹಗಳು
ಹಾಗೂ ಇನ್ನೂ ಏನೇನೋ ಹೊತ್ತು ಸಾಗಿತ್ತು ನನ್ನ ಕಾಗದದ ದೋಣಿ
ಅದು ಮತ್ತೆ ಹಿಂದಿರುಗಿ ಬಾರದಿರಲಿ
ನಾನೇ ಮತ್ತೆ ಸಮುದ್ರದಾಳಕ್ಕಿಳಿದು
ಕಾಗದದ ದೋಣಿಯ ಮೇಲೆ ಬರೆದ
ವರ್ಣಾಕ್ಷರಗಳ ಮುಖವನ್ನು ಕಂಡುಬರುವೆ
ಆಳವರಿಯದ ಆ ಸಮುದ್ರದಲ್ಲಿ ನನ್ನ ಕಾಗದದ ದೋಣಿಯೇನಾದರೂ ಸಿಕ್ಕರೆ
ನಾನು ಆ ಸಮುದ್ರರಾಜನಿಗೆ ಹೇಳುವೆ
"ನನ್ನ ಕಾಗದದ ದೋಣಿಯನ್ನು ನನಗೆ ಹಿಂದಿರುಗಿಸು.
ಬದಲಿಗೆ ನನ್ನ ಸಂಪತ್ತು,
ನನ್ನ ಪರಾಕ್ರಮ, ನನ್ನ ಅಹಂ, ನನ್ನ ಕನಸುಗಳು,
ನನ್ನ ಪ್ರೀತಿ, ನನ್ನ ದ್ವೇಷ, ನನ್ನ ಸೋಲು,
ನನ್ನ ಗೆಲುವು, ನನ್ನ ದುರಾಸೆ, ನನ್ನ ಲಾಭಗಳು
ಎಲ್ಲ ಎಲ್ಲವನ್ನು ತೆಗೆದುಕೋ"
ಓ ಸಮುದ್ರ ರಾಜನೇ!
ನನಗೆ ಗೊತ್ತು
ಕಳೆದುಕೊಂಡಿದ್ದೆಲ್ಲವನ್ನು
ನೀನು ಮತ್ತೆ ಹಿದಿರುಗಿಸುತ್ತಿಯೆಂದು!
ಮೂಲ ಓರಿಯಾ: ಸುಶೀರ್ ಕುಮಾರ್ ಸ್ವೇನ್
ಕನ್ನದಕ್ಕೆ: ಉದಯ ಇಟಗಿ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ