ನಾನು ಪ್ರತಿದಿನ ಕನ್ನಡಿಯಲ್ಲಿ ನೋಡುತ್ತೇನೆ.
ನನ್ನ
ಕುಂದಿದ ಕಣ್ಣುಗಳು
ನನಗೆ
ಹೊಸದೇನನ್ನೂ ಹೇಳುವದಿಲ್ಲ.
ಅವೇ
ಕುಂದಿದ ಕಣ್ಣುಗಳು,
ಅವೇ
ಹಳೆಯ ಕಪ್ಪುಗಟ್ಟಿದ ಗೆರೆಗಳು
ಅವೇ
ತುಟಿಗಳು
ಅವೇ
ಹಲ್ಲುಗಳು
ಅದರ
ಮುಖದ ಮೇಲೆ,
ಅಲ್ಲಿ
ದೂರುವಂಥದ್ದುಏನೂ ಇಲ್ಲ.
ಸನ್ಯಾಸಿಯ
ಶಾಂತತೆ
ಸಹಾನುಭೂತಿಯ
ಕರುಣೆ
ಸಾವಿತ್ರಿಯ
ದೃಢ
ನಿಶ್ಚಯ ...
ಎಲ್ಲಾ,
ನನಗಾಗಿ,
ನಡುಗುವಂಥ
ತಂಗಾಳಿ
ಮಿಂಚಿನಂಥ ಪ್ರೀತಿ
ಹರಿಯುವ
ಹಾಲು -
ಸಿಹಿ ಅನುಭೂತಿಯಂಥ ದಯೆ-
ಗಡಿರೇಖೆಯ
ಗಾಳಿಯಂತೆ
ಚದರುವ ಆಲೋಚನೆಗಳು
ನಾನು
ಪ್ರತಿದಿನ ಕನ್ನಡಿಯಲ್ಲಿ
ನೋಡುತ್ತೇನೆ.
ಅವೇ
ಕುಂದಿದ ಕಣ್ಣುಗಳು,
ಅವೇ
ಹಳೆಯ ಕಪ್ಪುಗಟ್ಟಿದ ಗೆರೆಗಳು
ಅವೇ
ಬೂದು ಬಣ್ಣದ ಮೀಸೆಗಳು
ಅವೇ
ಬಿರಿಯೊಡೆಯದ ತುಟಿಗಳು
ಅವೇ
ಕಚ್ಚದ ಹಲ್ಲುಗಳು
ಅವೇ
ಹಳೆಯ ಸರಪಳಿಗಳು
...
ಅದರ
ಮುಖದ ಮೇಲೆ,
ಅಲ್ಲಿ
ದೂರುವಂಥದ್ದುಏನೂ ಇಲ್ಲ!
ಮೂಲ ಮಲಯಾಳಂ:
ಸಾವಿತ್ರೀ ರಾಜೀವನ್
ಇಂಗ್ಲೀಷಿಗೆ: ಯದು
ರಾಜೀವನ್
ಕನ್ನಡಕ್ಕೆ: ಉದಯ
ಇಟಗಿ