ಪ್ರಿಯ ಮೆಹಜಬೀನಳಿಗೆ... ಪತ್ರ ೧-- ಪ್ರಿಯ ಮೆಹಜಬೀನ್.. ಮಸೀದಿ ಬಿದ್ದ ದಿನ ನಿನ್ನ ಹುಡುಕಿ ನಿನ್ನ ಗಲ್ಲಿಯಲ್ಲಾ ಅಡ್ದಾಡಿದ್ದೆ ಬಿದ್ದ ಮಸೀದಿಯ ಒಂದೊಂದು ಕಲ್ಲು ಥೇಟು ಕಬರ್ ಮೇಲೆ ನಿಲ್ಲಿಸಿದ ಕಲ್ಲಿನಂತೆ
ಕಂಡು ಕಣ್ಣು ಮುಚ್ಚಿ ಪ್ರಾರ್ಥಿಸಿದ್ದೆ ‘ಯಾವ ಕಲ್ಲಿನ ಮೇಲೂ ಅವಳ ಹೆಸರು ಕಾಣದಿರಲಿ’ ನನಗಿನ್ನೂ ನೆನಪಿದೆ ಆ ಮಸೀದಿಯ ಹಿಂದೆ ನಾವಿಬ್ಬರು ಮೊದಲ ಮುತ್ತುಗಳ ವಿನಿಮಯಿಸಿಕೊಂಡದ್ದು ನಮ್ಮಿಬ್ಬರ ತುಟಿಗಳು ಒಂದಾದಾಗ ಪಾರಿವಾಳಗಳು ನಾಚಿದ್ದವು ದೂರದಲ್ಲಿದ್ದ ಒಂಟಿ ನಕ್ಷತ್ರವೊಂದು ವಿರಹ ಗೀತೆ ಹಾಡಿತ್ತು ಅದೇ ವೇಳೆ ಮೌಜನ್ ಆಜಾನ್ ಕೂಗಿದಾಗ ವಿಪರೀತ ಭಯ ನನಗೆ ಎಲ್ಲಿ ನಮ್ಮಿಬ್ಬರ
ಪ್ರೀತಿಯನ್ನು ಜಗಕೆ ಸಾರಿ ಬಿಡುವುನೆಂದು ನೀನು ನನ್ನನ್ನು ಇನ್ನಷ್ಟು ಗಟ್ಟಿಯಾಗಿ ತಬ್ಬಿಕೊಂಡೆ ನಿನ್ನ ಬೆರಳಿಗೆ ಅಂಟಿದ ಪ್ರೀತಿ ಇನ್ನೂ ಅಲ್ಲೇ ಸುಳಿಯುತ್ತಿರುವಾಗ ನಾ ನಿನ್ನ ಬಿಟ್ಟು ಬಂದಿದ್ದೆ ಇದಾದ ಮೂರನೇ ದಿನ ಆ ಮಸೀದಿ ಕೆಡವಿದ ಸುದ್ದಿ ನಮ್ಮ ಪ್ರೀತಿಯನ್ನು
ಗೋರಿಯಾಗಿಸಿತ್ತು ಇಂದಿಗೂ ನಿನ್ನ ಅಲ್ಲಿಯೇ ಹುಡುಕುತ್ತಿರುವೆ ಪ್ರೀತಿಯ ಪ್ರವಾದಿಯಂತೆ ಇದಕ್ಕೆಲ್ಲ ಆ ಜಗದೊಡೆಯನೇ ಸಾಕ್ಷಿ **** ಪತ್ರ ೨ ಮೆಹಜಬೀನ್,, ಏಸೊಂದು ಜನುಮ ದಾಟಿ ನಾವಿಬ್ಬರು ಮತ್ತೇ ಸೇರಿದ್ದೆವು ಅಂತದ್ದೇ ಮಸೀದಿಯೊಂದರಲ್ಲಿ ಕಿತ್ತಳೆ ಬಣ್ಣದ ನಿನ್ನ ದುಪ್ಪಟ್ಟಾದಲ್ಲಿ ಗುಲಾಬಿ ಹೂವಿನ ಬದಲು ಮಲ್ಲಿಗೆ ಅರಳಿದ್ದವು ಮುಡಿಸಲೆಂದೇ ನಾನು ಬಳಿ ನಿಂತಿದ್ದೆ ಅAದು ನಾಚಿಕೊಂಡ ಪಾರಿವಾಳಗಳು ಇಂದೇಕೊ ಭಯಗೊಂಡಂತಿದ್ದವು ಪಕ್ಷಿಗಳಿಗೆ ಸೂಕ್ಷ್ಮ ಶಬ್ಧ ಕೇಳಿಸುತ್ತದೆಯಂತೆ ನಾನು ನಿನ್ನ ಕಿವಿಯಲ್ಲಿ ಹೇಳಿದ ಮಾತಿಗೆ ಅವು ನಾಚಬೇಕಿತ್ತು! ಬಹುಶ: ಅವುಗಳಿಗೆ ಬೇರೆಯೇ ಶಬ್ಧ ಕೇಳಿರಬಹುದು ಅವರು ಬರುತ್ತಿರುವ
ಆ ವೇಗ ಆ ಕೂಗು, ಆ ನಡೆ ಎಲ್ಲದಕ್ಕೂ ಸಾಥ್ ನೀಡಲೆಂದೆ ಬೀಸುತ್ತಿದ್ದ ಜೋರಾದ ಗಾಳಿಗೆ ನಿನ್ನ ಕಿತ್ತಳೆ ದುಪ್ಪಟ್ಟಾ ಹಾರಿ ನನ್ನ ಕೊರಳ ಸುತ್ತಿ ಹಸಿರಾಗಿಸಿತ್ತು ಅಷ್ಟರಲ್ಲೇ ಮಸೀದಿಗೆ ಬೆಂಕಿ ಬಿತ್ತು ಪಾರಿವಾಳಗಳು ದಿಕ್ಕಾಪಾಲಾದವು (ಕಬರ್—ಗೋರಿ ಮೌಜನ್-- ನಮಾಜಿನ್ ಮುಂಚೆ ಆಜಾನ್ ಹೇಳುವ ವ್ಯಕ್ತಿ) -ಮೆಹಬೂಬ
ಮುಲ್ತಾನಿ |
To Dear Mehajabeen ... Letter-1 Dear Mehajabeen … The day the mosque fell off I roamed across your street in
search of you Every stone of the fallen mosque Looked like an epitaph glued on
the grave yard I prayed with my eyes closed ‘Her name may not be found on any
stone’ I still remember that We exchanged our first kisses Behind that mosque only When our lips locked together The pigeons blushed with shy And a lone star in the distant
place sang a song of lovesickness At the same time when the *Mouzon yelled
the prayer I feared excessively And thought that he would announce
Our love to the world You hugged me even stronger When your love that stuck to your
finger Was still lingering there I came off leaving you behind On the third day, the news of mosque
demolition came And it turned our love into a grave
yard Even today I am still looking for you
over there Like a beloved prophet And for all this the Lord of the
world himself is a witness Letter-2 Mehzabeen, After passing many births We have met each other again In a similar mosque In thy balaclava of orange colour Jasmine blossomed instead of rose I was standing next to you to pour
them on you The pigeons that felt shy on that
day Looked scary today The birds can hear the whispers And they might have turned red with
shy To what I uttered in your ear! Probably, they may have heard
something different To the speed at which they are
coming To that shout, to that walk and to
all The wind was blowing harder Just to give the companionship to all
this Your orange balaclava came flying And it got stuck around my neck
turning it green Meanwhile, the mosque was set on
fire And the pigeons flew away helter-skelter
in fear (*Mouzon - A person who says prayer
(Azan) before Namaz) From
Kannada: Mehaboob Multani To
English: Uday Itagi |