ಇಲ್ಲಿ ಪ್ರತೀ ಹೆಣ್ಣೂ ಪಾಂಚಾಲಿ ಹೆಸರೆತ್ತಿದರೇ ಹೇವರಿಸಿ ಹುಬ್ಬೇರಿಸಬಹುದು ಸನಾತನಿಗಳು! ಮುಜುಗರದಿ ಮೌನವಾಗುಳಿಯಬಹುದು ಮುಗುದೆಯರು. . .!! ಆದರೂ ಇದು ಸತ್ಯ! ಎಳವೆಯಲ್ಲಿ ಕಿಶೋರಿಯರ ಕಣ್ಣಗಲವೇ ಮುಗಿಲು. ದಿಗಿಲಿಲ್ಲದ ಆ ದಿನಮಾನಗಳಿಗೆ ಅವನೇ ದಿನಮಣಿ - ದಿವ್ಯ ಹಿಡಿದ ತನ್ನ ತಾಯಿಯ ಒಟನಾಡಿ ಬದುಕ ಬಾನಂಗಳದ ಬಾನಾಡಿ - ಪ್ರಥಮ ಪುರುಷ! ಕಿಶೋರಿಯ ಕನಸ ಮನಸ ತುಂಬೆಲ್ಲಾ ಅವನೇ; ಆಪ್ತ ಬಂಧು - ಸರೀಕ ಹುಡುಗರಂತಲ್ಲದ ಆ ಗಡಸು ದನಿಯಲ್ಲೂ ಮಾರ್ದವತೆ, ಮಮಕಾರ. ಗಂಡಸೆಂದರೆ ಹೀಗಿರಬೇಕೆಂಬ ಆದರ್ಶ – - ಪೃಥೆಯ ಪ್ರಥಮ – ಯುಧಿಷ್ಠಿರ! ಹೊಸ ಹರೆಯದ ಬೆರಗು ಆ ಸಹಯಾನಿ; ಕಣ್ಣಲ್ಲೇ ಕಚಗುಳಿ ಇಕ್ಕಿ ಕಿಚ್ಚೆಬ್ಬಿಸುವ, ಕಳವಳ ಗುರುತಿಸಿ ನೋಟದಲ್ಲೇ ನೇವರಿಸುವ – ಥೇಟ್ ಅಮ್ಮನಂತಹ ಹುಡುಗ! ತನ್ನಿತರ ಸಖಿಯರಿಗೂ ಸ್ಪಂದಿಸುವ ಆ ಮೋಹಕ ಪಾವಕ ಸುಳಿದೆಡೆಗೆಲ್ಲಾ ಕಣ್ಣು ಹೊರಳಿ ಕಸಿವಿಸಿಗೊಳ್ಳುವ ಕರಳು ಅರ್ಥವಾಗದ ಬೇಗೆ ಮೂಡಿಸುವವ - ಪಾರ್ಥ! ತನ್ನ ಸು-ಭದ್ರೆಯ ಹುಡುಕಿ ಹೊರಟು ಹೋದವನ ಬೆನ್ನಿಗೆ ಒಂದು ನಿಡು ಸುಯ್ಲು ನೆತ್ತಿಯ ಮೇಲೆ ಜೀರಿಗೆ ಅರಳು ಸುರಿದವನಿಗೆ ಕೊಟ್ಟು ಕೊರಳು ಹೊರಳಿ ನೋಡದ ಆ ದಾರಿಯಲಿ ಜೊತೆಯಾದವ - ಬಲ ಭದ್ರ! ತನ್ನರಸಿಯ ಮನದಿಂಗಿತ ಅರಿವ ಸೂಕ್ಷ್ಮತೆ ಆ ಅಜಾನುಬಾಹುವಿಗೆ! ಆಶಿಸಿದ ಸೌಗಂಧಿಕಾ ಪುಷ್ಪಕ್ಕಾಗಿ ನೂರಾರು ಯೋಜನ ಕ್ರಮಿಸಿ ತುರುಬಿಗಿಡುವ ತೊಡರುವ ಕೀಚಕರ ನಿವಾರಿಸುವ ನೇಹಿಗ - ಭೀಮ ಕಾಯ! ಮಧುರ ಮಾತು ಕೃತಿ, ತುರುಗಳ ಎಲ್ಲಾ ರಹಸ್ಯ ಬಲ್ಲ ತರುಲತೆಯಂತಹ ಸಖ; ಸಹ ಉದ್ಯೋಗಿ, ಮನದರಸನ ಕಿರಿಯ ಅನುಜನಂತಹ ಬಂಧು, ಹೇಳದೆಯೇ ಕೇಳುವ ಕೇಳದೆಯೇ ಕೊಡುವವ, ನಿಟ್ಟುಸಿರ ಘಳಿಗೆಗಳಿಗೆ ನೆರಳು - ನಕುಲ! ಮಗನಲ್ಲ ಇವ ಮಗನ ವಯಸ್ಸಿನ ಬೆರಳು ನಡು ವಯಸ್ಸಿನ ತುಡಿತ ತಳಮಳದ ಬದುಕ ಹೊಕ್ಕು ಮನಸು ಮರುಗದಂತೆ ಹದವರಿತ ಹೆಜ್ಜೆ, ನಡೆಗೆ ಮುಡಿ ಹಾಸಿದಂತೆ ನಡವಳಿಕೆ ಬೇಸರ ಬವಳಿ ಬಂದಳಿಕೆಗಳಿಗೆ ಸದಾ ಕೈವರೆವ ಸಹಚರ - ಸಹ ದೇವ! ಇವಳ ಅಂತರಂಗದ ಅಂಗಳದಲ್ಲಿ ಇಂತಹವೇ ನೂರಾರು ಹೆಜ್ಜೆ ಗೆಜ್ಜೆ ಸಪ್ಪಳವಿಲ್ಲದ ಗುಜುಗುಜು ಗೌಜಿಲ್ಲದ ಪರಿವೇಶ! ಯಾವ ಜಮದಗ್ನಿಯ ಕೋಪ ಕಟ್ಟಳೆಗಳು ಪರಶುರಾಮರ ಕೊಡಲಿ ಪೆಟ್ಟುಗಳೂ ತಡೆಗಟ್ಟವು ಅಂತರಂಗದೊಳಗೆ ಅವಳ ಪುರುಷರ ಪ್ರವೇಶ!! |
Here every woman is a Panchali If you take her name, the orthodox’s Eyebrows may go up in aversion The innocent girls may remain silent!! Yet it is true! The breadth of the young girls’ eyes only is the sky
in their spring days He is the Sun for those days which are free from fear-the
mother’s companion who held something celestial He is the Skylark of life’s yard-the First person! He is present in both dreams and minds of young girls; In fact he is a close relative- He is unlike his
fellow beings Even in his rough voice there is an attraction and
intoxication Ideal to be a good person- - First son of Pruthe- Yudhisthira! A wonderful companion of new adolescence he is; He tickles through his eyes and tempts- Understands my worries And gently consoles me through his eyes only He is almost like my mom who showers love and
affection on me The warrior who talks to his other girl friends Through his intoxicating eyes Still keeps looking around wherever he can And feels embarrassed at times Creating an untold tension for me - He is Partha! A sigh of relief To the back of one who went away In search of his Su-bhadre And cumin on the scalp Gave the neck to the one who poured it out On the way, which he could not look back, he became
my companion He is Bala Bhadra! He is giant But still he has the sensibility Of understanding the Inner heart of his mistress He can walk miles and miles Just to fetch the Sougandhika flower which I aspired
for And feels elevated himself by keeping it in my hair He is a good friend of mine who remains as a big
threat to many Keechakas and eliminates them- He is Bhima Kaya! Soft-spoken and a mild worker Who knows all the secrets of horses Is my tender partner- as tender as a creeper A co-worker, and my master’s beloved younger brother
He is a good listener who never asks anything And a giver before I ask for it He is a big relief for the sighs of difficult times –
And he is none other than Nakula! He is not the son but like a son Who lives with all the anxieties and agitations of
the middle age But puts the moderate steps carefully
without getting into trouble His behaviour is like spreading carpet on the walk
path He always stands by me With his helping hand for My distress and depression- He is Sahadeva In her inner courtyard There are hundreds of steps like these Moving on and on With whispers of soundless anklets And a crowd less camouflage! No Jamadagni’s anger and restrictions Nor the death blows of Parushrama Will prevent the entry of her men Into the court yard of her heart!! From Kannada:
Dr. Anand Rugvedi To English:
Uday Itagi |
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ