ಶೇಕ್ಸ್ಪಿಯರನ ನಿಜ ಬಣ್ಣ ಬಯಲು ಮಾಡಿದ ಶ್ರೀಮತಿ
'ಶೇಕ್ಸ್ಪಿಯರನ ಶ್ರೀಮತಿ’- ಆಸಕ್ತಿ ಕೆರಳಿಸಿದ ಸಮರ್ಥ ಪ್ರಯೋಗ. ಇದು ಏಕವ್ಯಕ್ತಿ ಪ್ರದರ್ಶನವಾದರೂ ಎಲ್ಲೂ ಯಾಂತ್ರಿಕವಾಗಿರದೆ, ತನ್ನ ವೈವಿಧ್ಯಪೂರ್ಣ ಅಂಶಗಳಿಂದ ಸುಲಭವಾಗಿ ನೋಡಿಸಿಕೊಂಡು ಹೋದ ಸಮರ್ಥ ಪ್ರಯೋಗವಾಗಿತ್ತು. ಪ್ರಪ್ರಥಮವಾಗಿ ಶೇಕ್ಸ್ಪಿಯರನಹೆಸರೇ ಆಸಕ್ತಿಯನ್ನು ಹುಟ್ಟಿಸುವ ಕಥಾವಸ್ತು. ಜಗತ್ಪ್ರಸಿದ್ಧ ನಾಟಕಕಾರನ ಹೆಂಡತಿಯ ಮೂಲಕ ಅನಾವರಣಗೊಳ್ಳುವ ನಾಟಕ ಸಹಜವಾಗಿ ಕುತೂಹಲ ದಕ್ಕಿಸಿಕೊಳ್ಳುವ ನಂಬಿಕೆಯನ್ನು ಹುಸಿಗೊಳಿಸಲಿಲ್ಲ.
‘ಕ್ರಿಯೇಟಿವ್ ಥಿಯೇಟರ್’ ಅರ್ಪಿಸಿದ ‘ಶೇಕ್ಸ್ಪಿಯರನಶ್ರೀಮತಿ’ ಲೇಖಕ ಉದಯ್ ಇಟಗಿಯವರು ವಿವಿಧ ಆಕರಗಳಿಂದ ಸಂಗ್ರಹಿಸಿ ಬರೆದ ಸ್ವೋಪಜ್ಞತೆಯನ್ನು ತೋರಿದ ಸ್ವಾರಸ್ಯಕರ ಏಕವ್ಯಕ್ತಿ ರಂಗಪ್ರಯೋಗ. ರಂಗದ ಮೇಲೆ ತರಲು ಸವಾಲಾಗಬಲ್ಲಂಥ ನಾಟಕವನ್ನು ನಿರ್ದೇಶಕ ವಿಶ್ವರಾಜ್ ಪಾಟೀಲ್ ಮನಮುಟ್ಟುವಂತೆ ಹರಿತವಾಗಿ ನಿರ್ದೇಶಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಶ್ರೀಮತಿಯ ಅಂತರಂಗವನ್ನು, ತುಮುಲ-ವಿಷಾದಗಳನ್ನು ನೋಡುಗರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಿದವರು ಹಿರಿಯ ನಟಿ ಲಕ್ಷ್ಮೀ ಚಂದ್ರಶೇಖರ್.
ಜನಪ್ರಿಯತೆ ಮತ್ತು ಖ್ಯಾತಿಯನ್ನು ವಿಶ್ವಾದ್ಯಂತ ಪಡೆದುಕೊಂಡಿರುವ ರಂಗಪ್ರೇಮಿಗಳ ಆರಾಧ್ಯದೈವ ಷೇಕ್ಸ್ ಪಿಯರ್ ನ ಅಂತರಂಗದ ಬದುಕಿನ ಪಾತಳಿಗೆ ದುರ್ಬೀನಿಡುವ ಈ ಪ್ರಯತ್ನ ರಂಗದ ಮೇಲೆ ಹೇಗೆ ಅರಳುವುದೋ ಎಂಬ ಕುತೂಹಲ ನೋಡುಗನ ಊಹೆಯನ್ನೂ ಮೀರಿತ್ತು. ಕ್ರಿ.ಶ. ಹದಿನಾರು ಮತ್ತು ಹದಿನೇಳನೆಯ ಶತಮಾನದ ಕಾಲಘಟ್ಟದಲ್ಲಿ ಇಂಗ್ಲೆಂಡಿನಲ್ಲಿ ಜೀವಿಸಿದ್ದು, ನಾಟಕ ಮತ್ತು ಕಾವ್ಯಕ್ಕೆ ಹೊಸದಿಕ್ಕನ್ನು ತೋರಿದ ಮಹತ್ವದ ಬರಹಗಾರ ವಿಲಿಯಂ ಷೇಕ್ಸ್ ಪಿಯರ್, ಜಗದ ಕಣ್ಣಿಗೆ ಕಂಡಿದ್ದಕ್ಕಿಂತ ವಿಭಿನ್ನವಾಗಿ ಅವನ ಹೆಂಡತಿ ಆನಿ ಹ್ಯಾಥ್ವೆಯ ಸ್ವಗತದ ಮಾತುಗಳಿಂದ ಅವನ ವ್ಯಕ್ತಿತ್ವವನ್ನು ಒರೆಗೆ ಹಚ್ಚುವ ಬಗೆ ವಿಶಿಷ್ಟವಾಗಿತ್ತು. ಬಹು ಸರಳವಾದ ಮನಂಬುಗುವ ಭಾಷೆಯಲ್ಲಿ ಶ್ರೀಮತಿ ತನ್ನ ಸರಳ-ಬಿಚ್ಚುಮನದ ಸ್ವಭಾವಕ್ಕನುಗುಣವಾಗಿ ಗೊಂದಲಮಯವಾದ ಅವನ ಬದುಕಿನ ಹೆಜ್ಜೆಗಳನ್ನು ತಾನು ಕಂಡಂತೆ ತೆರೆದಿಡುವ ಪರಿ ಆಪ್ಯಾಯಮಾನ.
ಅವಳಿಗಿಂತ ಎಂಟುವರ್ಷ ಕಿರಿಯನಾದ ಹದಿನೆಂಟರ ಯುವಕ ಷೇಕ್ಸ್ ಪಿಯರ್ ತಾನಾಗೇ ಅವಳ ಸ್ನೇಹ ಬಯಸಿ, ಮುಂದುವರೆದು, ಆಕೆಯ ಗರ್ಭಕ್ಕೆ ಕಾರಣನಾಗಿ ಪಂಚಾಯಿತಿಯ ತೀರ್ಮಾನಕ್ಕೆ ಮಣಿದು ಒತ್ತಾಯಕ್ಕೆ ಅವಳನ್ನು ಮದುವೆಯಾದವನು. ರಸಿಕ, ಚಂಚಲಚಿತ್ತ ಗಂಡನ ಬಗ್ಗೆ ಅವಳಿಗೆ ಸದಾ ಗುಮಾನಿ-ಗೊಂದಲ. ಸಿರಿವಂತ ಮನೆತನದ ಸೋಮಾರಿ ಅತ್ತೆ, ಬೇಜವಾಬ್ದಾರಿ ಸ್ವಭಾವದ ಕುಡುಕ ಮಾವ, ಜೊತೆಗೆ ತಿಕ್ಕಲುತನದ ಸುಳ್ಳುಗಾರ, ಸ್ತ್ರೀಲೋಲುಪ ಗಂಡನೊಡನಾಟದ ಸಂಸಾರದಲ್ಲಿ ಮೂರುಮಕ್ಕಳು ಬೇರೆ. ಏಕಾಂಗಿಯಾಗಿ ಸಂಸಾರ ನಿಭಾಯಿಸುವ ಗಟ್ಟಿಗಿತ್ತಿ ಹೆಣ್ಣಾಗಿ ಆಕೆ, ಮನೆಯಲ್ಲೇ ಸಣ್ಣಪುಟ್ಟ ಕೆಲಸಗಳಿಂದ ಹಣ ಸಂಪಾದಿಸುವ ಶ್ರಮಜೀವಿ. ಸಂಸಾರದ ಜವಾಬ್ದಾರಿ ಹೊರದ ಗಂಡ ಲಂಡನ್ನಿಗೆ ಪಲಾಯನ ಮಾಡಿ, ಅಲ್ಲಿ ಹೆಣ್ಣು-ಹೆಂಡಗಳ ಸಹವಾಸದಲ್ಲಿದ್ದರೂ ಅದನ್ನು ಪ್ರತಿಭಟಿಸದ ಒಳ್ಳೆಯ ಹೆಂಡತಿ ಇವಳು. ಸಲಿಂಗಕಾಮಿಯಾಗಿಯೂ ಆಗಿದ್ದ ಅವನ ಎಲ್ಲ ದೌರ್ಬಲ್ಯಗಳ ಬಗ್ಗೆ ತಿಳಿದಿದ್ದರೂ ಇವಳು ತಲೆಕೆಡಿಸಿಕೊಳ್ಳದ ಪ್ರಶಾಂತೆ. ಅವನ ಸಾನೆಟ್ಟಿನಂತೆ ತಾನು ಅವನ ಪಾಲಿಗೆ ‘ಬೇಸಿಗೆಯ ಹಗಲಾಗದೆ, ಚಳಿಗಾಲದ ದಿನದಂತೆ’ ಆದ ತಾನು ಅವನ ಮೈ-ಮನ ಬೆಚ್ಚಗಿರಿಸಲಾಗಲಿಲ್ಲ ಎಂಬ ವಿಷಾದವೂ ಅವಳಲ್ಲಿದೆ. ಸಾಹಿತ್ಯಪ್ರೇಮಿಯಲ್ಲದ ತಾನು ಅವನಿಗೆ ಸರಿಜೋಡಿಯಲ್ಲ ಎಂಬ ಅರಿವೂ ಇದೆ. ಪ್ರಪಂಚದ ಎಲ್ಲ ಕವಿಗಳು, ಲೇಖಕರು ಸುಳ್ಳುಗಾರರೇ ಎಂದು ಮೂದಲಿಸುವ ಶ್ರೀಮತಿ ‘ಗಂಡಂದಿರ ಮನಸ್ಸನ್ನು ಮಾತ್ರ ಬಗೆದು ನೋಡಬಾರದು..ಅದು ನಿಗೂಢ-ಹೊಲಸು’ ಎಂದು ಬಹು ಮಾರ್ಮಿಕವಾಗಿ ನುಡಿಯುತ್ತಾಳೆ. ತಮ್ಮದು ವಿರಸ ದಾಂಪತ್ಯವಾದರೂ, ಗಂಡನ ಬರವಣಿಗೆ ಶಕ್ತಿಯ ಬಗ್ಗೆ ಮೆಚ್ಚುವ ಅವಳಲ್ಲಿ ಅವನ ಕೆಟ್ಟಚಾಳಿಗಳ ಬಗ್ಗೆ ತಿರಸ್ಕಾರ ಇದ್ದೇ ಇರುತ್ತದೆ. ಬೈಬಲನ್ನು ನಂಬಿದ ತಾನು ಸದ್ಗೃಹಿಣಿ, ನೆಟ್ಟಗೆ ಬಾಳುತ್ತಿರುವ ತನಗೇನೂ ತಿಳಿಯದು ಎಂದು ಎಲ್ಲವನ್ನೂ ಮುಕ್ತವಾಗಿ ಮಾತನಾಡುವ ಶ್ರೀಮತಿ, ಹತ್ತಿರವಿದ್ದೂ ದೂರ ಉಳಿದ ಗಂಡನ ಅಸಾಂಗತ್ಯದ ಬಗ್ಗೆ ಜರಡಿ ಹಿಡಿದು ಜಾಲಾಡುವ, ವಿಶ್ಲೇಷಿಸುವ ವಿಚಾರಗಳು ಬಹು ಅರ್ಥಗರ್ಭಿತ.
‘ಪ್ರಸಿದ್ಧ ವ್ಯಕ್ತಿಗಳ ಬದುಕಿನ ಚಿತ್ರಣ ಕಟ್ಟಿಕೊಡುವಾಗ ಅವರ ಬದುಕಿನಲ್ಲಿ ಬಂದ ಇತರೆ ಹೆಣ್ಣುಗಳನ್ನು ಮಾತ್ರ ಹೈಲೈಟ್ ಮಾಡುತ್ತಾರೆಯೇ ವಿನಃ ಅವರ ಕೈಹಿಡಿದ ಹೆಂಡತಿಯ ವಿಷಯವನ್ನು ಮಾತ್ರ ಎಲ್ಲೂ ಹೊರಗೆಡಹುವುದೇ ಇಲ್ಲ’ ಎಂಬ ವಿಷಾದ ವ್ಯಕ್ತಪಡಿಸುತ್ತಾಳೆ. ‘ಪ್ರಸಿದ್ಧರು ಪ್ರಸಿದ್ಧಿಗೆ ಬರುವುದರ ಹಿಂದೆ ಅವರ ಹೆಂಡತಿಯರ ಶ್ರಮ, ತ್ಯಾಗದ ದೊಡ್ಡಕಥೆಯನ್ನು ಯಾರೂ ಲೆಕ್ಕಿಸುವುದಿಲ್ಲ’ ಎಂಬ ಅವಳ ನೋವಿನ ಹಳವಂಡ ಆಕೆಯ ಬದುಕಿನ ನಿಶಬ್ದ ಕ್ರೌರ್ಯ-ದುರಂತವನ್ನು ಎತ್ತಿ ಹಿಡಿಯುತ್ತದೆ.
ಷೇಕ್ಸ್ ಪಿಯರ್ ತನ್ನ ಜೀವಿತಾವಧಿಯ ಕಡೆಯ ಐದುವರ್ಷಗಳು ಹೆಂಡತಿಯ ಆರೈಕೆಯಲ್ಲೇ ಇದ್ದರೂ ಅವನು ತನ್ನ ಹಳೆಯ ಗೆಳತನದ ಗುಂಗಿನಲ್ಲೇ ಇದ್ದನೇ ಎಂಬ ಅಸ್ಪಷ್ಟತೆ – ಅಪರಿಚಿತತೆ ಅವಳ ಬೆರಗು. ತನ್ನ ಐವತ್ತೆರಡನೆಯ ಹುಟ್ಟಿದಹಬ್ಬದ ದಿನವೇ ಮರಣಿಸಿದ ಷೇಕ್ಸ್ ಪಿಯರನ್ ವಂಶ ತನ್ನ ಮಕ್ಕಳೊಂದಿಗೆ ಕೊನೆಯಾದ ಬಗ್ಗೆ ಶ್ರೀಮತಿ ವಿಷಾದಿಸಿದರೂ, ಎಂದೂ ಆಪ್ತವಾಗದ ಗಂಡ ಎಂದೂ ತನ್ನ ಕನಸಿನಲ್ಲೂ ಸುಳಿದಿಲ್ಲ ಎಂಬ ಕಹಿಭಾವನೆಯನ್ನು ಒಸರಿಸುವ ಅವಳ ನಿಟ್ಟುಸಿರ ಅಭಿವ್ಯಕ್ತಿಯಲ್ಲಿ ಪ್ರಸಿದ್ಧ ಕವಿಯ ಹೆಂಡತಿಯರ ಅಸಮ ದಾಂಪತ್ಯದ ಸಾರ್ವತ್ರಿಕತೆಯನ್ನು ಬಿಂಬಿಸುತ್ತಾಳೆ.
ನಾಟಕ ನೋಡಿದ ಮೇಲೆ ಜಗ ಮೆಚ್ಚಿದ ಶೇಕ್ಸ್ಪಿಯರನಪ್ರತಿಭೆ- ಅವನ ಹೆಂಡತಿಯ ಅಂತರಂಗದ ತೊಳಲಾಟ-ಸ್ಪಂದನಗಳ ಓಘದ ಮುಂದೆ ಮಂಕಾಗಿ ತೋರುತ್ತದೆ. ಎಲ್ಲ ಪ್ರಸಿದ್ಧರ ಹೆಂಡತಿಯರ ಅಂತರಂಗದ ಜ್ವಾಲಾಮುಖಿಗಳಿಗೆ ಕನ್ನಡಿ ಹಿಡಿವ, ಶೇಕ್ಸ್ಪಿಯರನಹೆಂಡತಿ ಮೇಲ್ನೋಟಕ್ಕೆ ಒರಟಳಂತೆ ಕಂಡರೂ ಅವಳ ಪ್ರಾಮಾಣಿಕತೆಯ ವ್ಯಕ್ತಿತ್ವ ಕಂಡು ಮನಸ್ಸು ಮಿಡಿಯುತ್ತದೆ.
ಶೇಕ್ಸ್ಪಿಯರನಹೆಂಡತಿಯಾಗಿ ಹೃದಯಸ್ಪರ್ಶೀ ಅಭಿನಯ ನೀಡಿದ ಲಕ್ಷ್ಮೀ ಚಂದ್ರಶೇಖರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಟಕಾವಧಿ ಒಂದು ಗಂಟೆಯುದ್ದಕ್ಕೂ ಎಲ್ಲೂ ಬೇಸರ ಹಣಕದಂತೆ ರಂಗದ ಮೇಲಿನ ಆಕೆಯ ಚಲನೆ, ಚಟುವಟಿಕೆಗಳು ಪೂರಕವಾಗಿವೆ. ಇದನ್ನು ಆಗುಮಾಡಿದ ನಿರ್ದೇಶಕ ವಿಶ್ವರಾಜ್ ಪಾಟೀಲರು ಅಭಿನಂದನೀಯರು. ಉತ್ತಮ ರಂಗಸಜ್ಜಿಕೆ- ರಂಗಪರಿಕರ (ವಿಶ್ವನಾಥ ಮಂಡಿ) ಧ್ವನಿ ಸಂಯೋಜನೆ (ಗಜಾನನ ನಾಯ್ಕ) ಬೆಳಕಿನ ವಿನ್ಯಾಸ ( ಮುದ್ದಣ್ಣ ರಟ್ಟಿಹಳ್ಳಿ) ವಸ್ತ್ರವಿನ್ಯಾಸ (ಮಂಗಳಾ.ಎನ್) ಪ್ರಸಾಧನ (ರಾಮಕೃಷ್ಣ ಕನ್ನರಪಾಡಿ) ಪರಿಪೂರ್ಣವಾಗಿತ್ತು. ಒಟ್ಟಾರೆ ನಾಟಕದ ಎಲ್ಲ ಅಂಶಗಳಲ್ಲೂ ನೋಡುಗನಿಗೆ ತೃಪ್ತಿ ನೀಡಿದ್ದು ನಾಟಕದ ಗೆಲುವು!!
ಖ್ಯಾತನಾಮರ ಹೆಂಡಂದಿರ ದನಿಗೆ ಹೊರತೂಬು ನೀಡಿದರೆ ಅವರ ಗಂಡಂದಿರ ಮುಖವಾಡಗಳು ಕಳಚಿ ನಿಜಬಣ್ಣ ಬಯಲಾಗುವುದು ಎಂಬ ಸೂಚ್ಯಾರ್ಥ ಇಂಥ ನಾಟಕಗಳ ಸಂದೇಶವೆನ್ನಬಹುದೇನೋ?!!!
-ವೈ.ಕೆ.ಸಂಧ್ಯಾ ಶರ್ಮ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ಅರ್ಬುದನ ಡೈರಿ – ಹೊಸ ಪುಸ್ತಕ3 ವಾರಗಳ ಹಿಂದೆ
-
ದಾವಣಗೆರೆಯಲ್ಲಿ ಸಿಟಿ ಬಸ್ ಹಿಡಿದು...3 ತಿಂಗಳುಗಳ ಹಿಂದೆ
-
Hello world!4 ತಿಂಗಳುಗಳ ಹಿಂದೆ
-
ಮಾತು ಮರೆತವರೇ ಜಗತ್ತನ್ನಾಳುತ್ತಾರೆ7 ತಿಂಗಳುಗಳ ಹಿಂದೆ
-
Sawanna @167 ತಿಂಗಳುಗಳ ಹಿಂದೆ
-
-
-
ತರಚೀ ಪುಷ್ಪೋಪಾಖ್ಯಾನ1 ವರ್ಷದ ಹಿಂದೆ
-
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ2 ವರ್ಷಗಳ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!2 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು6 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?6 ವರ್ಷಗಳ ಹಿಂದೆ
-
ದ್ವಿಪದಿಗಳು6 ವರ್ಷಗಳ ಹಿಂದೆ
-
ಹೊಸ ದಿನ6 ವರ್ಷಗಳ ಹಿಂದೆ
-
The story of telling a story!6 ವರ್ಷಗಳ ಹಿಂದೆ
-
-
-
ಆಸೆ....!!!7 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 27 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!7 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ7 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?8 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!8 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್8 ವರ್ಷಗಳ ಹಿಂದೆ
-
ಮಾಯೆ9 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ9 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!9 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ9 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು9 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!10 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:10 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ10 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್10 ವರ್ಷಗಳ ಹಿಂದೆ
-
ಕತ್ತಲೆ.................10 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..11 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ11 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ11 ವರ್ಷಗಳ ಹಿಂದೆ
-
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು11 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!11 ವರ್ಷಗಳ ಹಿಂದೆ
-
-
ಗಾಜಿನ ಲೋಟದಲ್ಲಿ ರಸ್ನಾ12 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ12 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ12 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?12 ವರ್ಷಗಳ ಹಿಂದೆ
-
ತೀರ....13 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ13 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?13 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ13 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು13 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ13 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)14 ವರ್ಷಗಳ ಹಿಂದೆ
-
(ಮಹಿಳಾ)ವಾದ:14 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ14 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…14 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ14 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...14 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ14 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್15 ವರ್ಷಗಳ ಹಿಂದೆ
-
ಕಫನ್15 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …15 ವರ್ಷಗಳ ಹಿಂದೆ
-
ನನ್ನ ಜಡೆ15 ವರ್ಷಗಳ ಹಿಂದೆ
-
ಕೇಳಿ-೫15 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು15 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು16 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧16 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ16 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ16 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು16 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು17 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?17 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !17 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...18 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
- ಹುಚ್ಚರು
- 2. Libya Diary: An Attempt to Seek the Inner Truth
- 5. The Story of Libya’s Fall
- 17. The Mauritanian beauties that often spoil our minds…
- 15. The Fleeting Desires of Love and Lust amidst the Sahara's Winter
- 19. A Multilingual Poetry Session in the Sahara Desert
- ನನ್ನೊಳಗಿನ ಬರಹಗಾರ ರೂಪಗೊಂಡಿದ್ದು (ಕೊನೆಯ ಭಾಗ)
- ಪ್ರೀತಿಗಿಂತ ಬದುಕು ದೊಡ್ದದು ಕಣೇ.....................!
- ಒಂದು ಕಾಲದಲ್ಲಿ....
- ಇವತ್ತಿನ ರೂವಾರಿ.ಕಾಂನಲ್ಲಿ ನನ್ನ ನಾಟಕ ಶೇಕ್ಸ್ಪಿಯರ್ ನ ಶ್ರೀಮತಿ ಕುರಿತು ಪಾರ್ವತಿ ಐತಾಳ್ ಅವರು ಬರೆದಿರುವ ವಿಮರ್ಶ
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.




0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ