ಸ್ವಲ್ಪ ಪ್ರೇಮದ ಬಗ್ಗೆ ಮಾತಾಡೋಣ
ಅಂದ,
ವಯಸಾಯ್ತು ಅಂದೆ.
ಪ್ರೇಮಕ್ಕೆ ವಯಸಿಲ್ಲ ಅಂದ,
ಮಾತಾಡುತ್ತ ಕೂರಲು ವಯಸಾಯ್ತು ಅಂದೆ.
ಸರಿ, ಪ್ರೇಮಿಸೋಣ ಅಂದ.
ನೀರು ಕುಡಿಯಲು ಮೀನಿಗೆ
ಬಟ್ಟಲು ಬೇಕೇ?
ನನ್ನ ಪ್ರಶ್ನೆ.
ಪ್ರೇಮವನ್ನ ಉಸಿರೆಂದುಕೋ ಅಂದ.
ಉಸಿರು ಹಿಡಿದಿಡಲಾಗದು,
ಉಸಿರ ಗಾಳಿ ಪ್ರತಿಯೊಬ್ಬರದ್ದೂ;
ನನ್ನ ಉತ್ತರ.
ಪ್ರೇಮವೇ ಬದುಕೆಂದ.
ಬದುಕು ಪ್ರೇಮವಷ್ಟೇ ಅಲ್ಲವೆಂದೆ.
ಸ್ಪರ್ಶ ಕೊಡು,
- ವಿಷಯಕ್ಕೆ ಬಂದ.
ಇರು, ಸ್ವಲ್ಪ ಮಾತಾಡೋಣ ಅಂದೆ.
ಪತ್ತೆ ಇಲ್ಲ! “Let's talk a little about love,” he said
“I am getting older," I replied
“Bye the bye, love knows no age limits,” he uttered.
"I am too old to sit and talk” I murmured
“Well, let's make love,” he expressed his inner feelings
“Does a fish need a cup to drink water?” I threw a question at him
“Think that love is breathing,” he said
“Breathe can’t be held back,
Breathing air is everyone's” I muttered
“Love is life,” he opined
“Life is not only love” I asserted
“Give me a touch”
- now he came to the point.
“Wait, let's talk for a while”
Since then no traces about his whereabouts!
From Kannada: Chethana Teerthahalli
To English: Uday Itagi
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ