Demo image Demo image Demo image Demo image Demo image Demo image Demo image Demo image

ಕೋಲಾರದ ನನ್ನ ಆತ್ಮೀಯ ಬರಹಗಾರ ಮಿತ್ರ ಮತ್ತು ಕೇಂದ್ರ ಯುವ ಸಾಹಿತ್ಯ ಅಕ್ಯಾಡೆಮಿ ವಿಜೇತ ಆನಂದ ಲಕ್ಕೂರಗೆ ಒಂದು ನುಡಿನಮನ.

  • ಶನಿವಾರ, ಸೆಪ್ಟೆಂಬರ್ 28, 2024
  • ಬಿಸಿಲ ಹನಿ
  • ಆನಂದ ಲಕ್ಕೂರು ಇನ್ನಿಲ್ಲವೆಂಬ ಸುದ್ದಿ ಬಂದಿದೆ. ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸುತ್ತಲೇ ನಾನಿದನ್ನು ಬೇರೆಯವರ ಹತ್ತಿರ ಇದು ನಿಜವೇ ಎಂದು ಖಾತ್ರಿಪಡಿಸಿಕೊಂಡ ಮೇಲೆ ಇದನ್ನು ವಿಷಾದದಿಂದ ಬರೆಯುತ್ತಿದ್ದೇನೆ. ನಿಜ ಹೇಳಬೇಕೆಂದರೆ ನನಗೆ ಆನಂದ ಯಾರೂ ಎಂದು ಸರಿಯಾಗಿ ಗೊತ್ತಿರಲಿಲ್ಲ. ಒಂದು ಸಾರಿ ಅವರ "ಒಂದು ಕಪ್ ಕಾಫಿ" ಕವನವನ್ನು ಯಾರೋ ಫೇಸ್ಬ್ಕುಕ್‍ನಲ್ಲಿ ಹಾಕಿದ್ದರು. ನಾನಾಗ ಲಿಬಿಯಾದಲ್ಲಿದ್ದೆ. ನನಗೆ ಆ ಕವನವನ್ನು ಓದಿದ ತಕ್ಷಣ ತುಂಬಾ ಇಷ್ಟವಾಗಿ ಇಂಗ್ಲೀಷಿಗೆ ಅನುವಾದಿಸಿದ್ದೆ. ಆಮೇಲೆ ನಾನದನ್ನು ಮರೆತೂಬಿಟ್ಟಿದ್ದೆ. ಇಬ್ಬರು ಪ್ರೇಮಿಗಳು ಇಷ್ಟು ಚನ್ನಾಗಿ ವಿದಾಯ ಹೇಳಬಹುದೆ? ಎಂದು ಬೆರಗು ಮೂಡಿಸಿದ ಕವನವದು. ಹಾಗಾಗಿ ನಾನದನ್ನು ಇಂಗ್ಲಿಶಷಿಗೆ ತಕ್ಷಣ ಅನುವಾದಿಸಿದ್ದೆ.
    ನಾನು ಮರಳಿ ಇಂಡಿಯಾಗೆ ಬಂದ ಮೇಲೆ ಗೊರವರ ಅವರ "ಸಂಗಾತ"ದ ಒಂದು ಸಂಚಿಕೆಗೆ ಒಂದಿಷ್ಟು ಅಸ್ಸಾಮಿ ಕವನಗಳನ್ನು ಅನುವಾದಿಸಿಕೊಟ್ಟಿದ್ದೆ.  ಅದು ಪ್ರಿಂಟಾಗಿ ಹೆಚ್ಚುಕಮ್ಮಿ ಎಂಟು ತಿಂಗಳ ನಂತರ ಅಲ್ಲಿ ನನ್ನ ಫೋನ್ ನಂಬರ್ ತೆಗೆದುಕೊಂಡು ತಮ್ಮ ಪರಿಚಯ ಮಾಡಿಕೊಂಡು ದಿನವೂ ಮಾತನಾಡಲು ಶುರುಮಾಡಿದರು. ಅವರಿಗೆ ಸಾಹಿತ್ಯ ವಲಯದ ಅನೇಕ ದಿಗ್ಗಜರ ಸಂಪರ್ಕವಿತ್ತು. ಗಂಟೆಗಟ್ಟಲೆ ಸಾಹಿತ್ಯದ ಕುರಿತು‌ ಮಾತನಾಡುತ್ತಿದ್ದರು. ನನಗೆ ಬರುಬರುತ್ತಾ ದಿನವೂ ಮಾತನಾಡುವಂಥದ್ದು ಏನಿದೆ ಎಂದು ರೇಜಿಗೆ ಎನಿಸಿದರೂ ಅವಾಯ್ಡ್ ಮಾಡಲಿಲ್ಲ. ಅವರು ನನ್ನೊಂದಿಗೆ ಮಾತ್ರವಲ್ಲ ಅನೇಕ ಬರಹಗಾರರ ಜೊತೆ ಹೀಗೆ ಮಾತನಾಡುತ್ತಿದ್ದರು ಎಂದು ಆಮೇಲೆ ಗೊತ್ತಾಯಿತು. ಮುಂದೆ ಅವರು ಕುವೆಂಪು ಭಾಷಾ ಭಾರತಿಯಿಂದ ನನ್ನ ಅಸ್ಸಾಮಿ ಅನುವಾದಿತ ಕವನಗಳು ಹೊರಬರಲು ಪರೋಕ್ಷವಾಗಿ ಕಾರಣರಾದರು. ಮುಂದೆ ಅವರು ಬ್ರೆಕ್ಟ್ ನ The Pearl ಎನ್ನುವ ಇಂಗ್ಲೀಷ್ ಕಾದಂಬರಿಯನ್ನು ಅನುವಾದಿಸಿದಾಗ ಅವರ ಕೋರಿಕೆಯ ಮೇರೆಗೆ ಮುನ್ನುಡಿ ಬರೆದುಕೊಟ್ಟಿದ್ದೆ.
    ಆನಂದ ಬಗ್ಗೆ ಸಾಹಿತ್ಯ ವಲಯದಲ್ಲಿ ಗುಸುಗುಸು ಸುದ್ದಿಗಳು ಹರಿದಾಡುತ್ತಲೇ ಇದ್ದರೂ ಸಾಕ್ಷಿ ಸಮೇತ ಅವರು ನನ್ನ ಕೈಲಿ ಸಿಕ್ಕಿಹಾಕಿಕೊಂಡಿರಲಿಲ್ಲ. ಹಾಗಾಗಿ ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಜೊತೆಗೆ ಸಾಹಿತ್ಯ ವಲಯದಲ್ಲಿ ಆನಂದ ಲಕ್ಕೂರು ಅವರ ಒಡನಾಟದಲ್ಲಿದ್ದವರೆಲ್ಲಾ ಕೃತಿಚೌರ್ಯ ಮಾಡುವವರು ಎನ್ನುವ ಅಲಿಖಿತ ನಿಯಮವೊಂದು ಜಾರಿಯಲ್ಲಿದ್ದಿದುರಿಂದ ಬಹಳಷ್ಟು ಜನ ಅವರ ಒಡನಾಟವನ್ನು ಇಷ್ಟಪಡುತ್ತಿರಲಿಲ್ಲ. ಆನಂದ ಒಬ್ಬ ಭಾವನಾ ಜೀವಿ. ಆದರೆ ಅಶಿಸ್ತಿನ ಮನುಷ್ಯ. ಬಹಳಷ್ಟು ಜನ ಹುಶಾರಾಗಿರಿ. ಅವರು ಯಾವಾಗ ಬೇಕಾದರೂ ದುಡ್ದು ಕೇಳಬಹುದು ಎಂದಿದ್ದರು. ಆದರೆ ಆನಂದ ಯಾವತ್ತೂ ನನ್ನನ್ನು ಒಂದು ಪೈಸೆಯೂ ಕೇಳದೆ ಪ್ರಾಮಾಣಿಕತೆಯನ್ನು ಮೆರೆದ ಮನುಷ್ಯ.
    ಆದರೆ ತೀರಾ ಇತ್ತೀಚಿಗೆ ಅವರು ಒಂದು ಸ್ಥಿರವಾದ ಉದ್ಯೋಗವನ್ನು ಹೊಂದಿಲ್ಲದ ಮನುಷ್ಯ ಎನ್ನುವದು ಗೊತ್ತಾಯ್ತು. ಕುಡಿತದಿಂದ ಅವರ ಆರೋಗ್ಯ ಹದೆಗೆಟ್ಟಿದೆ ಎನ್ನುವದು ಕೂಡಾ ಗೊತ್ತಾಯಿತು.  ಈಗ್ಗೆ ಒಂದು ತಿಂಗಳ ಹಿಂದೆ ನನಗೆ ಫೋನ್ ಮಾಡಿ ನಾನೀಗ ಗುಲ್ಬರ್ಗಾದಲ್ಲಿ ಪಿ.ಎಚ್ಡಿ. ಮಾಡುತ್ತಿರುವೆ ನನಗೆ ಸ್ಟೈಫಂಡ್ ಬರುತ್ತಿದೆ ಖುಷಿಯಾಗಿದ್ದೇನೆ ಎಂದು ಹೇಳಿದರು. ನಾನು ಹಾಗೆ ಖುಷಿಯಾಗಿ ಇರಿ ಎಂದು ಹರಿಸಿದ್ದೆ. ಈಗ ನೋಡಿದರೆ ಅವರು ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ. ಹೋಗಿ ಬಾ ಗೆಳೆಯ. ಆದರೆ ಮತೊಮ್ಮೆ ಈ ನಾಡಿನಲ್ಲಿ ಹುಟ್ಟಿಬಾರದಿರು.ನೀನೊಬ್ಬ ದಲಿತ ಕವಿಯಾಗಿದ್ದರೂ ಬೇರೆ ಕೆಲವು ದಲಿತ ಲೇಖಕರಿಗೆ ಸಿಕ್ಕಷ್ಟು ಮನ್ನಣೆಗಳು ನಿನಗೆ ಸಿಗಲಿಲ್ಲ. ಅದಕ್ಕೆ ನಿನ್ನ ಹೊಗಳಿ ಭಟ್ಟಂಗಿತನವೂ ಕಾರಣವಿರಬಹುದು. ಆದರೆ ನಿನ್ನ ಕವನಗಳು ನಮ್ಮ ಮನದಲ್ಲಿ ಸದಾ ಹಸಿರಾಗಿರುತ್ತವೆ. 

    ನಾನು ಹಿಂದೆ ಇಂಗ್ಲೀಷಿಗೆ ಅನುವಾದ  ಮಾಡಿದ ಅವರ ಒಂದು ಕವನವನ್ನು ಇಲ್ಲಿ ಹಾಕುವದರ ಮೂಲಕ ಅವರಿಗೆ ನುಡಿನಮನವನ್ನು ಹಮ..ಸಲ್ಲಿಸುತ್ತಿದ್ದೇನೆ. ನಾನು ದೆಹಲಿಯಿಂದ ವಾಪಾಸಾಗುತ್ತಿರುವದರಿಂದ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಾಗುತ್ತಿಲ್ಲ ಎನ್ನುವ ದುಃಖವಿದೆ. 

    *A Cup of Coffee...*

    Would you care to join me for a cup of coffee one final time? 
    No matter
    Whether I erred
    Or you erred,
    Let's  forget it:
    For the last time
    Would you drink just one cup of coffee with me?
    I will make this moment memorable
    Who knows
    It can take turn here itself!
    Or we can split up!
    Who could guess that?
    I say something
    And you something else
    Our words are clashing like two angry rams
    The grief is frozen and
    Blocked all ways between us
    Who knows what lies ahead of us-
    Perhaps we may have vast forests in front of us or so heavy grapes that turn into clouds and hang down to the ground

    Even the rare rivers  can change their course for us,
    Neither of us is thirsty for each other anymore
    Perhaps in the corner of our heart
    There is a small branch breaking sound
    And also the tears falling sound from heartbreak

    Each other's pain has become unbearable burden
    There is no hatred, jealousy or anger-just love
    Is kindness really this cruel?

    Even now there is 
    A layer of kindness in your eyes 
    But unfortunately it doesn't mean anything to either of us
    We have to wait
    Until the veil of despair dissipates
    You are invisible to my eyes
    And I am invisible to yours
    Our shared dreams 
    Have dissolved within us

    The two birds
    With their broken wings
    Now sit on each other's heads.
    This may be our last emcounter! 
    Why should we sit so close while drinking coffee?
    All our past moments seem like long sights now
    Your inner turmoil softly touches me 

    Why should we drink coffee in silence? 
    Even a funeral would not be this quiet! 
    This is our last encounter
    Come on, let’s at least have a cup of coffee together as a memory of our last meeting
    Before, we used  to share two cups of coffee together-
    now they are two anonymous cups
    Should you peep inside this coffee cup
    You will find the pieces Of our past and our conflicting personalities
    that are fighting like two very different dolls. 

    *Kannada Original: Anand Lakkuru*
    *English Translation: Uday Itagi*


    *ಒಂದು ಕಪ್ ಕಾಫಿ*

    ಕೊನೆಯ ಸಾರಿ
    ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ?
    ನಾನು ತಪ್ಪು ಮಾಡಿದೆನೊ,
    ನೀನು ತಪ್ಪು ,
    ಬಿಟ್ಟು ಬಿಡೋಣ:
    ಕೊನೆಯ ಸಾರಿ
    ನನ್ನ ಜೊತೆ ಒಂದೇ ಒಂದು ಕಪ್ ಕಾಫಿ ಕುಡಿಯುತ್ತೀಯಾ?
    ಈ ಗಳಿಗೆಯನ್ನು ಚಿರಸ್ಮರಣೀಯ ಮಾಡುತ್ತೇನೆ
    ಯಾರಿಗೆ ಗೊತ್ತು?
    ಅದು ಇಲ್ಲೇ ತಿರುವು ಪಡೆಯಬಹುದು !
    ಇಲ್ಲ ನಾವಿಬ್ಬರು ಬೇರೆಯಾಗಬಹುದು!

    ಯಾರು ಊಹಿಸಿರುತ್ತಾರೆ?
    ನಾನೊಂದು ಹೇಳುವುದು
    ನೀನೊಂದು ಹೇಳುವುದು
    ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ
    ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ
    ದುಃಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ
    ಯಾರಿಗೆ ಗೊತ್ತು
    ನಮ್ಮೆದುರಿಗೆ ವಿಶಾಲ ವನಗಳಿರಬಹುದು,
    ದ್ರಾಕ್ಷಿ ಹಣ್ಣುಗಳು ಭಾರ ತಡೆಯಲಾರದೆ,
    ನೆಲಕ್ಕೆ ಬಾಗಿದ ಮೋಡಗಳಾಗಬಹುದು.
    ಅಪರೂಪದ ನದಿಗಳೂ ಕೂಡ ನಮ್ಮ ಸುತ್ತ ಪರಿಭ್ರಮಿಸಬಹುದು,
    ಆದರೆ ಏನು ಲಾಭ?
    ನಮ್ಮಿಬ್ಬರಿಗೂ ದಾಹವಾಗುತ್ತಿಲ್ಲಾ...

    ಇಬ್ಬರ ಗುಂಡಿಗೆಯ ಮೂಲೆಯಲ್ಲೂ
    ಸಣ್ಣ ಕೊಂಬೆಯೊಂದು ಮುರಿದು ಬೀಳುವ ಶಬ್ದ
    ದುಃಖದ ಹನಿಗಳು ಸುರಿಯುತ್ತಿರುವ ಶಬ್ದ
    ಅವರವರದು ಅವರವರಿಗೆ ಹೊರಲಾರದ ಭಾರವಾಗುತ್ತಿದೆ
    ದ್ವೇಷವಿಲ್ಲ,
    ಅಸೂಯೆಯಿಲ್ಲ, ಕೋಪವಿಲ್ಲ;
    ಅಲ್ಲಿರುವುದು ಬರೀ ಪ್ರೀತಿಯೇ
    ಆದರೂ ಕರುಣೆಯೆಂಬುದು ಇಷ್ಟೊಂದು ಕ್ರೂರವಾಗಿರುತ್ತಾ?
    ಈಗಲೂ ಕೂಡಾ

    ನಿನ್ನ ಕಣ್ಣಲ್ಲೊಂದು ದಯೆ ಕದಲಾಡುತ್ತಿದೆ
    ಅದು ನಿನಗೂ ನನಗೂ ಕೂಡಾ ಅರ್ಥವಾಗುತ್ತಿಲ್ಲ
    ಹತಾಶೆಯ ಪೊರೆ ಕಣ್ಣಿಂದ ಕಳಚುವವರೆಗೆ
    ನಾವಿಬ್ಬರೂ ಕಾಯಬೇಕಷ್ಟೆ!

    ನನ್ನ ಕಣ್ಣಿಗೀಗ ನೀನು ಎಟುಕುತ್ತಿಲ್ಲ
    ನಿನ್ನ ಕಣ್ಣಿಗೀಗ ನಾನೂ ಎಟುಕುತ್ತಿಲ್ಲ.

    ಈ ಹಿಂದಿನ ಕನಸುಗಳೆಲ್ಲಾ ಇಬ್ಬರಲ್ಲೂ
    ಕರಗಿಹೋಗಿವೆ
    ರೆಕ್ಕೆಮುರಿದ ಹಕ್ಕಿಗಳೆರೆಡು
    ತಲಾ ಒಬೊಬ್ಬರ ತಲೆಯ ಮೇಲೆ ಬಂದು ಕೂತು ಬಿಟ್ಟಿವೆ.

    ಬಹುಶಃ ಇದು ಕೊನೆಯ ಸಾರಿಯ ಭೇಟಿಯಾಗಬಹುದು!
    ನಾವಿಬ್ಬರು ಇಷ್ಟು ಹತ್ತಿರದಲ್ಲಿ ಕಾಫಿ ಕುಡಿಯುವುದು?
    ನೆನ್ನೆಗಳೆಲ್ಲಾ ಇಂದು ದೀರ್ಘ ನಿಟ್ಟುಸಿರುಗಳಾಗುತ್ತಿವೆ
    ನಿನ್ನೊಳಗೆ ಕದಲಾಡುತ್ತಿರುವ ಗೊಂದಲವೊಂದು
    ಮೆತ್ತಗೆ ನನ್ನನ್ನು ತಾಕುತ್ತಿದೆ
    ನಾವಿಬ್ಬರು ಇಷ್ಟು ನಿಶಬ್ದವಾಗಿ ಕಾಫಿ ಕುಡಿಯಬೇಕಾ?
    ಶವಯಾತ್ರೆಯೂ ಕೂಡಾ
    ಇಷ್ಟು  ನಿಶಬ್ದವಾಗಿರುವುದಿಲ್ಲ!
    ಇದು ನಮ್ಮಿಬ್ಬರ ಕೊನೆಯ ಭೇಟಿ
    ಕೊನೆಯ ಸಾರಿಯ ನೆನಪಿಗೆ ತಲಾ ಒಂದೊಂದು ಕಾಫಿ ಕಫ್,
    ಈ ಹಿಂದೆ ಇವೇ ಒನ್ ಬೈ ಟೂಗಳು,
    ಅವೇ ಈಗ ಎರಡು ಅನಾಮಿಕ ಕಾಫೀ ಕಪ್‌ಗಳು
    ಈ ಕಾಫಿ ಕಪ್‌ನೊಳಗೆ ಇಣುಕಿ ನೋಡಿದರೆ
    ನೆನ್ನೆಯೆಂಬ ಚೂರು,
    ನಮ್ಮಿಬ್ಬರ ಪರಿಚಯಗಳು
    ಎರಡು ಬೇರೆ ಬೇರೆ ಬೊಂಬೆಗಳಂತೆ ಕಚ್ಚಾಡುತ್ತಿವೆ

    *-ಲಕ್ಕೂರು ಆನಂದ*

    The verse she wrote...

  • ಗುರುವಾರ, ಸೆಪ್ಟೆಂಬರ್ 19, 2024
  • ಬಿಸಿಲ ಹನಿ
  • ಅವಳ ಕವಿತೆ.. ________ ಮನೆಯಿಂದ ಹೊರಡುವಾಗ ತೊಟ್ಟ ಡ್ರೆಸ್ 'ಹೂ' ಹಗುರ ಸಂಜೆ ಮರಳುವ ಹೊತ್ತಿಗೆ ಹೆಣಭಾರ.. ಯಾವಾಗ ಡ್ರೆಸ್ ಕಳಚುವೆನೋ ಎನ್ನುವ ಧಾವಂತ.. ಮೊದಲಿಗೆ ಎದೆಭಾರ ಇಳಿಸಲೆಂದು ಬ್ರಾ ಬಿಚ್ಚಿ ಕೊಡವಿದರೆ.. ಕಳಚಿದ ಡ್ರಸ್ಸನ್ನೊಮ್ಮೆ ಜಾಡಿಸಿದರೆ.. ಬಿದ್ದ ಅಸಂಖ್ಯಾತ ಕಣ್ಣುಗಳು ಕೆಕ್ಕರಿಸಿ ನೋಡುತ್ತಿವೆ.. ಯಾರ ಕಣ್ಣುಗಳಿವು ? ಹೀಗೇಕೆ ನನಗೆ ಅಂಟಿಕೊಂಡು ಮನೆತನಕ ಬಂದವು.. ಬಹುತೇಕ ಅಪರಿಚಿತ.. ಮತ್ತೆ ಕೆಲವು ಅಕ್ಕ ತಂಗಿ ಮಗಳೇ ಮೇಡಂ ಟೀಚರ್ ಆಂಟೀ ಗೆಳತೀ ಎನ್ನುವ ಚಿರಪರಿಚಿತ ಗಂಡಸರ ಕಣ್ಣುಗಳೆ.. ಧೈರ್ಯ ಮಾಡಿ ಈ ಕಣ್ಣುಗಳಲ್ಲಿ ಕಣ್ಣಿಟ್ಟು ಗಮನಿಸಿದೆ.. ನನ್ನದೆ ಬೆತ್ತಲೆ ಚಿತ್ರ ನೋಡಿ ಬೆಚ್ಚಿಬಿದ್ದೆ...! -ಅರುಣ್ ಜೋಳದಕೂಡ್ಲಿಗಿ The verse she wrote... As I leave my home, the garment I wear feels light and airy, Just like a fragile flower. However, upon my return in the evening, It transforms into a dead weight that compels me to take it off quickly. Initially, to alleviate the weight on my chest If I removed my bra… And if I straightened out my loosened garments... The numerous gazes that had fallen to the ground now fixated on me. Whose gaze do these eyes belong to? Why did they remain fixated on me And come to my home... Mostly they are unknown, But there are some eyes That refers to me as sister, daughter, madam, teacher, aunty, and friend. They are the eyes of men I know. Gathering my courage, I met their gaze... I was startled to see a revealing photo of myself...! Kannada Origin: Arun Jolad Kudligi To English{ Uday Itagi

    ಪ್ರವಾಸ ಮಾಡುತ್ತಲೇ ಇರು.....

  • ಬಿಸಿಲ ಹನಿ
  • ಪ್ರವಾಸ ಮಾಡುತ್ತಲೇ ಇರು 
    ಇಲ್ಲದೆ ಹೋದರೆ ನೀನೊಬ್ಬ ರೇಸಿಸ್ಟ್ ಆಗಬಹುದು 
    ಅಥವಾ ನಿನ್ನ ಚರ್ಮದ ಬಣ್ಣವೇ ಪ್ರಪಂಚದ ಅತ್ಯಂತ ಶ್ರೇಷ್ಠ ಬಣ್ಣವಾಗಿದೆ ಎಂಬ ಭ್ರಮೆಗೆ ಒಳಗಾಗಬಹುದು. 
    ಅಥವಾ ನೀನಾಡುವ ಭಾಷೆಯೇ ಅತ್ಯಂತ ರೊಮ್ಯಾಂಟಿಕ್ ಭಾಷೆ ಎಂದು ನಿನಗನಿಸಬಹುದು
    ಅಥವಾ ನೀನೇ ಮೊದಲಿಗರಲ್ಲಿ ಮೊದಲಿಗ ಎಂಬ ಹುಸಿ ನಂಬಿಕೆಯಲ್ಲಿ ಬದುಕತೊಡಗಬಹುದು. 

    ಪ್ರವಾಸ ಮಾಡುತ್ತಿರು 
    ಇಲ್ಲದೆ ಹೋದರೆ 
    ನಿನ್ನ ವಿಚಾರಧಾರೆಗಳು 
    ಗಟ್ಟಿಯಾಗುವದಿಲ್ಲ 
    ಅಥವಾ ಅವು ಹೊಸ ಹೊಳಹುಗಳಿಂದ ತುಂಬುವದಿಲ್ಲ 
    ನಿನ್ನ ಕನಸುಗಳು ಅಶಕ್ತ ಕಾಲುಗಳೊಂದಿಗೆ ಹುಟ್ಟುತ್ತವೆ 
    ಆಗ ನೀನು ಟಿ. ವಿ. ಶೋಗಳನ್ನು ನಂಬಲು ಶುರು ಮಾಡುತ್ತಿ ಮತ್ತು ಅಲ್ಲಿ ನಿನಗೆ ಸೃಷ್ಟಿಯಾಗುವ ಶತ್ರುಗಳೆಲ್ಲಾ
    ದುಸ್ವಪ್ನವಾಗಿ ಕಾಡುತ್ತಾ ನೀನು ಸದಾ ಭಯದಲ್ಲಿ ಬದುಕುವಂತೆ ಮಾಡುತ್ತಾರೆ 

    ಪ್ರವಾಸ ಮಾಡುತ್ತಿರು
    ಏಕೆಂದರೆ 
    ನೀನು ಕೈಗೊಳ್ಳುವ ಪ್ರವಾಸವು ನಿನಗೆ ಪ್ರಪಂಚದ ಮೂಲೆಮೂಲೆಯಲ್ಲಿರುವರೆಲ್ಲ ರಿಗೂ 
    ಗುಡ್ ಮಾರ್ನಿಂಗ್ ಹೇಳಲು ಕಲಿಸುತ್ತದೆ 

    ಪ್ರವಾಸ ಮಾಡುತ್ತಿರು
    ಏಕೆಂದರೆ 
    ಪ್ರವಾಸವು ನಿನಗೆ 
    ನಿನ್ನ ಎದೆಯಲ್ಲಿ ಕತ್ತಲಿದ್ದಾಗ್ಗ್ಯೂ ಗುಡ್ ನೈಟ್ ಹೇಗೆ ಹೇಳಬೇಕೆಂಬುದನ್ನು ಕಲಿಸಿಕೊಡುತ್ತದೆ 

    ಪ್ರವಾಸ ಮಾಡುತ್ತಿರು
    ಏಕೆಂದರೆ 
    ಪ್ರವಾಸವು ಪ್ರತಿಭಟಿಸುವದನ್ನು ಸ್ವಾವಲಂಬಿತನವನ್ನು ಮತ್ತು ಜನರು ಯಾರು ಎತ್ತ ಎಂಬುದನ್ನು ನೋಡದೆ ಎಲ್ಲರನ್ನೂ ಒಳಗೊಳ್ಳುವದನ್ನು ಕಲಿಸಿಕೊಡುತ್ತದೆ 
    ಮಾತ್ರವಲ್ಲ ನಾವೇನಾಗಿದ್ದೇವೆ 
    ಅವರೇನಾಗಿದ್ದಾರೆ 
    ನಾವೇನಾಗಿರಬೇಕಿತ್ತು 
    ಅವರೇನಾಗಿರಬೇಕಿತ್ತು ಎನ್ನುವದನ್ನು ಸಹ ಕಲಿಸಿಕೊಡುತ್ತದೆ. 
    ನಮ್ಮ ಸಾಮರ್ಥ್ಯವೇನು ಅವರ ಸಾಮರ್ಥ್ಯವೇನು ಹಾಗೂ 
    ಗಡಿಗಡಿಗಳಾಚೆ,
    ಸಂಸ್ಕೃತಿ- ಸಂಪ್ರದಾಯಗಳಾಚೆಯೂ 
    ನಾವು ಹೇಗೆ ಒಂದೇ ಕುಟುಂಬದವರಾಗಿರ ಬಹುದೆನ್ನುವ ಸತ್ಯವನ್ನು ಹೇಳಿಕೊಡುತ್ತದೆ 
    ಒಟ್ಟಿನಲ್ಲಿ ಪ್ರವಾಸವು ಎಲ್ಲೆ ಮೀರುವದನ್ನು ಹೇಳಿಕೊಡುತ್ತದೆ.


    ಪ್ರವಾಸ ಮಾಡುತ್ತಿರು
    ಇಲ್ಲದೆ ಹೋದರೆ 
    ನೀನೇ ಒಂದು ದೊಡ್ಡ ಪನೊರಮ ಎಂದು ಭಾವಿಸಿಕೊಳ್ಳುತ್ತಿಯ 
    ಮತ್ತು ಹೊರಗಿರುವ ಅನೇಕ ಸುಂದರ ದೃಶ್ಯಗಳನ್ನು ಕಳೆದುಕೊಂಡು ಬಣ್ಣಗೆಟ್ಟ ಮನುಷ್ಯನಾಗಿ ಬದುಕುತ್ತೀ!

    *ಮೂಲ ಇಟ್ಯಾಲಿಯನ್: ಗಿಯೋ ಇವನ್*
    *ಕನ್ನಡಕ್ಕೆ: ಉದಯ ಇಟಗಿ*