Let’s love simply, my friend.
No excessive drama,
No intense emotions,
No endless promises,
No far-fetched plans,
No gifts given after too much thought –
None of these are necessary.
Clear communication, understanding,
Time that feels entirely ours when we're together,
A warm hug,
An unspoken connection through our eyes,
Mutual compassion – that's all we need.
Life is already complex enough.
Let’s love as simply as we can.
Kannada Original: Kusuma Ayarahalli
English Translation: Uday Itagi
ಸರಳವಾಗಿ ಪ್ರೇಮಿಸೋಣ ಗೆಳೆಯ
ವಿಪರೀತ ನಾಟಕ,
ತೀವ್ರಭಾವುಕತೆ,
ಮುಗಿಯದ ಭರವಸೆ
ಬಲುದೂರದ ಯೋಜನೆಗಳು,
ಬಹಳ ಯೋಚಿಸಿ ಕೊಡುಕೊಳ್ಳುವ ಉಡುಗೊರೆಗಳು,
ಯಾವುದಂದರೆ ಯಾವುದೂ ಬೇಡ
ಸ್ಪಷ್ಟ ಸಂವಹನ, ಅರಿತುಕೊಳ್ಳುವಿಕೆ
ಜೊತೆಗಿರುವಷ್ಟು ಹೊತ್ತೂ
ನಮ್ಮದು ಮಾತ್ರವೆನಿಸುವ ಸಮಯ
ಒಂದು ಗಾಢ ಅಪ್ಪುಗೆ.
ಕಣ್ಣ ಮಾತು. ಪರಸ್ಪರ ಕಾರುಣ್ಯ!
ಸಾಕಿಷ್ಟು.
ಬದುಕು ಆಗಲೇ ಸಾಕಷ್ಟು ಸಂಕೀರ್ಣವಾಗಿದೆ.
ನಾವು ಆದಷ್ಟೂ ಸರಳವಾಗಿಯೇ ಪ್ರೀತಿಸೋಣ!
- ಕುಸುಮ ಆಯರಹಳ್ಳಿ
(ಈ ಫೊಟೋ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದಾಳೆಂದು ಸುದ್ದಿಯಾಗುತ್ತಿರುವ ಸುಂದರಿ ಮೊನಾಲಿಸಾಳದು. ಎಂತಾ ಕಣ್ಣು! ಒಂದು ಪದ್ಯ ಹುಟ್ಟಿಸಿಬಿಟ್ಟಿತು.)