God
He exhilarates when I get hurt
Because he owns a pharmaceutical company
When he sees my bare feet he rejoices,
Because he owns a shoe company.
He becomes happy when he sees me naked
Because he owns a clothing company...
The Owners(Master)
manufacture letters,
The sorrow of the Common people
Are written by these letters.
The owners(Master) make
the breathing tube,
the heart, the tongue,
the stomach,
Life, the rhythm of life,
The dream that I See...
The owner
Constructs a Road and makes my feet,
Makes feet and concoct shoes....
Contrive dreams and make Eyes.
The Owner(Master)
Turns
Thirst into Coca cola,
Desires into Multi-Complex,
Hunger into Pizza,
Manufactures Poison to Kill me.
If the cheeks of my beloved is
Caressed,
Beauty cream of a Company
Sticks on my fingers,
the fragrance of Branded perfume comes if smelt,
My Darling, doesn't smell
Natural.
The fingers accustomed
Of touching the forehead of a Sick child,
Are Nowadays
Touching the Obscene Profile Picture of a Celebrity,
Leaving the plough, Renegade mind is pressing the like button
Under the Alarming News of
Prime Minister's U.S Visit.
After all who is binding and making me
To Crawl
Beneath the Master's Boot?
24 hours of Life
A bit is sucked by Social Networking Sites,
A bit by Manufacturing Firms,
A bit by MNCs,
A bit by The Government ,
A bit by Filthy Politics ,
A bit by THE GOD,
A bit by Life itself
Whatever is left out,
Its accounting is left in the hands of a Powerful contractor
And
Is being sent
To any Political Party's Rally And In return
Recieves the ecstacy of Police bullet
On his forehead
You say!
On what topic is your most adorable poet...
Desinging a poem at this moment?
By Tearing my eyes out,
Breaking my heart, Foreskining me, Beheading me, Sucking my blood,
Someone is there
Who is following Ramdev's Pranayama,
And is reducing the Obesity/Cholestrol,
Visiting the temples,
Is living a Sophisticated Life.
Someone is there
Who is the centre of gravity,
Of these things!
Who is designing your life against your will,
Who is mapping your vision against your dreams,
Who is building
Another Earth
To keep all the weaks against your sensibilities.
Which is against your culture,
Against your language, Aginst your consciousness,
They are making heaven and
Are trying to enthuse Fear within you
That
If you do not follow his religion/Sect
Then
Your civilization will declare you as Blasphemists/ defilled/Sinner,
And will go to the hell.
Someone is there
Who is becoming
The master of your Life,
Or Becoming God!
Dear Nietzsche Said...
God is dead,
How can the God be declared Dead?
Manoj Bogati (Nepali)
ಯಾರೋ ನಿಮ್ಮ
ಜೀವನದ ಯಜಮಾನ ಆಗುತ್ತಿದ್ದಾರೆ1
ನನಗೆ ಹುಷಾರು ತಪ್ಪಿದಾಗ ಅವನು ಕುಣಿದು ಕುಪ್ಪಳಿಸುತ್ತಾನೆ
ಏಕೆಂದರೆ ಅವನು ಫಾರ್ಮಾಸೆಟಿಕಲ್ ಕಂಪನಿ ನಡೆಸುತ್ತಾನೆ
ನಾನು ಬರೀಗಾಗಲಲ್ಲಿ ತಿರುಗಾಡುವದನ್ನು ಕಂಡು ಅವನು ಹಿರಿಹಿರಿ ಹಿಗ್ಗುತ್ತಾನೆ
ಏಕೆಂದರೆ ಅವನು ಶೂ ಕಂಪನಿಯನ್ನು ನಡೆಸುತ್ತಾನೆ
ನಾನು ಬೆತ್ತಲೆ ತಿರುಗುವದನ್ನು ನೋಡಿ ಅವನು ಖುಷಿಪಡುತ್ತಾನೆ
ಏಕೆಂದರೆ ಅವನು ಬಟ್ಟೆ ಅಂಗಡಿಯನ್ನು ನಡೆಸುತ್ತಾನೆ
ಬಂಡವಾಳಶಾಹಿಗಳು ಕಾಗದಗಳನ್ನು ತಯಾರಿಸುತ್ತಾರೆ
ಆ ಕಾಗದಗಳ ಮೇಲೆ ಸಾಮಾನ್ಯ ಜನರ ಕಷ್ಟಗಳು ಬರೆಯಲ್ಪಡುತ್ತವೆ
ಬಂಡವಾಳಶಾಹಿಗಳು ಕಣ್ಣು, ಮೂಗು, ಹೃದಯ, ನಾಲಿಗೆ, ಹೊಟ್ಟೆ ಹೀಗೆ ಎಲ್ಲವನ್ನೂ ತಯಾರಿಸುತ್ತಾರೆ
ಅಷ್ಟೇ ಏಕೆ ಜಿವನ, ಜೀವನ ಕ್ರಮವನ್ನು ಸಹ ರೂಪಿಸುತ್ತಾರೆ
ಆದರೆ ನಾನು ಕನಸು ಕಾಣುತ್ತಿರುವದೇ ಬೇರೆ......
ಬಂಡವಾಳಶಾಹಿಗಳು
ರಸ್ತೆ ನಿರ್ಮಿಸುತ್ತಾರೆ ರಸ್ತೆಗನುಗುಣವಾಗಿ ನನ್ನ ಪಾದಗಳನ್ನು ರೂಪಿಸುತ್ತಾರೆ
ಪಾದಕ್ಕನುಗುಣವಾಗಿ ಶೂಗಳನ್ನು ಮಾಡುತ್ತಾರೆ
ಅಷ್ಟೇ ಅಲ್ಲ ಕನಸುಗಳನ್ನು ಸಹ ಅವರೇ ಯೋಜಿಸುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಕಂಗಳನ್ನು ಸಹ ಅವರೇ ರೂಪಿಸುತ್ತಾರೆ
ಬಂಡವಾಳಶಾಹಿಗಳು
ಬಾಯಾರಿಕೆಯನ್ನು ಕೊಕೊಕೋಲಾವನ್ನಾಗಿಯೂ
ಬಯಕೆಗಳನ್ನು ಮಲ್ಟಿಕಾಂಪ್ಲೆಕ್ಸ್ ಗಳಾಗಿಯೂ
ಹಸಿವನ್ನು ಪಿಜ್ಜಾಗಳಾಗಿಯೂ
ಪರಿವರ್ತಿಸುತ್ತಾರೆ
ಒಟ್ಟಿನಲ್ಲಿ ತಯಾರಕರು ಹನಿಹನಿಯಾಗಿ ವಿಷವಿಕ್ಕುತ್ತಿದ್ದಾರೆ
ಇನ್ನೊಂದು ತಮಾಷೆ ಕೇಳಿ.......
ಈಗೀಗ ನನ್ನ ಪ್ರೇಯಸಿಗೆ ಮುತ್ತಿಟ್ಟಾಗ
ಅವಳು ಮೆತ್ತಿಕೊಂಡಿರುವ ಬ್ಯೂಟಿ ಕಂಪನಿಯೊಂದರ ಕ್ರೀಮು ನನ್ನ ತುಟಿ, ಬೆರಳುಗಳಿಗೂ ಮೆತ್ತುತ್ತದೆ
ಒಂದುವೇಳೆ ಅವಳನ್ನು ಮೂಸಿದರೆ ಬ್ರ್ಯಾಂಡೆಡ್ ಪರ್ಫ್ಯೂಮ್ ಸುವಾಸನೆ ಬರುತ್ತದೆ
ಒಟ್ಟಿನಲ್ಲಿ ನನ್ನ ಡಾರ್ಲಿಂಗ್ ಸಹಜ ಪರಿಮಳ ಸೂಸುವದನ್ನು ನಿಲ್ಲಿಸಿ ಬಹಳ ದಿನವಾಯಿತು
ಹುಷಾರಿಲ್ಲದ ಮಗುವಿನ
ಹಣೆಯನ್ನು ಮುಟ್ಟಿಮುಟ್ಟಿ ಆರೈಕೆ ಮಾಡುತ್ತಿದ್ದ ಕೈಗಳು
ಈಗೀಗ ಸೆಲೆಬ್ರೆಟಿಯೊಬ್ಬಳ ಅಶ್ಲೀಲ ಪ್ರೊಫೈಲ್ ಪಿಚ್ಚರನ್ನು ಮುಟ್ಟಿಮುಟ್ಟಿ ಖುಷಿಪಡುತ್ತಿವೆ
ಉತ್ತಬೇಕಾಗಿದ್ದ ನೇಗಿಲನ್ನು ಅಲ್ಲಿಯೇ ಬಿಟ್ಟು
ಪ್ರಧಾನ ಮಂತ್ರಿಯ ಯೂ.ಎಸ್. ಭೇಟಿಯ ಚಿತ್ರವೊಂದಕ್ಕೆ ಲೈಕ್ ಬಟನ್ ಒತ್ತುವದರಲ್ಲಿ ಮಗ್ನವಾಗಿವೆ
ಭ್ರಷ್ಟಗೆಟ್ಟ ಮನಸ್ಸುಗಳು
ಹಾಗಾದರೆ ನನ್ನನ್ನು ಯಜಮಾನನ ಬೂಟಿನ ಕೆಳಗೆ ಬಿದ್ದು ಹೊರಳಾಡುವಂತೆ ಮಾಡುತ್ತಿರುವರಾದರೂ ಯಾರು?
೨೪ ಗಂಟೆಯ ಜೀವನ
ಅದರಲ್ಲೊಂದಿಷ್ಟು ಹೊತ್ತು ಸೋಷಿಯಲ್ ನೆಟ್ವರ್ಕಿಂಗ್
ಸೈಟ್ ಗಳ ಜೊತೆ
ಒಂದಿಷ್ಟು ಹೊತ್ತು ಜಾಹಿರಾತುಗಳ ಜೊತೆ
ಒಂದಿಷ್ಟು ಹೊತ್ತು MNC ಗಳ ಜೊತೆ
ಒಂದಿಷ್ಟು ಹೊತ್ತು ಸರಕಾರದ ಜೊತೆ
ಒಂದಿಷ್ಟು ಹೊತ್ತು ಹೊಲಸು ರಾಜಕಾರಣದ ಜೊತೆ
ಒಂದಿಷ್ಟು ಹೊತ್ತು ದೇವರ ಜೊತೆ
ಇಷ್ಟೆಲ್ಲಾ ಕಳೆದು ಹೊತ್ತು ಉಳಿದರೆ ಅದು ನಮ್ಮ ಬದುಕಿನ ಜೊತೆ
ಇನ್ನೂ ಏನಾದರು ಉಳಿದಿದ್ದರೆ
ಅದರ ಅಕೌಂಟ್ಸೆಲ್ಲಾ ಒಬ್ಬ ಪವರಫುಲ್ ಕಾಂಟ್ರ್ಯಾಕ್ಟರ್ ಬಳಿ ಉಳಿದಿರುತ್ತದೆ ಮತ್ತು ಅದನ್ನೆಲ್ಲಾ ಪೊಲಿಟಿಕಲ್ ಪಾರ್ಟಿಯ ರ್ಯಾಲಿಗೆ ಕಳಿಸಲಾಗುತ್ತದೆ
ಇಂಥ ಸಂದರ್ಭದಲ್ಲಿ ನೀವು ಕೇಳುತ್ತೀರಿ
ನಿಮಗೆ ತುಂಬಾ ಇಷ್ಟವಾದ ಕವಿ ಈಗ ಯಾವ ಕವನವನ್ನು ಬರೆಯುತ್ತಿದ್ದಾನೆಂದು?
ನನ್ನ ಕಣ್ಣುಗಳನ್ನು ಕಿತ್ತು
ಹೃದಯವನ್ನು ಒಡೆದು
ನನ್ನ ಸುಂತಿಮಾಡಿ
ತಲೆ ಕತ್ತರಿಸಿ ರಕ್ತಹೀರಲು
ಯಾವನೋ ಒಬ್ಬನಿದ್ದಾನೆ
ಬಾಬಾ ರಾಮದೇವನ ಪ್ರಾಣಾಯಾಮವನ್ನು ಯಾರು ತಾನೆ ಅನುಸರಿಸುತ್ತಿದ್ದಾರೆ
ಮತ್ತು ಯಾರು ತಾನೆ ಒಬೆಸಿಟಿ, ಕೊಲೆಸ್ಟ್ರಾಲನ್ನು ಕಡಿಮೆಮಾಡುತ್ತಿದ್ದಾರೆ
ಎಲ್ಲರೂ ಗುಡಿಗುಂಡಾರಗಳನ್ನು ಸುತ್ತುತ್ತಾ
ನಯನಾಜೂಕಿನ ಬದುಕನ್ನು ಬದುಕುತ್ತಿದ್ದಾರೆ
ಈ ಎಲ್ಲದರ ಗುರುತ್ವಕೇಂದ್ರ ಯಾರು?
ನಿನ್ನ ಇಚ್ಚೆಯ ವಿರುದ್ದ ನಿನ್ನ ಬದುಕನ್ನು ರೂಪಿಸುತ್ತಿರುವರು ಯಾರು?
ನೀನು ಕನಸು ಕಾಣದಂತೆ ನಿನಗೆ ಮಂಪರನ್ನು ಆವರಿಸುತ್ತಿರುವವರು ಯಾರು?
ಇನ್ನೊಂದು ಜಗತ್ತನ್ನು ಸೃಷ್ಟಿಸುತ್ತಿರುವವರು ಯಾರು?
ನಿನ್ನ ಸಂವೇದನೆಗಳನ್ನು
ನಿನ್ನ ಸಂಸ್ಕೃತಿ, , ನಿನ್ನ ಭಾಷೆ, ನಿನ್ನ ಪ್ರಜ್ಞಗಳಿಗೆ ವಿರುದ್ಧವಾಗಿ ದುರ್ಬಲಗೊಳಿಸುತ್ತಿರುವವರು ಯಾರು?
ಅವರು ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ
ನಿಮ್ಮೊಳಗೆ ಭಯವನ್ನು ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ
ಒಂದು ವೇಳೆ
ನೀವು ಅವರ ಧರ್ಮ/ಪಂಥವನ್ನು ಅನುಸರಿಸದಿದ್ದರೆ
ನಿಮ್ಮ ಸೋ ಕಾಲ್ಡ್ ಸೊಸೈಟಿಯು ನಿಮ್ಮನ್ನು ದೇಶದ್ರೋಹಿ ಎಂದು ಘೋಷಿಸುತ್ತದೆ,
ಮತ್ತು ನೀವು ನರಕಕ್ಕೆ ಹೋಗಬೇಕಾಗುತ್ತದೆ.
ಯಾರೋ ಇದ್ದಾರೆ
ಯಾರೋ ನಿಮ್ಮ ಜೀವನದ ಯಜಮಾನ ಆಗುತ್ತಿದ್ದಾರೆ
ಅಥವಾ ದೇವರಾಗುತ್ತಿದ್ದಾರೆ!
ಆತ್ಮೀಯ ಸ್ನೇಹಿತನೊಬ್ಬ ಹೇಳಿದನು
ದೇವರು ಸತ್ತಿದ್ದಾನೆ ಎಂದು
ಹಾಗಾದರೆ ದೇವರು ಸತ್ತ ಎಂದು ಹೇಗೆ ಘೋಷಿ ಸುವದು?
ಮೂಲ ನೇಪಾಳಿ: ಮನೋಜ್ ಬೊಗಾಟಿ
ಕನ್ನಡಕ್ಕೆ: ಉದಯ ಇಟಗಿ
Yes, I’m Black. Or Black. Or, Acoloured
Yes, I’m Black.
Or Black.
Nobody becomes dirty
If touched by some black.
Like, nobody becomes clean
If touched by some white.
Alphabets are also black.
Your name is written by nigger black letters.
The wound that grows on your skin
Doesn’t spare mine.
You are White.
I am Black.
My short nose is as tall as me.
Or, is as tall as your long nose.
My footsteps are as short as my height
But I might walk with you.
I might walk more than you.
Colour doesn’t walk.
You are showing your child the world
By pointing with the fingers of your hand.
I’m not pointing with my toe.
They say that eyes are irritated by white light.
But I never closed my eyes.
I’m farer than colour.
Darker than colour.
The engine of your vehicle might be well.
But then that’ll lead you only to the destination of mine.
You couldn’t follow me yet?
Soil doesn’t have colour.
Water doesn’t have colour.
Fire doesn’t have colour.
Wind doesn’t have colour.
Sound doesn’t have colour.
This is same as
Truth doesn’t have colour.
Religion doesn’t have colour.
Peace doesn’t have colour.
Love doesn’t have colour.
Passivity doesn’t have colour.
Who you are to talk about colour?
What if I am Black?
Yes, I am Black.
Black, or Black.
Or acoloured.
-Manoj Bogati
ಹೌದು, ನಾನು ಕಪ್ಪಗಿದ್ದೇನೆ, ಕರ್ರಗಿದ್ದೇನೆ ಅಥವಾ ಬಣ್ಣರಹಿತನಾಗಿದ್ದೇನೆ
ಹೌದು, ನಾನು ಕಪ್ಪಗಿದ್ದೇನೆ, ಕರ್ರಗಿದ್ದೇನೆ
ಅಥವಾ ಬಣ್ಣರಹಿತನಾಗಿದ್ದೇನೆ
ಏನಿವಾಗ?
ಕಪ್ಪನ್ನು ಮುಟ್ಟಿದ ತಕ್ಷಣ
ಯಾರೂ ಕಪ್ಪಾಗುವದಿಲ್ಲ
ಅಥವಾ ಬಿಳಿ ಬಣ್ಣವನ್ನು ಮುಟ್ಟಿದ ತಕ್ಷಣ
ಯಾರೂ ಬೆಳ್ಳಗಾಗುವದಿಲ್ಲ
ವರ್ಣಾಕ್ಷರಗಳು ಸಹ ಕಪ್ಪಾಗಿವೆ
ನಿನ್ನ ಹೆಸರನ್ನು ಸಹ ಕಡುಕಪ್ಪು ಅಕ್ಷರಗಳಲ್ಲಿಯೇ ಬರೆಯಲಾಗುತ್ತದೆ
ನೀನು ಬಿಳಿಯ
ನಾನು ಕರಿಯ
ನೀನು ಬೆಳ್ಲಗಿದ್ದಾಕ್ಷಣ ನಿನ್ನ ಚರ್ಮದ ಮೇಲೆ ಬೆಳೆಯುವ ಕುರು ನಿನ್ನನ್ನು ಸುಮ್ಮನೆ ಬಿಡುವದಿಲ್ಲ
ನನ್ನ ಮೂಗು
ನನ್ನಷ್ಟೇ ಉದ್ದವಾಗಿದೆ
ಅಥವಾ ನಿನ್ನಷ್ಟೇ ಎತ್ತರವಾಗಿದೆ
ನನ್ನ ಹೆಜ್ಜೆಗುರುತುಗಳು ನನ್ನಷ್ಟೇ ಎತ್ತರವಾಗಿವೆ
ಆದರೂ ನಾನು ನಿನ್ನೊಂದಿಗೆ ನಡೆಯಬಲ್ಲೆ
ಅಥವಾ ನಿನಗಿಂತ ಹೆಚ್ಚೇ ನಡೆಯಬಲ್ಲೆ
ನಿನಗೆ ತಿಳಿದಿರಲಿ
ಬಣ್ಣ ನಡೆಯುವದಿಲ್ಲ
ನೀನು ನಿನ್ನ ಮಗುವಿಗೆ ನಿನ್ನ ಬೆರಳಿನಿಂದಲೇ ಈ ಜಗತ್ತನ್ನು ತೋರಿಸುತ್ತಿ
ಮತ್ತಿನ್ನೇನು?
ನಾನು ನನ್ನ ಕಾಲ್ಬೆರಳಿನಿಂದ ತೋರಿಸುತ್ತ್ತೇನೆ ಎಂದುಕೊಂಡೆಯಾ?
ಜನ ಹೇಳುತ್ತಾರೆ ಬಿಳಿ ಬಣ್ಣ ಕಣ್ಣುಕುಕ್ಕಿಸುತ್ತದೆಂದು
ಆದರೆ ನಾನು ಯಾವತ್ತೂ ಕಣ್ಣುಮುಚ್ಚಿಲ್ಲ
ನಾನು ಬಣ್ಣಕ್ಕಿಂತ ಬೆಳ್ಳಗಿದ್ದೇನೆ
ಬಣ್ಣಕ್ಕಿಂತ ಕಪ್ಪಗಿದ್ದೇನೆ
ನಿನ್ನ ಬಳಿ ಒಳ್ಲೆಯ ಕಾರು ಇರಬಹುದು
ಆದರೆ ಕೊನೆಗೆ ಅದು ಕಪ್ಪು ನೆಲದ ಮೇಲೆ ನಡೆಯಲೇಬೇಕು
ಆದರೂ ನೀನು ನನ್ನನ್ನು ಅನುಸರಿಸುವದಿಲ್ಲವೇ?
ಮಣ್ಣಿಗೆ ಬಣ್ಣವಿಲ್ಲ
ನೀರಿಗೆ ಬಣ್ಣವಿಲ್ಲ
ಬೆಂಕಿಗೆ ಬಣ್ಣವಿಲ್ಲ
ಗಾಳಿಗೆ ಬಣ್ಣವಿಲ್ಲ
ಶಬ್ದಕ್ಕೆ ಬಣ್ಣವಿಲ್ಲ
ಅಂತೆಯೇ
ಸತ್ಯಕ್ಕೆ ಬಣ್ಣವಿಲ್ಲ
ಧರ್ಮಕ್ಕೆ ಬಣ್ಣವಿಲ್ಲ
ಶಾಂತಿಗೆ ಬಣ್ಣವಿಲ್ಲ
ಪ್ರೀತಿಗೆ ಬಣ್ಣವಿಲ್ಲ
ಜಡತ್ವಕ್ಕೆ ಬಣ್ಣವಿಲ್ಲ
ಬಣ್ಣಗಳ ಬಗ್ಗೆ ಮಾತನಾಡಲು ನೀನು ಯಾರು?
ನಾನು ಕರ್ರಗಿದ್ದರೆ ಏನಿವಾಗ?
ಹೌದು, ನಾನು ಕಪ್ಪಗಿದ್ದೇನೆ, ಕರ್ರಗಿದ್ದೇನೆ
ಅಥವಾ ಬಣ್ಣವಿಲ್ಲದವನಾಗಿದ್ದೇನೆ
ಏನಿವಾಗ?
ಮೂಲ ನೇಪಾಳಿ: ಮನೋಜ್ ಬೊಗಾಟಿ
ಕನ್ನಡಕ್ಕೆ: ಉದಯ ಇಟಗಿ
History
Ancestor bones are discovered
Wherever dug
This is Teeth.
This has chewed down an age.
It has bitten Time to dust and repaired a house-wall.
This is Shin-bone.
A monk in a village invokes for peace
Blowing this with his mouth
During uneasy hours,
A procession passes through the town
Crying slogans
Of “Long Live”
Of “Down With”
While he is still blowing
The news of someone hacking time’s head to death
Is published in the news-magazine
The very next day
And this is spine,
Folk-story
For descendants wearing bamboo-spines
Don’t know what bone is this.
It’s broken so bluntly
Looks like it split
As it fell into the pit of some evil design
This skull
Wearing a fatal cut-mark of a khukuri
Was grounded under
Intellectuals talk of analyzing history threadbare,
I dug up in the patio at the front
Only to uncover my own placental lump
I think I am digger
Who knows no digging!
ಇತಿಹಾಸ
ಅಗೆದ ಕಡೆಗೆಲ್ಲಾ
ಪೂರ್ವಿಕರ ಮೂಳೆಗಳು ಸಿಕ್ಕಿವೆ
ಇದು ಅವರ ಹಲ್ಲು
ವರ್ಷವರ್ಷಗಳವರೆಗೂ ಅಗೆದಿದೆ
ಕಾಲವನ್ನು ಕಡಿದು ಪುಡಿಮಾಡಿ
ಮನೆಯಗೋಡೆಯನ್ನು ರಿಪೇರಿ ಮಾಡಿದೆ
ಇದು ಮೊಣಕಾಲು ಮೂಳೆ
ಇದನ್ನು ಹಳ್ಳಿಯೊಂದರ ಸನ್ಯಾಸಿಯೊಬ್ಬ
ಪ್ರಕ್ಷುಬ್ದ ಸಮಯದಲ್ಲಿ
ತನ್ನ ಬಾಯಲ್ಲಿಟ್ಟುಕೊಂಡು ಊದುತ್ತಾನೆ
ಮೆರವಣಿಗೆಯೊಂದು ಊರತುಂಬಾ ಹೊರಡುತ್ತದೆ
"ಹೆಚ್ಚು ದಿನ ಬದುಕಿರಿ"
"ಕೆಳಗಿಳಿಯಿರಿ"
ಎಂಬ ಘೋಷಣೆಗಳನ್ನು ಕೂಗುತ್ತಾ.
ಅವನಿನ್ನೂ ಊದುತ್ತಿರುವಾಗಲೇ
ಯಾರೋ ಒಬ್ಬರು ಕಾಲನ ತಲೆಯನ್ನು ಕಡಿದು
ಉರುಳಿಸಿದ ಸುದ್ದಿಯೊಂದು ಮಾರನೆಯ ದಿನ ಮುಂಜಾನೆ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ
ಇದು ಬೆನ್ನುಮೂಳೆ
ಜಾನಪಸ ಕಥೆಯೊಂದು ಹೇಳುತ್ತದೆ
ಪೂರ್ವಜರೆಲ್ಲಾ ಬಿದಿರಿನ ಬೆನ್ನುಮೂಳೆಯನ್ನು ಹೊಂದಿದ್ದರೆಂದು
ಇದು ಯಾವ ಮೂಳೆಯೆಂದು ಗೊತ್ತಿಲ್ಲ
ಯಾವುದೋ ದುಷ್ಟಶಕ್ತಿಗೆ ಅಡ್ಡಾದಿಡ್ಡಿಯಾಗಿ ಮುರಿದಿದೆ
ಇದು ತಲೆಬುರುಡೆ
ಇದರ ಮೇಲೆ ಹೊಡೆದ ಗುರುತಿದೆ
ಆಳದಲ್ಲಿ ಹೂತುಕೊಂಡಿತ್ತು
ಬುದ್ಧಿಜೀವಿಗಳು ಇದರ ಇತಿಹಾಸದ ಎಳೆಯನ್ನು ಹುಡುಕಿಹೊರಟಿದ್ದಾರೆ
ನಾನು ತಲೆಬಾಗಿಲಲ್ಲಿರುವ ಒಳಾಂಗಣದಲ್ಲಿ ಅಗೆಯುತ್ತೇನೆ
ಹೊಕ್ಕಳ ಬಳ್ಳಿಯ ಮೂಲವನ್ನು ಹುಡುಕುತ್ತಾ
ನಾನೊಬ್ಬ ಅಗೆಯುವವ
ಆದರೆ ಹೇಗೆ ಅಗೆಯಬೇಕೆಂದು ಗೊತ್ತಿಲ್ಲದವ!
ಮೂಲ ನೇಪಾಳಿ: ಮನೋಜ್ ಬೊಗಾಟಿ
ಕನ್ನಡಕ್ಕೆ: ಉದಯ ಇಟಗಿ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ