ಇಂದು ದೀಪಾವಳಿ
ಎಲ್ಲರ ಮನೆಯಂಗಳದಲ್ಲೂ
ಬರಿ ದೀಪಗಳದೇ ಸಾಲು
ಎಲ್ಲೆಡೆ ಝಗಮಗಿಸುವ ಬೆಳಕು!
ಆದರೂ ಅಲ್ಲೆಲ್ಲೋ ಒಂದು ಕಡೆ ಕತ್ತಲು ಹಾಗೆ ಉಳಿದುಕೊಂಡುಬಿಟ್ಟಿದೆ
ಎಲ್ಲಿ ಎಂದು ಎಲ್ಲ ಕಡೆ ಮತ್ತೆ ಮತ್ತೆ ಕಣ್ಣು ಹಾಯಿಸಿದೆ
ಗೊತ್ತಾಗಲೇ ಇಲ್ಲ!
ಸುಮ್ಮನೆ ಹುಡುಕುತ್ತಾ ಹೊರಟೆ ಬುದ್ಧನಂತೆ
ಯಾರೋ ನಕ್ಕು ಹೇಳಿದಂತಾಯಿತು
ಹುಚ್ಚಪ್ಪ! ಕತ್ತಲಿರುವದು ಹೊರಗಲ್ಲ ನಿನ್ನೊಳಗೆ ಎಂದು
ಅರೆರೆ, ಹೌದಲ್ಲವೆ?
ಒಳಗೆ ಎಷ್ಟೊಂದು ಕತ್ತಲು ಗೂಡು ಕಟ್ಟಿದೆ
ನಾವು ಒಳಗಿನ ಕತ್ತಲನ್ನು ಒಳಗೇ ಬಚ್ಚಿಟ್ಟು
ಹೊರಗೆ ಮಾತ್ರ ಹಣತೆಗಳನ್ನು ಹಚ್ಚಿಡುತ್ತೇವೆಲ್ಲ?
ಇದೆಂಥ ಮೂರ್ಖತನ?
ಬದಲಾಗಿ ಹಚ್ಚಿಡೋಣ ಹೃದಯದಂಗಳದಲ್ಲೊಂದು ಹಣತೆಯನ್ನು
ಮಾಯವಾದೀತಾಗ ಒಳ ಹೊರಗಿನ ಕತ್ತಲಗಳೆರಡೂ!
ಆಗ ನಿತ್ಯ ದೀಪಾವಳಿ!
ನಿತ್ಯ ಹರುಷಾವಳಿ!
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
- ಉದಯ ಇಟಗಿ
ಕಥನ ಮಥನ
1 ವಾರದ ಹಿಂದೆ
6 ಕಾಮೆಂಟ್(ಗಳು):
ಉದಯ್ ಸರ್,
ದೀಪಾವಳಿಯಂದು ಒಂದು ಅರ್ಥವಂತಿಕೆಯ ಕವನ. ಆದ್ಯಾತ್ಮದ ಟಚ್ ಇರುವ ಕವನ ತುಂಬಾ ಚೆನ್ನಾಗಿದೆ.
ನಿಮಗೂ ದೀಪಾವಳಿಯ..
ಲಕ್ಷ್ಮೀ ಹಬ್ಬದ ಶುಭಾಶಯಗಳು...
ಬಹಳ ಸೊಗಸಾದ ಕವನ. ಸ್ವಗತದಂತಿದೆ! ಸುಂದರವಾಗಿ ಶುಭಾಶಯ ಕೋರಿದ್ದೀರಿ. ಧನ್ಯವಾದಗಳು.
ನಿಮಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಉದಯ,
ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಉದಯ...
ತುಂಬ ಸುಂದರವಾದ ಕವಿತೆ....
ಬಹಳ ಇಷ್ಟವಾಯಿತು...
ನಿಮಗೂ, ನಿಮ್ಮ ಪರಿವಾರದವರಿಗೂ ಬೆಳಕಿನ ಹಬ್ಬದ ಶುಭಾಶಯಗಳು...
ಉದಯ್ ಸರ್,
ತುಂಬಾ ಅರ್ಥಗರ್ಭಿತ ಕವನ..... ನಮ್ಮೊಳಗಿನ ಕತ್ತಲೆ ಬಿಟ್ಟು ಇನ್ನೆಲ್ಲೋ ಬೆಳಕನ್ನ ಹಚಲು ಹೊರಡುತ್ತೆವಲ್ಲ..... ಅದಕ್ಕಿಟ್ಟ ಮೂರ್ಖತನ ಇನ್ನೊಂದಿಲ್ಲ ಎನ್ನುವ ಕವನಕ್ಕೆ ಧನ್ಯವಾದಗಳು...........
tumbaa chendada kavana:) deepavali ge tadavaagi shubhashayagalu:)
ಕಾಮೆಂಟ್ ಪೋಸ್ಟ್ ಮಾಡಿ