ನಿಷ್ಮಾ ಇರ್ಷಾದ್ ಒಬ್ಬ ದಿಟ್ಟ ಪತ್ರಕರ್ತೆ. ಇವರು Kannada One News Channel ನಲ್ಲಿ ಕೆಲಸ ಮಾಡುತ್ತಾರೆ. ನಾನು ನಿನ್ನೆ ಕ್ವೀನ್ಸ್ ರೋಡಿನಲ್ಲಿರುವ ಎರಡು ಚಾನೆಲ್ಗಳಿಗೆ ಇರಾನ್ ಯುದ್ದದ ಕುರಿತಂತೆ ಸಂದರ್ಶನವನ್ನು ಕೊಟ್ಟೆ ಎಂದು ಹೇಳಿದ್ದೆನಲ್ಲ, ಆ ಕನ್ನಡ ನ್ಯೂಸ್ ಚಾನೆಲ್ ನ ಸಂಪಾದಕೀಯ ಮುಖ್ಯಸ್ಥರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಅವರೇ ನನ್ನನ್ನು ಸಂದರ್ಶನ ಮಾಡಿದ್ದು. ಅವರು ಕೇಳಿದ ಪ್ರಶ್ನೆಗಳು ಕೂಡ ಸದ್ಯದ ಪರಿಸ್ಥಿತಿಗೆ ತುಂಬಾ ರಿಲೆವೆಂಟಾಗಿದ್ದವು. ಇವರು ಮಂಗಳೂರಿನವರಾದ್ದರು ಕೂಡ ಬಹಳಷ್ಟು ವಿಚಾರಗಳಲ್ಲಿ ಇವರು ದಕ್ಷಿಣಕನ್ನಡದವರಂತೆ ಇಲ್ಲ. ಮಂಗಳೂರಿನ ಕೆಲವೇ ಕೆಲವು ಬರಹಗಾರರು ಮತ್ತು ಪತ್ರಕರ್ತರಲ್ಲಿ ಇವರು ಕೂಡ ಒಬ್ಬರು. ಅವರ ದಿಟ್ಟ ನಿಲುವು ಮತ್ತು ತಮ್ಮನ್ನು ತಾವು ಪ್ರೆಸೆಂಟ್ ಮಾಡಿಕೊಳ್ಳುವ ರೀತಿ ತುಂಬಾ ಇಷ್ಟವಾಯಿತು.
ಅವರು ನನ್ನ ಸಂದರ್ಶನ ಮಾಡಿದ ಲಿಂಕ್ ಅನ್ನು ಇಲ್ಲಿ ಕೊಡುತ್ತಿದ್ದೇನೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://youtu.be/TAu7P8atP8k?si=rb3MVozMswKuDw4k
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ