Demo image Demo image Demo image Demo image Demo image Demo image Demo image Demo image

Kanaka and Krishna

  • ಗುರುವಾರ, ಡಿಸೆಂಬರ್ 03, 2020
  • ಬಿಸಿಲ ಹನಿ
  •  

    ಕನಕ-ಕೃಷ್ಣ

    **********

     

    ಕನಕ ಕುರಿ ಕಾಯುತ್ತಿದ್ದ

    ಕೃಷ್ಣ ದನ ಮೇಯಿಸುತ್ತಿದ್ದ

    ಪರಿಚಯವಾಯಿತು  ಹೆಚ್ಚೇನಿಲ್ಲ....

     

    ಕನಕ ರೊಟ್ಟಿ  ಒಯ್ಯುತ್ತಿದ್ದ

    ಕೃಷ್ಣ ಬೆಣ್ಣೆ  ಹಚ್ಚುತ್ತಿದ್ದ

    ಹಂಚಿಕೊಂಡು  ಉಂಡರು ಹೆಚ್ಚೇನಿಲ್ಲ...

     

    ಕನಕನಿಗೆ ಹಾಡು ಕಟ್ಟುವ ಹುಚ್ಚು

    ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು

    ಗೆಳೆತನ ಕುದುರಿತು ಹೆಚ್ಚೇನಿಲ್ಲ....

     

    ಕನಕ 'ಬ್ಯಾ' ಬ್ಯಾ' ಎಂದೂ

    ಕೃಷ್ಣ 'ಅಂಬಾ' ಎಂದೂ

    'ಕಿರ್ ಕಿರ್' ' ' ಮುರ್ ಮುರ್ ' ಕೂಗು ಹಾಕಿ

    ಕೂಡಿ-ಆಡಿ ನಲಿದರು ಹೆಚ್ಚೇನಿಲ್ಲ..      

                    

    ಕೃಷ್ಣ ಮಹಾತುಂಟ, ತುಡುಗ

    ತರಲೆ, ಜಗಳಗಂಟ

    ಕನಕ ಅವನ ಭಂಟ,ನೆಂಟ,ಸರ್ವಸ್ವ....

    ಇಬ್ಬರೂ  ಬದುಕಿ ಬಾಳಿದರು ಹೆಚ್ಚೇನಿಲ್ಲ....

     

    ಕುಲದ ನೆಲೆಯಿಲ್ಲ...ಕಾಲದ ಹಂಗಿಲ್ಲ....

    ಕನಕ ಮಣ್ಣಾದ ಕೃಷ್ಣ ಕಲ್ಲಾದ....

    ಇದೊಂದು ಕಲ್ಲು  ಮಣ್ಣಿನ. ಕತೆ ಹೆಚ್ಚೇನಿಲ್ಲ....

                        

    - ಸವಿತಾ ನಾಗಭೂಷಣ

     

    Kanaka and Krishna

     

    While Kanaka was feeding the sheep

    Krishna was grazing the cattle

    Both became acquainted with each other

    Just that and nothing else….

     

    While Kanaka was carrying the bread

    Krishna was buttering it

    They ate it up together by sharing

    Just that and nothing else….

     

    While Kanaka was mad after the song-composition

    Krishna was engrossed in playing the flute

    A friendship bloomed between the two

    Just that and nothing else….

     

    While Kanaka brayed ‘bya bya’

    Krishna crunched ‘amba’

    They enjoyed playing together by uttering ‘kir kir’and ‘mur mur’ sounds

    Just that and nothing else….

     

    While Krishna was mischievous,   

    Messy playful and a thief,

    Kanaka  was his right-hand, a bosom friend and everything else ...

    They both lived and died unconditionally

    Just that and nothing else….

     

    Neither they had an inclination of caste ...

    Nor the obligation of time

    Eventually, Kanaka turned into soil

    And Krishna became a stone....

    This is a story of stone and soil

    Just that and nothing else….

     

    From Kannada: Savitha Nagabhushan

    To English: Uday Itagi