ಕೊಮೋಡಿನ ಚೂರು
ಯಾರದೋ ಟಾಯ್ಲೆಟ್ಟಿನ
ಕೊಮೋಡಿನಿಂದ ಸಿಡಿದ
ಒಂದು ಚೂರು ನಾನು!
ಮುಟ್ಟಿಸಿಕೊಂಡಿದ್ದೇನೆ - ಮಲ ಮೂತ್ರಗಳನ್ನು,
ಜಾರಿಸಿಕೊಂಡಿದ್ದೇನೆ- ಮೈಥುನದಲ್ಲಿ ಚಿಮ್ಮಿದ ವೀರ್ಯವನ್ನು
ಹರಿಯ ಬಿಟ್ಟಿದ್ದೇನೆ - ಕಟ್ಟೊಡೆದ ಮುಟ್ಟಿನ ನೆತ್ತರನ್ನು
ಸಹಿಸಿಕೊಂಡಿದ್ದೇನೆ – ವಿಕಾರ ವಾಂತಿಗಳನ್ನು!
ಆದರೀಗ
ಕೊಚ್ಚೆಗೆ ಬಿದ್ದ ನನ್ನನ್ನು
ಮೆಲ್ಲನೆ ಮೇಲಕ್ಕೆತ್ತಿ
ಪೂಜೆಯ ಆಟವಾಡುತ್ತಿದ್ದಾರೆ
ಬೀದಿ ಹೆತ್ತ ಮಕ್ಕಳು!
ಮಡಿ-ಮೈಲಿಗೆ, ಪ್ರಾರ್ಥನೆ
ಮಂತ್ರ-ತಂತ್ರ, ಆಚಾರ-ಪ್ರಚಾರ,
ಕಾಣಿಕೆ ಹುಂಡಿಯೂ ಇಲ್ಲದೆ
ಸುಮ್ಮನೆ ನನ್ನ ಮುಂದೆ
ಕೈಜೋಡಿಸಿ ನಿಂತಿವೆ
ಈ ಹಸಿದ ಕೂಸುಗಳು!
ಹಾಲು-ತುಪ್ಪದಭಿಷೇಕದಲ್ಲಿ ಮೀಯುವ
ಪುಣ್ಯ ಕ್ಷೇತ್ರದ ವಿಗ್ರಹವೇ
ಕ್ಷಮಿಸಿಬಿಡು ನನ್ನನ್ನು...
ಈ ನಿರ್ಮಲ ಭಕ್ತಿಯ ಮುಂದೆ
ದೇವರಾಗದೆ ಎನಗೆ
ಬೇರೆ ವಿಧಿಯಿಲ್ಲ!
*****
ವಿಲ್ಸನ್ ಕಟೀಲ್
A piece of commode
I am
a broken piece of commode
which got split from
someone’s toilet!
I got touched with
shit and urine,
and spilt the sperm also
that was discharged during sex
and I also endured gruesome menstrual blood and sickly vomiting!
But now that
street children have slowly lifted me up
from a puddle
where I had fallen into
and they are now worshipping me like a god.
These hungry babies just stand in front of me
with their hands folded
without knowing
magics and tricks, rituals and publicity
and without offering any money to the God
Oh, you idol of a holy place
who is bathing with milk and ghee every day!
please forgive me
in front of this pure devotion
to me, there is no other go
without turning myself into God
From Kannada: Wilson Kateel
To English: Uday Itagi
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ