Demo image Demo image Demo image Demo image Demo image Demo image Demo image Demo image

What if I am poor?

  • ಶುಕ್ರವಾರ, ನವೆಂಬರ್ 29, 2024
  • ಬಿಸಿಲ ಹನಿ
  • What if I am poor, my love, I will feed you with my own hands
    Holding you tightly to my chest, I will shower you with kisses,
    What if I am poor, my love, I will feed you with my own hands

    In the kingdom of my heart, you will be the queen
    In my little hut, you will be my empress
    What if I am poor, my love, I will feed you with my own hands.

    I'll assure you food, shelter and clothes,  working under the rich
    I will carry you on my shoulders, taking you around the world
    What if I am poor, my love, I will feed you with my own hands

    Sweating and toiling I'll grow flowers to adorn your hair and make you smile
    Standing shoulder to shoulder, I will give you my arms as bracelets
    What if I am poor, my love, I will feed you with my own hands

    Standing across the flowing river I will make the path for you 
    Swallowing the heat, the rain, and the cold, I will become your shade and light
    What if I am poor, my love, I will feed you with my own hands
    Holding you tightly to my heart, I will shower you with kisses


    *Kannada Original: Satyananda Patrot*
    *English Translation: Uday Itagi*

    *ಬಡವನಾದರೆ ಏನು ಪ್ರಿಯೆ...*

    ಬಡವನಾದರೆ ಏನು ಪ್ರಿಯೆ 
    ಕೈ ತುತ್ತು ತಿನಿಸುವೆ
    ಎದೆಯ ತುಂಬಾ ಒತ್ತಿಕೊಂಡು ಮುತ್ತು ಮಳೆಯ ಸುರಿಸುವೆ
    ಬಡವನಾದರೆ ಏನು ಪ್ರಿಯೆ 
    ಕೈ ತುತ್ತು ತಿನಿಸುವೆ

    ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿಯಾಗುವೆ
    ಪುಟ್ಟ ಗುಡಿಸಲಲ್ಲಿ ನಿನ್ನ ಪಟ್ಟದರಸಿ ಮಾಡುವೆ
    ಬಡವನಾದರೆ ಏನು ಪ್ರಿಯೆ 
    ಕೈ ತುತ್ತು ತಿನಿಸುವೆ

    ಉಳ್ಳವರ ಎದೆಗೆ ಒದ್ದು ಮೈ ಮಾನ ಮುಚ್ಚುವೆ
    ರಟ್ಟೆ ಮೇಲೆ ಹೊತ್ತು ನಿನ್ನ ಜಗವ ಸುತ್ತಿ ತಣಿಸುವೆ
    ಬಡವನಾದರೆ ಏನು ಪ್ರಿಯೆ
    ಕೈ ತುತ್ತು ತಿನಿಸುವೆ

    ಬೆವರು ಹರಿಸಿ ಹೂವ ಬೆಳಸಿ ಮುಡಿಯಲಿಟ್ಟು ನಗಿಸುವೆ
    ಭುಜಕೆ ಭುಜವ ಹಚ್ಚಿ ನಿಂತು ತೋಳು ಬಂದಿ ತೋಡಿಸುವೆ
    ಬಡವನಾದರೆ ಏನು ಪ್ರಿಯೆ 
    ಕೈ ತುತ್ತು ತಿನಿಸುವೆ

    ಹರಿವ ನದಿಗೆ ಅಡ್ಡ ನಿಂತು ನಿನಗೆ ದಾರಿ ಮಾಡುವೆ
    ಬಿಸಿಲು ಮಳೆಯ ಚಳಿಯ ನುಂಗಿ ನೆರಳು ಬೆಳಕು ಆಗುವೆ
    ಬಡವನಾದರೆ ಏನು ಪ್ರಿಯೆ 
    ಕೈ ತುತ್ತು ತಿನಿಸುವೆ
    ಎದೆಯ ತುಂಬಾ ಒತ್ತಿಕೊಂಡು ಮುತ್ತು ಮಳೆಯ ಸುರಿಸುವೆ
    ಬಡವನಾದರೆ ಏನು ಪ್ರಿಯೆ 
    ಕೈ ತುತ್ತು ತಿನಿಸುವೆ
    *-ಸತ್ಯಾನಂದ ಪಾತ್ರೊಟ*

    This is merely a show put on by puppets!

  • ಶುಕ್ರವಾರ, ನವೆಂಬರ್ 22, 2024
  • ಬಿಸಿಲ ಹನಿ
  • Oh formless, attribute less divine being, Why have you succumbed to such sorrow? The one revered as the master of the world's stage, Do not boast of it anymore. You are not the puppeteer; you are an actor, An unfortunate being trapped in the hands of mankind, The very man you created. An actor clad helplessly, Caught by his own creation. Rama, Krishna, Shiva, Parvathi, and so on, Along with the entourage of the nine planets, Roaming in the alleys, drinking and wandering, With the grand squad of plagues, Diseases like AIDS and more. Marching steadily towards globalization, A hundred fears reside in the hearts of men. Oh timeless, subtle, intangible being, Do you need a shrine in the open? You are confined to the stone prison, Forced rituals, holy baths, And the sixteen ceremonial offerings. Even you are not free from the faults of association. For weddings, thread ceremonies, or even bedtime rituals, Lullabies are sung. Morning hymns awaken the one who never sleeps, Cleansing the grime stuck to your body, Adorning you with milk baths, Colourful ornaments, Feasts of celestial offerings, And incense to chase away the cold. In this lively performance, Where will your role ultimately lead? Extend your hand as a child does, And witness this divine drama unfold, Oh Supreme Being! Kannada Origin: Y.K.Sandhya Sharma English Translation: Uday Itagi ಇದು ಬೊಂಬೆಯಾಟವಯ್ಯ ನಿರಾಕಾರ, ನಿರ್ಗುಣ ದೇವನೇ, ನಿನಗೇಕಿಂಥ ದುರ್ಗತಿ ಹೇಳಪ್ಪ ಜಗನ್ನಾಟಕ ಸೂತ್ರಧಾರಿ ಎಂದಿನ್ನು ಬೀಗದಿರು ಸೂತ್ರಧಾರಿಯಲ್ಲ ನೀ ಪಾತ್ರಧಾರಿ ನೀನೇ ಸೃಜಿಸಿದ ಮಾನವನ ಕೈಯಲ್ಲಿ ಸಿಲುಕಿದ ಅಸಹಾಯ ವೇಷಧಾರಿ ರಾಮ - ಕೃಷ್ಣ -ಶಿವ -ಪಾರ್ವತಿ ಇತ್ಯಾದಿ ನವಗ್ರಹಗಳ ಭರಾತಿನ ಜೊತೆ ಗಲ್ಲಿ ಗಲ್ಲಿಗಳಲ್ಲಿ ಕುಡಿಯೊಡೆದ ಪ್ಲೇಗು - ಸಿಡುಬು - ಏಡ್ಸಮ್ಮ ಗಳೆಂಬೋ ಅಮ್ಮನವರ ದೊಡ್ಡ ದಂಡು ಜಾಗತೀಕರಣದತ್ತ ದಾಪುಗಾಲು ಮನುಜನೆದೆಯ ನೂರು ಗುಮ್ಮಗಳು ಋತ್ಯಾತೀತ ಸೂಕ್ಷ್ಮ, ಅಗ್ರಾಹ್ಯ ಚೇತನವೇ ಬಯಲಿಗೊಂದು ಆಲಯವೇ ಕಲ್ಲು ಜೈಲಿನ ಕರ್ಮ ಬಂಧನ ಬಲವಂತ ಮಾಘ ಸ್ನಾನ ಷೋಡಶೋಪಚಾರಗಳು ಸಹವಾಸ ದೋಷ ನಿನಗೂ ತಪ್ಪಲಿಲ್ಲ ಮದುವೆ - ಮುಂಜಿ -ಶಯನೋತ್ಸವಕೆ ಜೋಗುಳದ ಹಾಡು ಮಲಗಿಲ್ಲದವನ ತಟ್ಟಿ ಎಬ್ಬಿಸುವ ಪ್ರಭಾತ ರಾಗ ನಿನ್ನ ಮೈಗಂಟದ ಮೈಲಿಗೆ ಕಳೆದು ಕ್ಷೀರಾ ಭಿಷೇಕದ ಸ್ನಾನ ವೈವಿಧ್ಯ ಅಲಂಕಾರ ಅಮೃತಮಯಿಗೆ ಅಶನ ನೈವೇದ್ಯ ಶೀತ ಕಳೆಯುವ ಧೂಪ ದೀಪದಾರತಿ ರಂಗೇರಿದೀ ಅಂಕದಲಿ ನಿನ್ನಾಟ ಸಾಗದಿನ್ನೇನು ತೆಪ್ಪಗೆ ಕೈ ಚೆಲ್ಲಿ ಲೋಗರಾಟವ ನೋಡೋ ಪರಮಾತ್ಮ -ವೈ. .ಕೆ. ಸಂಧ್ಯಾಶರ್ಮ

    The bowels gushing cold

  • ಗುರುವಾರ, ನವೆಂಬರ್ 21, 2024
  • ಬಿಸಿಲ ಹನಿ
  • No weaver has yet been born to knit a quilt for the bowels gushing cold The old quilts are already faded away and worn-out A far beyond the window a cremation ground burns Its embers are never allowed to cool as the crackle sounds of flames are continuously heard Those who birthed the chill now tend the fire. Between the window and the crematorium there is a grove of coconut trees In broad daylight, the sharpened knives gleam like flashy lights and they are placed gently on the forehead of a tender maiden Leaves tremble, Only the sparrow's heart hears the wails of death. On a full moon’s night, Light descends, soothing the forehead of the orphan girl Down to her feet And pang stays stagnate This year, not only the plaso But also the other flowers carry the color of blood and the hoards of demons are going to paint the sea and the sky with the same colour Even as we sleep in the maiden's embrace, Dreams of slaughter weave garlands of nightmares. What a cursed land this is! Why such shivers, Mother Earth? Why such pain in the bird’s song, Mother who bore me? The cloth that has wiped the menstrual blood has the thirst for heart wrenching also The grinding mills don't stop spinning. The rusted swords, daggers, and knives have stood up by forgetting their sleep. Yet, Yallavva, the old mother keeps plucking jasmine buds and weaving garlands, Laughing at the words, "Religion is in peril." She peels betel nuts and wipes her wrinkled face with the bark. For whom is she weaving this garland? The entire world, Like sheep grazing at the festive altar Is eating the grass Without monsoon rains, time cannot move forward— Where are the poets who sang of this truth? There is but one solace— The dream of Buddha, the weaver, Falls upon this land Since yesterday Kannada Original: Dr. Venkatesh Nelkunte English Translation: Uday Itagi ಕರುಳಿಗೆ ಚಳಿ ಹೊದಿಕೆ ಹೊಲಿಯುವ ನೇಕಾರನಿನ್ನೂ ಹುಟ್ಟಿಲ್ಲ ಹಳಬರೊಲೆದ ಕೌದಿಗಳು ಸವೆದು ಹೋಗಿವೆ ಕಿಟಕಿಯಾಚೆ ದೂರದಲ್ಲಿ ಉರಿಯುತ್ತಿದೆ ಸ್ಮಶಾನ ಕೆಂಡ ಆರಲು ಬಿಡುತ್ತಿಲ್ಲ ಗಳಿಗೆಯಷ್ಟೂ ಚಳಿ ಹುಟ್ಟಿಸಿದವರು ಬೆಂಕಿ ಕಾಯಿಸುತ್ತಿದ್ದಾರೆ ಕಿಟಕಿ ಮತ್ತು ಸ್ಮಶಾನದ ನಡುವೆ ತೆಂಗಿನ ತೋಪೊಂದಿದೆ ನಡು ಹಗಲು ಫಳಫಳನೆ ಹೊಳೆವ ಕತ್ತಿಗಳ ಮಸೆ ಮಸೆದು ಎಳೆ ತರುಣಿಯ ನೆತ್ತಿ ಮೇಲಿಟ್ಟಂತೆ ಗರಿಗಳು ನಡುಗುತ್ತವೆ ಗುಬ್ಬಿಯೆದೆಗೆ ಮಾತ್ರ ಕೇಳುತ್ತದೆ ಸಾವಿನ ಚೀತ್ಕಾರ ಹುಣ್ಣಿಮೆಯ ನಡುರಾತ್ರಿ ತಬ್ಬಲಿ ಮಗಳ ನೆತ್ತಿ ನೇವರಿಸಿ ಇಳಿಯುತ್ತದೆ ಬೆಳಕು ಪಾದದವರೆಗೆ ನಿಶ್ಚಲ ಚಳುಕು ಈ ವರ್ಷ ಮುತ್ತುಗ ಅಷ್ಟೆ ಅಲ್ಲ ಉಗುಣಿ ಅಂಬಿಗೂ ನೆತ್ತರ ಬಣ್ಣ ಕಡಲು ಬಾನಿಗೂ ಬಳಿಯ ಹೊರಟಿವೆ ರಾಶಿ ರಾಶಿ ದೆವ್ವಗಳು ತರುಣಿಯ ತಬ್ಬಿ ಮಲಗಿದ್ದಾಗಲೂ ಕೊಲೆಯ ಕನವರಿಕೆ ಕಟ್ಟಿ ಮಾಲೆ ಬೀಳುವ ನಾಡು ಎಂಥ ಶಾಪಗ್ರಸ್ತ ಯಾಕಿಷ್ಟು ನಡುಕ ನೆಲದವ್ವನೆ ಹಕ್ಕಿ ಹಾಡೊಳಗ್ಯಾಕೆ ಇಷ್ಟೊಂದು ನೋವು ನನ್ನ ಹಡೆದವ್ವನೆ ಮುಟ್ಟಿನ‌ ನೆತ್ತರೊರೆಸಿದ ಬಟ್ಟೆಗೆ ಎದೆ ಬಗೆವ ನೆತ್ತರ ದಾಹ ಬಂದ ಗಳಿಗೆ ಕುಲುಮೆಗಳ ತಿದಿ ಆರುತ್ತಿಲ್ಲ ಸಾಣೆಕಲ್ಲಿನ ಗಿರ್ರೊ ಶಬ್ಧ ನಿಲ್ಲುತ್ತಿಲ್ಲ ತುಕ್ಕಿಡಿದ ಕತ್ತಿ ಬಾಕು ಚಾಕು ಕೈಗೊಡಲಿ ತಲೆಕಡಿವ ಗಂಡುಗೊಡಲಿ ಎದ್ದು ಕೂತಿವೆ‌‌ ನಿದ್ದೆ ಮರೆತು ಎಲ್ಲವ್ವ ಮಾತ್ರ ಹುಡ್ಹುಕ್ಹುಡುಕಿ ಮಲ್ಲಿಗೆ‌ ಮಾಲೆ ಕಟ್ಟುತ್ತಿದ್ದಾಳೆ ಧರ್ಮಕ್ಕೆ ಕೇಡು ಬಂದಿದೆ ಎಂದವರ ಮಾತು ಕೇಳಿ ಎಲೆ ಅಡಿಕೆ ಜಗಿದು ನಕ್ಕು ಕಟವಾಯಿ‌ ಒರೆಸುತ್ತಾಳೆ ಕಟ್ಟುವ ಮಾಲೆ ಯಾರಿಗೆಂದು ಕೇಳಲಿ? ಲೋಕಕ್ಕೆ ಲೋಕವೆಲ್ಲ ಹಬ್ಬದ ಹರಕೆ ಕುರಿಯಂತೆ‌ ಗರಿಕೆ ಮೇಯುತ್ತಿದೆ ಮುಂಗಾರಿಲ್ಲದೆ ಕಾಲ ನಡೆಯಲಾರದೆಂದು ಹಾಡುವ ಕವಿಗಳೆಲ್ಲಿ ಕಳೆದು ಹೋದರು? ಒಂದೇ ಸಮಾಧಾನ ಬುದ್ಧನೆಂಬ ನೇಕಾರನ ಕನಸು ಬೀಳುತ್ತಿದೆ ನಾಡಿಗೆ ನಿನ್ನೆಯಿಂದ - ಡಾ. ವೆಂಕಟೇಶಯ್ಯ ನೆಲ್ಕುಂಟೆ

    The Moon at the Window

  • ಬಿಸಿಲ ಹನಿ
  • Why do you come? Why do you stand so close? At the window oh, moon! Do not tempt me with your captivating looks, Or whisper not sweet words to impress. Please leave, Chandira, and leave me alone! My husband is sleeping beside me, And my child is playing in the cradle. People may gossip and create umpteen stories about us So please go away, Chandira! True that, once I was attracted towards you and gave my word too. Something I wished for you and something else happened ! I shall forget the days gone by For I am no longer a virgin now So please go away, Chandira and leave me alone! Don’t stand at the window And don’t haunt me with your appeals like before I know your heart and understand your pain, But we cannot share moments again. The expanse between us is too wide for me to cross, And our love is too hazardous to pursue. So go away, Chandira, do not fix me between my loyalty and fidelity Kannada Original: Savita Nagabhushan English Translation: Uday Itagi ಕಿಟಕಿಯಲ್ಲಿ ಚಂದಿರ ಯಾಕೆ ಬಂದೆ ಯಾಕೆ ನಿಂದೆ ಕಿಟಕಿಯಲ್ಲಿ ಚಂದಿರ ಸನ್ನೆ ಮಾಡಿ ಕರೆಯಬೇಡ ಬೆಣ್ಣೆ ಮಾತಾಡಬೇಡ ಹೋಗಿ ಬಿಡು ಚಂದಿರ ಪಕ್ಕದಲ್ಲಿ ಗಂಡನಿರುವ ತೊಟ್ಟಿಲಲ್ಲಿ ಕಂದನಿರುವ ಅಕ್ಕಪಕ್ಕ ನೋಡಿಯಾರು ನೂರು ಕತೆಯ ಕಟ್ಟಿಯಾರು ಹೋಗಿ ಬಿಡು ಚಂದಿರ ನಿನ್ನ ನೋಡಿ ಆಶಪಟ್ಟೆ ಆಶೆಪಟ್ಟು ಭಾಷೆ ಕೊಟ್ಟೆ ನೆನೆದುದೊಂದು ನಡೆದುದೊಂದು ಮೊನ್ನೆಯಂತೆ ನಿನ್ನೆಯಲ್ಲ ಇಂದು ನಾನು ಕನ್ನೆಯಲ್ಲ ಹೋಗಿ ಬಿಡು ಚಂದಿರ ಕಿಟಕಿಯಲ್ಲಿ ನಿಲ್ಲಬೇಡ ನಿಂದು ನನ್ನ ಕಾಡಬೇಡ ಬಲ್ಲೆ ನಿನ್ನ ಅಂತರಂಗ ದಾಟಲಾರೆ ಕಂದರ ಸೇರಲಾರೆ ಚಂದಿರ

    Dr. G. S. Shivarudrappa's poem in my English translation...

  • ಶುಕ್ರವಾರ, ನವೆಂಬರ್ 01, 2024
  • ಬಿಸಿಲ ಹನಿ
  • *ಈ ದೀಪಾವಳಿಗೆ ಜಿ. ಎಸ್. ಶಿವರುದ್ರಪ್ಪನವರ ಕವನವೊಂದನ್ನು ಇಂಗ್ಲೀಷಿಗೆ ಅನುವಾದಿಸಲು ಪ್ರಯತ್ನಿಸಿರುವೆ...*

    *My lamp*

    I will illuminate a lamp,
    Not with the belief that
    I will definitely overcome the darkness,
    While numerous Diwali ships have already sunk and disappeared in this darkness,
    I am not certain that the flame of my lit lamp will endure forever.

    Nonetheless, I will still light a lamp,
    With a longing
    To journey from darkness to light.
    For centuries,
    We have been groping our way
    From one darkness to another.
    In between, we have attempted to light matches and lamps
    To spread some illumination.

    Various types of fireworks,
    Such as strings of firecrackers and sparklers,
    Were burned in the name of Vedas, Shastras, Puranas, Histories, Poetry, and Sciences.
    Chanting fervently - "Lead us from darkness to light,"
    We have only been left with traces of soot and despair.

    Yet I know that this darkness thrives
    As it has an unquenchable thirst.
    It swallows light and devours flames,
    Yet it always demands more and more.
    An endless craving, an insatiable thirst.

    Still, I will light a lamp,
    Not with the illusion of conquering gloom,
    But with a flicker of hope that at least we can see each other's faces.
    For as long as the flicker persists.
    Once the light is gone,
    You are no longer you,
    And I am no longer I-
    We drift apart.
    *Kannada Original: Dr. G. S. Shivarudrappa*
    *English Translation: Uday Itagi*

    *ನನ್ನ ಹಣತೆ*

    ಹಣತೆ ಹಚ್ಚುತ್ತೇನೆ ನಾನೂ,
    ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
    ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ
    ಇದರಲ್ಲಿ ಮುಳುಗಿ ಕರಗಿರುವಾಗ
    ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ,

    ಹಣತೆ ಹಚ್ಚುತ್ತೇನೆ ನಾನೂ;
    ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
    ಆಸೆಯಿಂದಲ್ಲ.
    ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
    ಶತಮಾನದಿಂದಲೂ.
    ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
    ಆಗಾಗ ಕಡ್ಡಿ ಗೀಚಿದ್ದೇವೆ,
    ದೀಪ ಮುಡಿಸಿದ್ದೇವೆ,
    ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
    ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
    ಸುಟ್ಟಿದ್ದೇವೆ.
    "ತಮಸೋ ಮಾ ಜ್ಯೋತಿರ್ಗಮಯಾ" ಎನ್ನುತ್ತ ಬರೀ
    ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

    ನನಗೂ ಗೊತ್ತು, ಈ ಕತ್ತಲೆಗೆ
    ಕೊನೆಯಿರದ ಬಾಯಾರಿಕೆ
    ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
    ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು
    ಇನ್ನೂ ಬೇಕು ಎನ್ನುವ ಬಯಕೆ.

    ಆದರೂ ಹಣತೆ ಹಚ್ಚುತ್ತೇನೆ ನಾನೂ,
    ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
    ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
    ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
    ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
    ನಾನು ಯಾರೋ.
    *ಜಿ. ಎಸ್. ಶಿವರುದ್ರಪ್ಪ*