Demo image Demo image Demo image Demo image Demo image Demo image Demo image Demo image

If you get me power

  • ಬುಧವಾರ, ಅಕ್ಟೋಬರ್ 26, 2022
  • ಬಿಸಿಲ ಹನಿ
  • ನನಗೂ ಕೊಲೆ ಮಾಡಲು ಬರುತ್ತದೆ ನನ್ನ ಕೈಗೂ ಅಧಿಕಾರ ಕೊಡಿ ಸತ್ತವನು ಹೇಗೆ ಪೂರ್ವಜನ್ಮದ ಕರ್ಮಗಳಿಂದ ಸತ್ತ ಎಂದು ಕತೆ ಕಟ್ಟುವುದು ನನಗೆ ಗೊತ್ತು ಹೊಸ ಕರ್ಮಗಳಿಗೆ ಹೊಸ ಕೊಲೆಗಳನ್ನು ಹೇಗೆ ಮಾಡಿಸುವುದು ಎಂಬುದೂ ನನಗೆ ಗೊತ್ತು ಸತ್ತವನೇಕೆ ಬಡವನಾಗಿರಬೇಕಿತ್ತು ? ಅದು ಅವನ ತಪ್ಪು ಎಂದು ನಾನು ಸಾಧಿಸಬಲ್ಲೆ ಉಳ್ಳವನಾಗಿರದಿದ್ದರೆ ಅವನು ಸಾಯಲಿಕ್ಕೇ ಲಾಯಕ್ಕು ಬಿಡು ಎಂದು ನಾನು ವಾದಿಸಬಲ್ಲೆ ಸತ್ತವನು ದೇಶಕ್ಕೆ ಎಂತಾ ಅಪಾಯಕಾರಿ ಅಂತ ನಾನು ವಿವರಿಸಬಲ್ಲೆ ಆತ ಸತ್ತದ್ದಕ್ಕಾಗಿ ಜನ ಸಂಭ್ರಮಿಸುವಂತೆ ಹಬ್ಬ ಹುಟ್ಟುಹಾಕಬಲ್ಲೆ ಸಾಯಸಿದ ಮೇಲೆ ಇದು ಕೊಲೆಯಲ್ಲ ಇದು ಆಡಳಿತ ಅಂತ ಬ್ರಮೆ ಹುಟ್ಟಿಸಬಲ್ಲೆ ಸಾಯಿಸಲು ಸುಲಭವಾದ ಆಳ್ವಿಕೆಯನ್ನು ಬಲವಾಗಿ ಬೆಳೆಸಬಲ್ಲೆ ನಾನು ಹೇಳಬಲ್ಲೆ ಅವನ ಸೊಕ್ಕು ಅವನನ್ನು ಸಾಯಿಸಿತು ಅವನ ಅಭಿಮಾನ ಅವನನ್ನು ಸಾಯಿಸಿತು ನನ್ನ ಅಭಿವೃದ್ಧಿ ಅವನನ್ನು ಸಾಯಿಸಿದ್ದನ್ನು ನಾನು ಅಪ್ಪಿ ತಪ್ಪಿಯೂ ಹೇಳಲಾರೆ ಸಾಯಿಸುವವರಿಗಾಗಿ ಸಂಬಳ ನೀಡಬಲ್ಲೆ ತುಳಿಯುವವರಿಗಾಗಿ ಹಾವುಗೆಯ ಹೊಲಿಯಬಲ್ಲೆ ಮತ್ತಷ್ಟು ಕತ್ತಿ ಬಾಂಬುಗಳನ್ನು ಉತ್ಪಾದಿಸಬಲ್ಲೆ ಸತ್ತವನಿಗಾಗಿ ಎರಡು ಸಾಲುಗಳ ಕಂಬನಿಯನ್ನೂ ಮಿಡಿಯಬಲ್ಲೆ ನನಗೂ ಕೊಲೆ ಮಾಡಲು ಬರುತ್ತದೆ ನನಗೂ ಅಧಿಕಾರ ಕೊಡಿ. If you get me power I too can kill If you get me power I know how to weave a story About the dead who died because his previous birth karmas I also know how to get new murders done For new karmas Why should the deceased be poor? I can only prove that it was his fault I can argue that If he is not rich, he is worth dying. I can defend that How dangerous the dead person was to the country I can create a festival of celebration for his death After killing I can create an illusion that It is not murder But it is all for the sake of administration I can grow the reign strong that can be used to kill I can tell his pride only killed him And his arrogance only swallowed him I can’t say even for the sake of saying That my development only killed him I can pay salaries for those who kill I can sew sandals for treaders Can produce more swords and bombs I can also express two lined obituary for the deceased I too can kill If you get me power From Kannada: Sriharsha Salimath To English: Uday Itagi

    Please procreate the human beings and send them to my hometown

  • ಗುರುವಾರ, ಅಕ್ಟೋಬರ್ 13, 2022
  • ಬಿಸಿಲ ಹನಿ
  • ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು ಹೂವಿನ ಮೇಲೆ ಕೈಇಟ್ಟಾಗೆಲ್ಲಾ ಅಚಾನಕ್ಕಾಗಿ ಗೀರುವ ಮುಳ್ಳುಗಳು ಈಗೀಗ ನೋವನ್ನೀಯುವುದಿಲ್ಲ ನಿತ್ಯ ನರಕ ರ್ಶನ ಪಡೆಯುವ ಖಾಲಿ ಕಣ್ಣುಗಳಿಗೆ ಮುಳ್ಳು, ಹೂವಿನ ವ್ಯತ್ಯಾಸ ಗೊತ್ತಾಗುವುದಾದರೂ ಹೇಗೆ? ನನ್ನೂರಿನ ಬೀದಿಗಳು ಸಂಕೋಲೆ ತೊಡಿಸಿಕೊಂಡು ದಶಕಗಳೇ ಕಳೆಯಿತು ಈಗಿಲ್ಲಿ ಸದ್ದುಗಳಿರುವುದು ರ್ಮಗಳಿಗೆ ಮಾತ್ರ ಕಡ್ಡಿಯಿಂದ ಬೆಂಕಿ ಮತ್ತು ದೀಪ ಎರಡೂ ಹಚ್ಚಬಹುದು ಎನ್ನುವುದೆಲ್ಲಾ ಹಳೆಯ ಕ್ಲೀಷೆ ಇಲ್ಲಿ ತುರುಸಿನ ಸ್ರ್ಧೆಯಿರುವುದು ಬಡ ಅಮ್ಮಂದಿರ ಮಡಿಲು ಬರಿದುಗೊಳಿಸುವುದರಲ್ಲಿ ಮಾತ್ರ ಗದ್ದುಗೆಗೆ ಒಂದಾದರೂ ದಾರಿ ಬೇಡವೇ? ಬುದ್ಧಿವಂತರು, ವಿದ್ಯಾವಂತರುಗಳೆಂಬ ತಲೆಭಾರದ ಕಿರೀಟಗಳೆಲ್ಲಾ ಸಾಕು ದಯವಿಟ್ಟು ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು ದೇವಾ ಕನಿಷ್ಠಪಕ್ಷ, ನೆತ್ತರಿನ ಕಮಟು, ಬಣ್ಣ ಮೂಗು, ಕಣ್ಣೊಳಗೆ ಇಳಿಯದಂತೆ ಮಾಡು ಉಸಿರಿರುವಷ್ಟು ಕಾಲ ತಣ್ಣಗೆ ಬದುಕುತ್ತೇನೆ - ಫಾತಿಮಾ ರಲಿಯಾ ಹೆಜ್ಮಾಡಿ Please procreate the human beings and send them to my hometown Unexpectedly every time whenever I put my hand on the flower the scratching thorns will not hurt now The empty eyes which receive eternal hellish radiation daily can’t make out the difference between the thorn and the flower now Decades have passed since the streets of my hometown are shackled now there the sounds of religion only are heard Both fire and lamp can be lit from just a match stick but it is an old cliché now There is a heavy competition only in draining the poor mothers’ lap Don't you want at least one way to the throne? Tired of wearing the crowns of intelligent and educated Oh God, procreate the human beings and send them to my hometown At least, make the rancid blood and colour not to get into the nose and eyes so that I will live cold as long as I have breath From Kannada: Fathima Raliya Hejamady To English: Uday Itagi

    Mamatha Arasikkeri's latest and much appreciated poem in my English Translation...

  • ಶುಕ್ರವಾರ, ಆಗಸ್ಟ್ 05, 2022
  • ಬಿಸಿಲ ಹನಿ
  • I became a flood And they called me fervent I became a tsunami And they called me arrogant I poured in raindrops And they called me perplexed I got dried up And they called me infertile I became a wave And they played with me I became a rivulet And they said “beautiful” Alas, How many barricades To a flowing river! Don’t they know that It only takes a moment for her To wash away those barricades ? From Kannada: Mamatha Arasikere To English: Uday Itagi

    Review on my book Libya Diary by Prof: Channagowda

  • ಬಿಸಿಲ ಹನಿ
  • Book Name: Libya Diary Author: Uday Ittagi Language: Kannada Genre: Travel Document Publication Date: 2018 Media Type: Print (ISBN 9788193901656) Pages: 152 Price: 140 About the Author: Uday Itagi is an English teacher who has cultivated writing as a hobby. Initially, he started writing poems and started posting on his blog, later his experience as a teacher for 8 years in Libya and the political upheavals that took place in Libya inspired him to write the present book. Presently he works as a principal of a college in a small town in the state of Karnataka. Summary: The book is about the author’s experience of his life in Libya and about the events that took place in the background of the Arab spring and the political upheavals and the dethroning of Mohammed Gadaffi which ended in the brutal killing of Gadaffi who was a charismatic leader. Cortical Evaluation: It is an excellent book that records the personal experience of the author besides throwing light on Libyan society. The book records the fate of Libya in the background of the rebellion that took place to overthrow Gadaffi; which was propped up by western imperialistic interests under the guise of ushering in democracy and human rights protection. The book is the result of the author’s observations made in his 8 years of experience as a teacher at an undergraduate level. He has taken pains to interact with several people and made extensive research before putting his thoughts into words, he has objectively tried to look at the achievements and failures of Libyan leader Mohammed Gadaffi. He seems to throw his weight in favor of Gadaffi as against the NATO intervention that happened to overthrow Gadaffi which culminated in the brutal killing of Gadaffi. The author speaks of his anxieties when he took up the job in distant Libya. He talks of disillusionment when he was posted to a village called Ghat a village which is 650 Km away from Sabah one of the five main cities in Libya. The book provides a first-hand glimpse of the life of the Libyan people. Their food habits their obsession with Indian Hindi movies and their impact on young minds and their frank admission that the Hindi movies have inspired them to fall in love. The author also talks of our news channels which at the time of Gadaffi’s fall aired anti Gadafi’s views blatantly without verifying the facts. The fact that every village in Libya invariably had a post office, a bank, and a hospital gives credit to Gadaffi who seems to have been instrumental in fairly modernizing Libya. By Prof: Channagowda

    ಲಕ್ಷ್ಮೀಚಂದ್ರಶೇಖರ್ ಅವರ ಬದ್ಧತೆಗೆ ನಮಸ್ಕಾರ

  • ಭಾನುವಾರ, ಮೇ 22, 2022
  • ಬಿಸಿಲ ಹನಿ
  • ನಿನ್ನೆ ಸಂಜೆ ಜೆ.ಪಿ.ನಗರದ ವ್ಯೋಮ ಸ್ಟುಡಿಯೋಕ್ಕೆ ನಾನು ಮತ್ತು ಬಸವನಗುಡಿಯ ಕಾಲೇಜಿನಲ್ಲಿ ನನ್ನ ಸಹದ್ಯೋಗಿಯಾಗಿದ್ದ ಅಕ್ಕ Sandhya Ganaganur ಇಬ್ಬರೂ 'ಷೇಕ್ಸ್‌ಪಿಯರನ ಶ್ರೀಮತಿ' ನಾಟಕ ನೋಡಲು ಹೋಗಿದ್ದೆವು. ವ್ಯೋಮ ಈ ಮೊದಲು ನೋಡಿರದ ಜಾಗವಾದ್ದರಿಂದ ಬೆಳಿಗ್ಗೆಯೇ ಲಕ್ಷ್ಮೀಚಂದ್ರಶೇಖರ್ ಮೇಡಂಗೆ ಕರೆ ಮಾಡಿ ಲೊಕೇಷನ್ ಕೇಳಿದ್ದೆ. ಅವರು ಸಂತೋಷದಿಂದ ವಿಳಾಸ ತಿಳಿಸಿದರು. ನಾಟಕ ರಚಿಸಿದ ಗೆಳೆಯ Uday Itagi ಕೂಡ ಟಿಕೆಟ್ಗಾಗಿ ಸಂಪರ್ಕಿಸಲು ನಾಟಕದ ನಿರ್ದೇಶಕರಾದ ವಿಶ್ವರಾಜ್ ಪಾಟೀಲ್ ಅವರ ನಂಬರ್ ಕೊಟ್ಟರು. ನಟಿ, ನಿರ್ದೇಶಕ ಮತ್ತು ನಾಟಕಕಾರರೊಂದಿಗೆ ಮಾತಾಡಿ ಆಮೇಲೆ ನಾಟಕ ನೋಡಲು ಹೋಗುತ್ತಿರುವ ಕುರಿತು ನಾನು ಮತ್ತು ಸಂಧ್ಯಾ ಮೇಡಂ ತರಲೆ ಮಾಡಿಕೊಂಡು ನಗುತ್ತಾ ಓಲಾ ಆಟೋದಲ್ಲಿ ವ್ಯೋಮ ತಲುಪಿದೆವು. ಆಟೋ ಇಳಿದು ನೋಡಿದರೆ ನನ್ನ ಪ್ಯಾಂಟಿನ ಹಿಬ್ಬಂದಿ ಪೂರಾ ಒದ್ದೆ! ಆಟೋ ಹತ್ತುವಾಗ ಸೀಟಿನಲ್ಲಿ ನೀರಿರಲಿಲ್ಲ. ಹರಿದ ಸೀಟಿನ ಕುಷನ್ ಒದ್ದೆಯಾಗಿದ್ದರ ಪರಿಣಾಮ. ಐದು ಮುಕ್ಕಾಲಾಗಿದ್ದರಿಂದ ಮನೆಗೆ ಹೋಗಿ ಬಟ್ಟೆ ಬದಲಾಯಿಸಿ ಬರಲು ಸಮಯವಿಲ್ಲ, ನಾಟಕದ ಸಮಯ ಆರಕ್ಕೆ. ಏನಾಗಲ್ಲ ಬಿಡು ಅಂತ ಸಮಾಧಾನ ಮಾಡಿಕೊಂಡು ವ್ಯೋಮದ ಮಹಡಿಯೇರಿದರೆ ಅಲ್ಲಿ ಯಾರೂ ಇರಲಿಲ್ಲ. ಥಿಯೇಟರಿನ ಬಾಗಿಲು ತಳ್ಳಿಕೊಂಡು ಒಳಹೋದಾಗ ನಿರ್ದೇಶಕರು ಬಂದು ಹತ್ತು ನಿಮಿಷವಿರಿ, ಟಿಕೇಟ್ ಕೊಡುತ್ತೇವೆಂದರು. ಹೊರಗಡೆ ಕಾದಿದ್ದಾಯ್ತು. ಆರುಗಂಟೆಗೆ ಟಿಕೇಟು ಕೊಟ್ಟರಾದರೂ ನಮ್ಮಿಬ್ಬರನ್ನು ಬಿಟ್ಟರೆ ಯಾರೂ ಬಂದೇ ಇಲ್ಲ! ನಾಟಕ ಕ್ಯಾನ್ಸಲ್ ಆಗಬಹುದು, ಇಬ್ಬರಿಗೇ ನಾಟಕ ಮಾಡುತ್ತಾರಾ, ಮಾಡಿದರೆ ಹೇಗೂ ಎಂಟಕ್ಕೆ ಮತ್ತೊಂದು ಪ್ರದರ್ಶನವಿದೆಯಲ್ಲಾ ಕಾದು ನೋಡಿದರಾಯ್ತೆಂದು ನಾವಿಬ್ಬರೂ ಮಾತಾಡುತ್ತ ನಿಂತಿರುವಾಗ 'ಒಳಗೆ ಬನ್ನಿ' ಎಂದು ಕರೆದರು. ನಾನು ಸಂಕೋಚದಿಂದ 'ಸರ್ ಇನ್ನೊಂದು ಪ್ರದರ್ಶನಕ್ಕೆ ಕಾಯ್ತೇವೆ, ಜನ ಇಲ್ಲವಲ್ಲ' ಎಂದೆ. ಪರವಾಗಿಲ್ಲ ಕೂತುಕ್ಕೊಳ್ಳಿ ಅಂದವರೆ ನಾಟಕ ಶುರು ಮಾಡೇ ಬಿಟ್ಡರು. ಏಕವ್ಯಕ್ತಿ ಪ್ರದರ್ಶನ. ಲಕ್ಷ್ಮೀಚಂದ್ರಶೇಖರ್ ಅವರು ವೇದಿಕೆ ಪ್ರವೇಶಿಸಿದಾಗ ನಮ್ಮಿಬ್ಪಾತ್ರವೊಂದನ್ನು ವ ವರ್ತಮಾನದಯಾರೂ ಇಲ್ಲವಲ್ಲ, ಕಲಾವಿದೆಗೆ ಹೇಗನ್ನಿಸಬಹುದು?" ಎಂದು ತೀರಾ ಕಸಿವಿಸಿ ಕಾಡಿತು. ಆದರೆ ಲಕ್ಷ್ಮೀ ಮೇಡಂ ಅದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೆ ಎದುರಿಗೆ ಸಾವಿರ ಜನ ಪ್ರೇಕ್ಷಕರಿದ್ದರೆ ಎಂಬ ಭಾವದಲ್ಲೇ ಅದ್ಭುತವಾಗಿ ಷೇಕ್ಸ್‌ಪಿಯರನ ಶ್ರೀಮತಿಯನ್ನು ನಮ್ಮ ಎದೆಗಿಳಿಸಿದರು. ಕಲಾವಿದರಿಗೆ ಸಂಖ್ಯೆ ಮುಖ್ಯವಲ್ಲ, ನಾಟಕ ಮಾಡಿ ಮುಗಿಸುವುದಷ್ಟೇ ಮುಖ್ಯವೆಂಬುದನ್ನು ಸಾಬೀತುಪಡಿಸಿದರು. ಅವರ ಅಭಿನಯ ಅದೆಷ್ಟು ಸೊಗಸಿನದೆಂದರೆ ನಾಟಕ ಮುಗಿಯುವವರೆಗೂ ಅಲ್ಲಿರುವುದು ನಾವಿಬ್ಬರೇ ಎಂಬ ಭಾವ ಕಿಂಚಿತ್ತಾದರೂ ನೆನಪಾಗದಂತೆ ಷೇಕ್ಸ್‌ಪಿಯರ್ ಕಾಲಕ್ಕೆ ಹೋಗಿಬಿಟ್ಟಿದ್ದೆವು. ಐದಾರು ಶತಮಾನಗಳ ಹಿಂದಿನ ಕಾಲದ ಪಾತ್ರವೊಂದನ್ನು ವರ್ತಮಾನದಲ್ಲಿ ಕಾಣಿಸುವುದು ಸುಲಭದ ಮಾತಲ್ಲ. ಉದಯ್ ಇಟಗಿಯವರ ಸೃಷ್ಟಿಯಲ್ಲಿ ಅದು ಲೀಲಾಜಾಲವಾಗಿ ಮೂಡಿದೆ. ಈ ಹಿರಿಯ ಕಲಾವಿದೆಗೆ ವಯೋಸಹಜವಾದ ಚಿಕ್ಕಪುಟ್ಟ ತೊಂದರೆಗಳಿರದೆ? ಕಾಲುನೋವು, ಮಂಡಿನೋವು, ಬೆನ್ನುನೋವು? ಯಾವುದೂ ಲಕ್ಷ್ಮೀಚಂದ್ರಶೇಖರ್ ಅವರ ನಟನೆಯಲ್ಲಿ ಕಾಣಿಸದು. ಅವರ ನೆನಪಿನ ಶಕ್ತಿಕೂಡ ಬೆರಗು ಮೂಡಿಸುವಂಥದ್ದು. ಇಡೀ ನಾಟಕವನ್ನು ಒಬ್ಬರೇ ಅಭಿನಯಿಸಿ ತೋರಲು ಎಂಥ ಎನರ್ಜಿ ಬೇಕು! ಜೊತೆಗೆ ವಿಭಿನ್ನ ಸನ್ನಿವೇಶಗಳಿಗೆ ತಕ್ಕ ರಂಗಪರಿಕರಗಳನ್ನು ಬಳಸಿಕೊಳ್ಳುತ್ತಾ, ಸಂದರ್ಭಕ್ಕೆ ತಕ್ಕ ಉಡುಪು ಧರಿಸುತ್ತಾ ಅವರು ಅಭಿನಯಿಸುವುದನ್ನು ನೋಡುವುದೇ ಚಂದ. ಲಕ್ಷ್ಮೀಯವರ ಡೈಲಾಗ್ ಡೆಲಿವರಿ, ಪಂಚಿಂಗ್ ಡೈಲಾಗ್ ಅವರಿಗೇ ಮಾತ್ರ ಸಾಧ್ಯವಾಗುವಂತದ್ದು. ನಾಟಕದ ವಸ್ತು ಅಪರೂಪದ್ದು. ಜಗತ್ತಿನ ಶ್ರೇಷ್ಠ ನಾಟಕಕಾರನೊಬ್ಬನ ಪತ್ನಿಯ ಅಂತರಂಗವನ್ನು ತೆರೆದು ತೋರಲೆಂದೇ ರಚಿಸಿದ ನಾಟಕವಿದು. ಷೇಕ್ಸ್‌ಪಿಯರನನ್ನು ಕೆಳಗಿಳಿಸದೆ, ಅವನ ಹೆಂಡತಿಯನ್ನು ಮೇಲಕ್ಕೆತ್ತುವ ಆ ಮೂಲಕ ಷೇಕ್ಸ್‌ಪಿಯರನ ಶ್ರೀಮತಿಯ ಬಗ್ಗೆ ಇರುವ ಅಪವಾದಗಳಿಂದ ಆಕೆಯನ್ನು ಪಾರುಮಾಡುವ ಪ್ರಯತ್ನದಲ್ಲಿ ಉದಯ್ ಇಟಗಿ ಗೆದ್ದಿದ್ದಾರೆ. ನಾಟಕದುದ್ದಕ್ಕೂ ನಾವು ಓದಿದ ನಾಟಕಗಳಲ್ಲಿದ್ದ ಷೇಕ್ಸ್‌ಪಿಯರನ ಬೊಕ್ಕತಲೆಯ ನಗುಮುಖ ನಮ್ಮನ್ನು ಆವರಿಸಿಕೊಳ್ಳುತ್ತಲೇ ಹೋಗುತ್ತದೆ. ಲೋಕದ ಕಣ್ಣಿಗೆ ದೊಡ್ಡವರೆನಿಸಿಕೊಂಡವರ ಸಣ್ಣತನಗಳೆಲ್ಲ ಚೆನ್ನಾಗಿ ಅರ್ಥವಾಗುವುದು ಅವರವರ ಹೆಂಡಂತಿಯರಿಗೆ ತಾನೆ? ಷೇಕ್ಸ್‌ಪಿಯರನ ಶ್ರೀಮತಿ ಕೂಡ ಎಂಟು ವರ್ಷಕ್ಕೆ ತನ್ನಿಂದ ಚಿಕ್ಕವನಾದ ಗಂಡನ ಜೊತೆ ಬಾಳಿದ ನೆನಪುಗಳ ಜೊತೆ, ಲೋಕಕ್ಕೆ ಕಾಣದ ಆತನ ಮುಖವನ್ನು ಪರಿಚಯಿಸುತ್ತಾ ಹೋಗುತ್ತಾಳೆ. ಸಾಹಿತ್ಯದ ಗಂಧಗಾಳಿಯಿಲ್ಲದ ಈ ಹೆಣ್ಣಿಗೆ ಷೇಕ್ಸ್‌ಪಿಯರನ ರೂಪಕ, ಪ್ರತಿಮೆ, ಸಾನೆಟ್, ನೂರಾರು ಪಾತ್ರಗಳಿಗಿಂತ ಮನೆವಾರ್ತೆಯ ಬವಣೆಯನ್ನು ನಿಭಾಯಿಸುವ ಸವಾಲುಗಳು ಮುಖ್ಯ. ಗಂಡನಿಂದ ನಯಾಪೈಸೆ ಹುಟ್ಟದಿರುವಾಗ ಮೂರು ಮಕ್ಕಳ, ಅತ್ತೆ-ಮಾವರ ಆರೈಕೆಗಾಗಿ ಬ್ರೆಡ್, ಚೀಸ್, ವೈನ್ ತಯಾರಿಸಿ, ಮಾರಾಟ ಮಾಡಿ ಬಂದ ಹಣದಲ್ಲಿ ಕುಟುಂಬವನ್ನು ಜತನದಿಂದ ಕಾಯ್ದುಕೊಳ್ಳುವ, ಗಂಡನ ಸಲಿಂಗಕಾಮ,ಕಟ್ಟಿಕೊಬದ್ಧತೆಗಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ಬದುಕಿನ ರಥವನ್ನೆಳದ ಆಕೆಯ ವ್ಯಕ್ತಿತ್ವವನ್ನು ಲಕ್ಷ್ಮೀಚಂದ್ರಶೇಖರ್ ಅದ್ಭುತವಾಗಿ ಕಟ್ಟಿಕೊಟ್ಟರು. ನಮ್ಮ ಎಷ್ಟೋ ಜನ ಲೇಖಕರ, ಕಲಾವಿದರ ಹೆಂಡತಿಯರ ಬವಣೆ ಕೂಡ ಇದೇ ಬಗೆಯದು. ನನಗಂತೂ ಸೀರೆ ವ್ಯಾಪಾರ ಮಾಡಿ, ಸಂಸಾರವನ್ನು ದಡ ಮುಟ್ಟಿಸಿದ ಇಂದಿರಾ ಲಂಕೇಶ್ ತುಂಬಾ ನೆನಪಿಗೆ ಬಂದರು. ಅವರ 'ಹುಳಿಮಾವಿನಮರ ಮತ್ತು ನಾನು' ಎಂಬ ಆತ್ಮಕಥನದಲ್ಲಿ ಇದೇ ಬಗೆಯ ವಿವರಗಳಿವೆ. ನಾಟಕದ ರಂಗಸಜ್ಜಿಕೆ, ವಸ್ತ್ರ ವಿನ್ಯಾಸ, ಬೆಳಕು, ನಿರ್ದೇಶನಗಳು ನಮ್ಮನ್ನು ಐದಾರು ಶತಮಾನಗಳ ಹಿಂದಕ್ಕೆ ಕರೆದೊಯ್ಯುವಲ್ಲಿ ಪೂರಕವಾಗಿದ್ದವು. ಷೇಕ್ಸ್‌ಪಿಯರನ ಪಕ್ಕದ ಮನೆಯವರು ನಾವು, ನಮ್ಮೊಡನೆ ಷೇಕ್ಸ್‌ಪಿಯರನ ಪತ್ನಿ ತನ್ನ ಕುಟುಂಬದ ಕತೆಯನ್ನು ಬಿಚ್ಚಿಡುತ್ತಿದ್ದಾಳೇನೋ ಎಂಬ ಭಾವ ಮನಸ್ಸನ್ನು ಆವರಿಸಿಬಿಟ್ಟಿತ್ತು. ನಾಟಕ ಮುಗಿದಾಕ್ಷಣ ಮೇಡಂ ಜೊತೆ ಮಾತನಾಡಿದೆವು. ಮೆಚ್ಚುಗೆಯ, ಸಂಕೋಚದ ನುಡಿಗಳನ್ನು ಅಡಿದೆವು. "ಅಯ್ಯೋ ಏನ್ಮಾಡಕ್ಕಾಗುತ್ತೆ, ನಾಟ್ಕಕ್ಕೆ ಜನ ಬರೋದನ್ನೆ ಬಿಟ್ಟಿದ್ದಾರೆ, ಹೋಗ್ಲಿಬಿಡಿ, ನೀವಿಬ್ರಾದ್ರೂ ಬಂದ್ರಲ್ಲ" ಎಂದು ವಿಷಾದದ ನಗೆ ನಕ್ಕರು. ಮನೆಗೆ ಬಂದಮೇಲೂ ಕೇವಲ ಇಬ್ಬರ ಮುಂದೆ ನಾಟಕ ಪ್ರದರ್ಶಿಸಿದ ಈ ಹಿರಿಯ ಕಲಾವಿದೆಯ ಬದ್ಧತೆಯನ್ನು ಕಂಡು ಅಪಾರ ಗೌರವ ಮೂಡಿತು. ಅವರಿಗೊಂದು ದೊಡ್ಡ ನಮಸ್ಕಾರ. ಉದಯ್ ಇಟಗಿ, ವಿಶ್ವರಾಜ್ ಪಾಟೀಲ್ ಅವರಿಗೆ ಅಭಿನಂದನೆಗಳು. -ಡಾ.ಎಚ್.ಎಸ್. ಸತ್ಯನಾರಾಯಣ

    You and me

  • ಬುಧವಾರ, ಏಪ್ರಿಲ್ 27, 2022
  • ಬಿಸಿಲ ಹನಿ
  • You and me I am just a piece of bamboo Only when you touch me with your lips I will be a flute I am just a blank paper Only when you write something on it It will be a poem I am just a stone Only when you chisel me out I will be a sculpture I am just a wire Only when you string me out I will be a rhythm I am just a seed Only when you shower rain on me I will turn into green I am just the sky Only when you spread yourself on it It will turn into colourful feelings I am just a flower Only when you kiss me I will turn into a fruit I am just the earth Only when you become a gravitational power I will make a move I am just a sea Only when you join me I will gain life I am just a lamp Only when you touch me I will give out light I am just water Only when you mix up with it I will be an intoxicating drink I am just a zero Only when you join me I will gain value I am an empty pot Only when you fill yourself in me I will turn into knowledge I am just the way Only when you walk on it My journey will begin From Kannada: Handalagere Girish To English: Uday Itagi ನಾ - ನೀ ನಾ ಕೇವಲ ಬಿದಿರು ನೀ ತುಟಿಯಿಟ್ಟರಷ್ಟೇ ಕೊಳಲು ನಾ ಕೇವಲ ಖಾಲಿ ಹಾಳೆ ನೀ ಗೀಚಿದರಷ್ಟೇ ಕಾವ್ಯ ನಾ ಕೇವಲ ಕಲ್ಲು ನೀ ಮಟ್ಟಿದರಷ್ಟೇ ಶಿಲ್ಪ ನಾ ಕೇವಲ ತಂತಿ ನೀ ಮೀಟಿದರಷ್ಟೇ ಶೃತಿ ನಾ ಕೇವಲ ಬೀಜ ನೀ ಹನಿದರಷ್ಟೇ ಹಸಿರು ನಾ ಕೇವಲ ಬಾನು ನೀ ಮೂಡಿದರಷ್ಟೇ ಬಣ್ಣಭಾವ ನಾ ಕೇವಲ ಹೂ ನೀ ಚುಂಬಿಸಿದರಷ್ಟೇ ಫಲ ನಾ ಕೇವಲ ಭೂಮಿ ನೀ ಗುರುತ್ವವಾದರಷ್ಟೇ ಚಲನೆ ನಾ ಕೇವಲ ಕಡಲು ನೀ ಕೂಡಿದರಷ್ಟೇ ಜೀವ ನಾ ಕೇವಲ ಹಣತೆ ನೀ ಸೋಕಿದರಷ್ಟೇ ಬೆಳಕು ನಾ ಕೇವಲ ನೀರು ನೀ ಬೆರೆತರಷ್ಟೇ ಮಧು ತೀರ್ಥ ನಾ ಕೇವಲ ಸೊನ್ನೆ ನೀ ಸೇರಿದರಷ್ಟೇ ಮೌಲ್ಯ ನಾ ಕೇವಲ ಖಾಲಿ ಕೊಡ ನೀ ತುಂಬಿದರಷ್ಟೇ ಅರಿವು ನಾ ಕೇವಲ ದಾರಿ ನೀ ನಡೆದರಷ್ಟೇ ಪಯಣ - ಹಂದಲಗೆರೆ ಗಿರೀಶ್

    ಶೇಕ್ಸ್‌ಪಿಯರನ ನಿಜ ಬಣ್ಣ ಬಯಲು ಮಾಡಿದ ಶ್ರೀಮತಿ

  • ಭಾನುವಾರ, ಏಪ್ರಿಲ್ 24, 2022
  • ಬಿಸಿಲ ಹನಿ
  • 'ಶೇಕ್ಸ್‌ಪಿಯರನ ಶ್ರೀಮತಿ’- ಆಸಕ್ತಿ ಕೆರಳಿಸಿದ ಸಮರ್ಥ ಪ್ರಯೋಗ. ಇದು ಏಕವ್ಯಕ್ತಿ ಪ್ರದರ್ಶನವಾದರೂ ಎಲ್ಲೂ ಯಾಂತ್ರಿಕವಾಗಿರದೆ, ತನ್ನ ವೈವಿಧ್ಯಪೂರ್ಣ ಅಂಶಗಳಿಂದ ಸುಲಭವಾಗಿ ನೋಡಿಸಿಕೊಂಡು ಹೋದ ಸಮರ್ಥ ಪ್ರಯೋಗವಾಗಿತ್ತು. ಪ್ರಪ್ರಥಮವಾಗಿ ಶೇಕ್ಸ್‌ಪಿಯರನಹೆಸರೇ ಆಸಕ್ತಿಯನ್ನು ಹುಟ್ಟಿಸುವ ಕಥಾವಸ್ತು. ಜಗತ್ಪ್ರಸಿದ್ಧ ನಾಟಕಕಾರನ ಹೆಂಡತಿಯ ಮೂಲಕ ಅನಾವರಣಗೊಳ್ಳುವ ನಾಟಕ ಸಹಜವಾಗಿ ಕುತೂಹಲ ದಕ್ಕಿಸಿಕೊಳ್ಳುವ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. ‘ಕ್ರಿಯೇಟಿವ್ ಥಿಯೇಟರ್’ ಅರ್ಪಿಸಿದ ‘ಶೇಕ್ಸ್‌ಪಿಯರನಶ್ರೀಮತಿ’ ಲೇಖಕ ಉದಯ್ ಇಟಗಿಯವರು ವಿವಿಧ ಆಕರಗಳಿಂದ ಸಂಗ್ರಹಿಸಿ ಬರೆದ ಸ್ವೋಪಜ್ಞತೆಯನ್ನು ತೋರಿದ ಸ್ವಾರಸ್ಯಕರ ಏಕವ್ಯಕ್ತಿ ರಂಗಪ್ರಯೋಗ. ರಂಗದ ಮೇಲೆ ತರಲು ಸವಾಲಾಗಬಲ್ಲಂಥ ನಾಟಕವನ್ನು ನಿರ್ದೇಶಕ ವಿಶ್ವರಾಜ್ ಪಾಟೀಲ್ ಮನಮುಟ್ಟುವಂತೆ ಹರಿತವಾಗಿ ನಿರ್ದೇಶಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಶ್ರೀಮತಿಯ ಅಂತರಂಗವನ್ನು, ತುಮುಲ-ವಿಷಾದಗಳನ್ನು ನೋಡುಗರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಿದವರು ಹಿರಿಯ ನಟಿ ಲಕ್ಷ್ಮೀ ಚಂದ್ರಶೇಖರ್. ಜನಪ್ರಿಯತೆ ಮತ್ತು ಖ್ಯಾತಿಯನ್ನು ವಿಶ್ವಾದ್ಯಂತ ಪಡೆದುಕೊಂಡಿರುವ ರಂಗಪ್ರೇಮಿಗಳ ಆರಾಧ್ಯದೈವ ಷೇಕ್ಸ್ ಪಿಯರ್ ನ ಅಂತರಂಗದ ಬದುಕಿನ ಪಾತಳಿಗೆ ದುರ್ಬೀನಿಡುವ ಈ ಪ್ರಯತ್ನ ರಂಗದ ಮೇಲೆ ಹೇಗೆ ಅರಳುವುದೋ ಎಂಬ ಕುತೂಹಲ ನೋಡುಗನ ಊಹೆಯನ್ನೂ ಮೀರಿತ್ತು. ಕ್ರಿ.ಶ. ಹದಿನಾರು ಮತ್ತು ಹದಿನೇಳನೆಯ ಶತಮಾನದ ಕಾಲಘಟ್ಟದಲ್ಲಿ ಇಂಗ್ಲೆಂಡಿನಲ್ಲಿ ಜೀವಿಸಿದ್ದು, ನಾಟಕ ಮತ್ತು ಕಾವ್ಯಕ್ಕೆ ಹೊಸದಿಕ್ಕನ್ನು ತೋರಿದ ಮಹತ್ವದ ಬರಹಗಾರ ವಿಲಿಯಂ ಷೇಕ್ಸ್ ಪಿಯರ್, ಜಗದ ಕಣ್ಣಿಗೆ ಕಂಡಿದ್ದಕ್ಕಿಂತ ವಿಭಿನ್ನವಾಗಿ ಅವನ ಹೆಂಡತಿ ಆನಿ ಹ್ಯಾಥ್ವೆಯ ಸ್ವಗತದ ಮಾತುಗಳಿಂದ ಅವನ ವ್ಯಕ್ತಿತ್ವವನ್ನು ಒರೆಗೆ ಹಚ್ಚುವ ಬಗೆ ವಿಶಿಷ್ಟವಾಗಿತ್ತು. ಬಹು ಸರಳವಾದ ಮನಂಬುಗುವ ಭಾಷೆಯಲ್ಲಿ ಶ್ರೀಮತಿ ತನ್ನ ಸರಳ-ಬಿಚ್ಚುಮನದ ಸ್ವಭಾವಕ್ಕನುಗುಣವಾಗಿ ಗೊಂದಲಮಯವಾದ ಅವನ ಬದುಕಿನ ಹೆಜ್ಜೆಗಳನ್ನು ತಾನು ಕಂಡಂತೆ ತೆರೆದಿಡುವ ಪರಿ ಆಪ್ಯಾಯಮಾನ. ಅವಳಿಗಿಂತ ಎಂಟುವರ್ಷ ಕಿರಿಯನಾದ ಹದಿನೆಂಟರ ಯುವಕ ಷೇಕ್ಸ್ ಪಿಯರ್ ತಾನಾಗೇ ಅವಳ ಸ್ನೇಹ ಬಯಸಿ, ಮುಂದುವರೆದು, ಆಕೆಯ ಗರ್ಭಕ್ಕೆ ಕಾರಣನಾಗಿ ಪಂಚಾಯಿತಿಯ ತೀರ್ಮಾನಕ್ಕೆ ಮಣಿದು ಒತ್ತಾಯಕ್ಕೆ ಅವಳನ್ನು ಮದುವೆಯಾದವನು. ರಸಿಕ, ಚಂಚಲಚಿತ್ತ ಗಂಡನ ಬಗ್ಗೆ ಅವಳಿಗೆ ಸದಾ ಗುಮಾನಿ-ಗೊಂದಲ. ಸಿರಿವಂತ ಮನೆತನದ ಸೋಮಾರಿ ಅತ್ತೆ, ಬೇಜವಾಬ್ದಾರಿ ಸ್ವಭಾವದ ಕುಡುಕ ಮಾವ, ಜೊತೆಗೆ ತಿಕ್ಕಲುತನದ ಸುಳ್ಳುಗಾರ, ಸ್ತ್ರೀಲೋಲುಪ ಗಂಡನೊಡನಾಟದ ಸಂಸಾರದಲ್ಲಿ ಮೂರುಮಕ್ಕಳು ಬೇರೆ. ಏಕಾಂಗಿಯಾಗಿ ಸಂಸಾರ ನಿಭಾಯಿಸುವ ಗಟ್ಟಿಗಿತ್ತಿ ಹೆಣ್ಣಾಗಿ ಆಕೆ, ಮನೆಯಲ್ಲೇ ಸಣ್ಣಪುಟ್ಟ ಕೆಲಸಗಳಿಂದ ಹಣ ಸಂಪಾದಿಸುವ ಶ್ರಮಜೀವಿ. ಸಂಸಾರದ ಜವಾಬ್ದಾರಿ ಹೊರದ ಗಂಡ ಲಂಡನ್ನಿಗೆ ಪಲಾಯನ ಮಾಡಿ, ಅಲ್ಲಿ ಹೆಣ್ಣು-ಹೆಂಡಗಳ ಸಹವಾಸದಲ್ಲಿದ್ದರೂ ಅದನ್ನು ಪ್ರತಿಭಟಿಸದ ಒಳ್ಳೆಯ ಹೆಂಡತಿ ಇವಳು. ಸಲಿಂಗಕಾಮಿಯಾಗಿಯೂ ಆಗಿದ್ದ ಅವನ ಎಲ್ಲ ದೌರ್ಬಲ್ಯಗಳ ಬಗ್ಗೆ ತಿಳಿದಿದ್ದರೂ ಇವಳು ತಲೆಕೆಡಿಸಿಕೊಳ್ಳದ ಪ್ರಶಾಂತೆ. ಅವನ ಸಾನೆಟ್ಟಿನಂತೆ ತಾನು ಅವನ ಪಾಲಿಗೆ ‘ಬೇಸಿಗೆಯ ಹಗಲಾಗದೆ, ಚಳಿಗಾಲದ ದಿನದಂತೆ’ ಆದ ತಾನು ಅವನ ಮೈ-ಮನ ಬೆಚ್ಚಗಿರಿಸಲಾಗಲಿಲ್ಲ ಎಂಬ ವಿಷಾದವೂ ಅವಳಲ್ಲಿದೆ. ಸಾಹಿತ್ಯಪ್ರೇಮಿಯಲ್ಲದ ತಾನು ಅವನಿಗೆ ಸರಿಜೋಡಿಯಲ್ಲ ಎಂಬ ಅರಿವೂ ಇದೆ. ಪ್ರಪಂಚದ ಎಲ್ಲ ಕವಿಗಳು, ಲೇಖಕರು ಸುಳ್ಳುಗಾರರೇ ಎಂದು ಮೂದಲಿಸುವ ಶ್ರೀಮತಿ ‘ಗಂಡಂದಿರ ಮನಸ್ಸನ್ನು ಮಾತ್ರ ಬಗೆದು ನೋಡಬಾರದು..ಅದು ನಿಗೂಢ-ಹೊಲಸು’ ಎಂದು ಬಹು ಮಾರ್ಮಿಕವಾಗಿ ನುಡಿಯುತ್ತಾಳೆ. ತಮ್ಮದು ವಿರಸ ದಾಂಪತ್ಯವಾದರೂ, ಗಂಡನ ಬರವಣಿಗೆ ಶಕ್ತಿಯ ಬಗ್ಗೆ ಮೆಚ್ಚುವ ಅವಳಲ್ಲಿ ಅವನ ಕೆಟ್ಟಚಾಳಿಗಳ ಬಗ್ಗೆ ತಿರಸ್ಕಾರ ಇದ್ದೇ ಇರುತ್ತದೆ. ಬೈಬಲನ್ನು ನಂಬಿದ ತಾನು ಸದ್ಗೃಹಿಣಿ, ನೆಟ್ಟಗೆ ಬಾಳುತ್ತಿರುವ ತನಗೇನೂ ತಿಳಿಯದು ಎಂದು ಎಲ್ಲವನ್ನೂ ಮುಕ್ತವಾಗಿ ಮಾತನಾಡುವ ಶ್ರೀಮತಿ, ಹತ್ತಿರವಿದ್ದೂ ದೂರ ಉಳಿದ ಗಂಡನ ಅಸಾಂಗತ್ಯದ ಬಗ್ಗೆ ಜರಡಿ ಹಿಡಿದು ಜಾಲಾಡುವ, ವಿಶ್ಲೇಷಿಸುವ ವಿಚಾರಗಳು ಬಹು ಅರ್ಥಗರ್ಭಿತ. ‘ಪ್ರಸಿದ್ಧ ವ್ಯಕ್ತಿಗಳ ಬದುಕಿನ ಚಿತ್ರಣ ಕಟ್ಟಿಕೊಡುವಾಗ ಅವರ ಬದುಕಿನಲ್ಲಿ ಬಂದ ಇತರೆ ಹೆಣ್ಣುಗಳನ್ನು ಮಾತ್ರ ಹೈಲೈಟ್ ಮಾಡುತ್ತಾರೆಯೇ ವಿನಃ ಅವರ ಕೈಹಿಡಿದ ಹೆಂಡತಿಯ ವಿಷಯವನ್ನು ಮಾತ್ರ ಎಲ್ಲೂ ಹೊರಗೆಡಹುವುದೇ ಇಲ್ಲ’ ಎಂಬ ವಿಷಾದ ವ್ಯಕ್ತಪಡಿಸುತ್ತಾಳೆ. ‘ಪ್ರಸಿದ್ಧರು ಪ್ರಸಿದ್ಧಿಗೆ ಬರುವುದರ ಹಿಂದೆ ಅವರ ಹೆಂಡತಿಯರ ಶ್ರಮ, ತ್ಯಾಗದ ದೊಡ್ಡಕಥೆಯನ್ನು ಯಾರೂ ಲೆಕ್ಕಿಸುವುದಿಲ್ಲ’ ಎಂಬ ಅವಳ ನೋವಿನ ಹಳವಂಡ ಆಕೆಯ ಬದುಕಿನ ನಿಶಬ್ದ ಕ್ರೌರ್ಯ-ದುರಂತವನ್ನು ಎತ್ತಿ ಹಿಡಿಯುತ್ತದೆ. ಷೇಕ್ಸ್ ಪಿಯರ್ ತನ್ನ ಜೀವಿತಾವಧಿಯ ಕಡೆಯ ಐದುವರ್ಷಗಳು ಹೆಂಡತಿಯ ಆರೈಕೆಯಲ್ಲೇ ಇದ್ದರೂ ಅವನು ತನ್ನ ಹಳೆಯ ಗೆಳತನದ ಗುಂಗಿನಲ್ಲೇ ಇದ್ದನೇ ಎಂಬ ಅಸ್ಪಷ್ಟತೆ – ಅಪರಿಚಿತತೆ ಅವಳ ಬೆರಗು. ತನ್ನ ಐವತ್ತೆರಡನೆಯ ಹುಟ್ಟಿದಹಬ್ಬದ ದಿನವೇ ಮರಣಿಸಿದ ಷೇಕ್ಸ್ ಪಿಯರನ್ ವಂಶ ತನ್ನ ಮಕ್ಕಳೊಂದಿಗೆ ಕೊನೆಯಾದ ಬಗ್ಗೆ ಶ್ರೀಮತಿ ವಿಷಾದಿಸಿದರೂ, ಎಂದೂ ಆಪ್ತವಾಗದ ಗಂಡ ಎಂದೂ ತನ್ನ ಕನಸಿನಲ್ಲೂ ಸುಳಿದಿಲ್ಲ ಎಂಬ ಕಹಿಭಾವನೆಯನ್ನು ಒಸರಿಸುವ ಅವಳ ನಿಟ್ಟುಸಿರ ಅಭಿವ್ಯಕ್ತಿಯಲ್ಲಿ ಪ್ರಸಿದ್ಧ ಕವಿಯ ಹೆಂಡತಿಯರ ಅಸಮ ದಾಂಪತ್ಯದ ಸಾರ್ವತ್ರಿಕತೆಯನ್ನು ಬಿಂಬಿಸುತ್ತಾಳೆ. ನಾಟಕ ನೋಡಿದ ಮೇಲೆ ಜಗ ಮೆಚ್ಚಿದ ಶೇಕ್ಸ್‌ಪಿಯರನಪ್ರತಿಭೆ- ಅವನ ಹೆಂಡತಿಯ ಅಂತರಂಗದ ತೊಳಲಾಟ-ಸ್ಪಂದನಗಳ ಓಘದ ಮುಂದೆ ಮಂಕಾಗಿ ತೋರುತ್ತದೆ. ಎಲ್ಲ ಪ್ರಸಿದ್ಧರ ಹೆಂಡತಿಯರ ಅಂತರಂಗದ ಜ್ವಾಲಾಮುಖಿಗಳಿಗೆ ಕನ್ನಡಿ ಹಿಡಿವ, ಶೇಕ್ಸ್‌ಪಿಯರನಹೆಂಡತಿ ಮೇಲ್ನೋಟಕ್ಕೆ ಒರಟಳಂತೆ ಕಂಡರೂ ಅವಳ ಪ್ರಾಮಾಣಿಕತೆಯ ವ್ಯಕ್ತಿತ್ವ ಕಂಡು ಮನಸ್ಸು ಮಿಡಿಯುತ್ತದೆ. ಶೇಕ್ಸ್‌ಪಿಯರನಹೆಂಡತಿಯಾಗಿ ಹೃದಯಸ್ಪರ್ಶೀ ಅಭಿನಯ ನೀಡಿದ ಲಕ್ಷ್ಮೀ ಚಂದ್ರಶೇಖರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಟಕಾವಧಿ ಒಂದು ಗಂಟೆಯುದ್ದಕ್ಕೂ ಎಲ್ಲೂ ಬೇಸರ ಹಣಕದಂತೆ ರಂಗದ ಮೇಲಿನ ಆಕೆಯ ಚಲನೆ, ಚಟುವಟಿಕೆಗಳು ಪೂರಕವಾಗಿವೆ. ಇದನ್ನು ಆಗುಮಾಡಿದ ನಿರ್ದೇಶಕ ವಿಶ್ವರಾಜ್ ಪಾಟೀಲರು ಅಭಿನಂದನೀಯರು. ಉತ್ತಮ ರಂಗಸಜ್ಜಿಕೆ- ರಂಗಪರಿಕರ (ವಿಶ್ವನಾಥ ಮಂಡಿ) ಧ್ವನಿ ಸಂಯೋಜನೆ (ಗಜಾನನ ನಾಯ್ಕ) ಬೆಳಕಿನ ವಿನ್ಯಾಸ ( ಮುದ್ದಣ್ಣ ರಟ್ಟಿಹಳ್ಳಿ) ವಸ್ತ್ರವಿನ್ಯಾಸ (ಮಂಗಳಾ.ಎನ್) ಪ್ರಸಾಧನ (ರಾಮಕೃಷ್ಣ ಕನ್ನರಪಾಡಿ) ಪರಿಪೂರ್ಣವಾಗಿತ್ತು. ಒಟ್ಟಾರೆ ನಾಟಕದ ಎಲ್ಲ ಅಂಶಗಳಲ್ಲೂ ನೋಡುಗನಿಗೆ ತೃಪ್ತಿ ನೀಡಿದ್ದು ನಾಟಕದ ಗೆಲುವು!! ಖ್ಯಾತನಾಮರ ಹೆಂಡಂದಿರ ದನಿಗೆ ಹೊರತೂಬು ನೀಡಿದರೆ ಅವರ ಗಂಡಂದಿರ ಮುಖವಾಡಗಳು ಕಳಚಿ ನಿಜಬಣ್ಣ ಬಯಲಾಗುವುದು ಎಂಬ ಸೂಚ್ಯಾರ್ಥ ಇಂಥ ನಾಟಕಗಳ ಸಂದೇಶವೆನ್ನಬಹುದೇನೋ?!!! -ವೈ.ಕೆ.ಸಂಧ್ಯಾ ಶರ್ಮ

    ತನ್ನ ಶ್ರೀಮತಿಯಿಂದಲೇ ವಿಮರ್ಶಿಗೊಳಗಾದ ಜಗತ್ಪ್ರಸಿದ್ಧ ಪತಿ

  • ಬುಧವಾರ, ಏಪ್ರಿಲ್ 20, 2022
  • ಬಿಸಿಲ ಹನಿ
  • ತನ್ನ ಶ್ರೀಮತಿಯಿಂದಲೇ ವಿಮರ್ಶಿಗೊಳಗಾದ ಜಗತ್ಪ್ರಸಿದ್ಧ ಪತಿ..।ಗೋರಿಯಿಂದೆದ್ದು ಕುಳಿತು ಅಂತರಂಗ ತೋಡಿಕೊಳ್ಳುವ ಸತಿ…ವಿಶ್ವವಿಖ್ಯಾತ ನಾಟಕಕಾರನ ಜೀವನದ ಪ್ರಮುಖ ಪಾತ್ರಧಾರಿಣಿಯ ನಿಜಬದುಕಿನ ಗತಿಸ್ಥಿತಿ…ಅಂದಿನ ಇಂಗ್ಲಿಷ್ ಸಮಾಜದ ಬಾಳುವೆಯ ಒಟ್ಟಂದದ ರೀತಿನೀತಿ…ಪ್ರಖರ ಬೌದ್ಧಿಕ ,ಭಾವುಕ , ಸಂಫರ್ಷದಲ್ಲಿ,ಮೆಟಾಫರ್ ಗಳ ಗುಂಗಿನಲ್ಲಿ ದಣಿದು , ನಿಷಿದ್ಧ ಸ್ನೇಹಗಳ ಬಂಧನದಲ್ಲಿ ಸ್ಪೂರ್ತಿ ಗೊಂಡ ಮಹಾಕವಿಯ ಮನಸ್ಥಿತಿ.. ಗಂಡನಿಂದ ಸರಳ ಪ್ರೇಮ,ಜೀವನ ನಿರ್ವಹಣೆಯ ಹೊಣೆಯನ್ನು ಬಯಸಿ,ಹಾಗಾಗದಿದ್ದಾಗಲೂ ಕಂಗೆಡದೆ ದುಡಿದು ಘನತೆಯ ಬಾಳು ಕಟ್ಟಿಕೊಂಡ ಛಲಗಾತಿ…ನಾವರಿಯದ ಶೇಕ್ಸಪಿಯರನ್ನು ಯಾವುದೇ ರಾಗ ದ್ವೇಷಗಳಿಲ್ಲದೆ ತಣ್ಣನೆಯ ದನಿಯಲ್ಲಿ ಪ್ರಾಮಾಣಿಕವಾಗಿ ಪದಚಿತ್ತಾರಗಳಲ್ಲಿ ಚಿತ್ರಿಸುವ ಕಲೆಗಾರ್ತಿ… ಅವಳ ಭಾವಗಳನ್ನು ಸ್ಪಷ್ಟವಾಗಿ ಹೇಳುವ ಕಥೆಗಾರ್ತಿ..ಸರಳೆಯಾದ ಶ್ರೀಮತಿ ಮಹಾಕವಿಯ ತಳಮಳ,ಎದೆಗುದಿ.ವಿಕ್ಷಿಪ್ತತೆಯೂ ಇಲ್ಲಿ ಆಪ್ತವೇ ಆಗಿಬಿಡುವ ಕವಿಯ ಬಗೆಗಿನ ಕಡುಪ್ರೀತಿ.।ಓಹ್ ಅಧ್ಭುತ. ನಿಜಕ್ಕೂ ಈ ಪುಟ್ಟಪುಸ್ತಕ ಮಹಾಕವಿಯ ಬದುಕಿನ ನಾವರಿಯದ ಆಯಾಮಗಳನ್ನು ಹೊರೊಮ್ಮಿಸಿದೆ. ಇಂತಹುದೊಂದು ಅಮೂಲ್ಯ ವಸ್ತುವನ್ನು ಅಧ್ಯಯನ ಮಾಡಿ.ಬರಹ ರೂಪಕ್ಕೆ ತಂದು..ಅದರಲ್ಲೂ ರಂಗಪ್ರಯೋಗಕ್ಕೆ ಅಳವಡಿಸುತ್ತಿರುವ ನಿಮ್ಮ ಸಾಹಸ ಯಶಸ್ವಿಯಾಗಲಿೇ ಶ್ರೀಯುತ ಉದಯ ಇಟಗಿಯವರೇ.।ಶುಭಹಾರೈಕೆಗಳು..।
    -ಶುಭದಾ ಎಚ್. ಎನ್.

    ದಕ್ಷಿಣ ಕನ್ನಡದ ಹಿರಿಯ ಲೇಖಕ ಉದಯ ಕುಮಾರ ಹಬ್ಬು ಅವರು ನನ್ನ "ಶೇಕ್ಸಪಿಯರನ ಶ್ರೀಮತಿ" ನಾಟಕವನ್ನು ಓದಿ ಸಣ್ಣದೊಂದು ವಿಮರ್ಶೆಯನ್ನು ಬರೆದಿದ್ದಾರೆ.

  • ಗುರುವಾರ, ಏಪ್ರಿಲ್ 14, 2022
  • ಬಿಸಿಲ ಹನಿ
  • ದಕ್ಷಿಣ ಕನ್ನಡದ ಹಿರಿಯ ಲೇಖಕ ಉದಯ ಕುಮಾರ ಹಬ್ಬು ಅವರು ನನ್ನ "ಶೇಕ್ಸಪಿಯರನ ಶ್ರೀಮತಿ" ನಾಟಕವನ್ನು ಓದಿ ಸಣ್ಣದೊಂದು ವಿಮರ್ಶೆಯನ್ನು ಬರೆದಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಸಾಹಿತಿ ಉದಯ ಇಟಗಿಯವರು ಈ ಏಕವ್ಯಕ್ತಿ ರಂಗಪ್ರಯೋದ ನಾಟಕ "ಶೇಕ್ಸ್‌ಪಿಯರ್‌ ನ ಶ್ರೀಮತಿ" ಯನ್ನು ಪ್ರೀತಿಯಿಂದ ಕಳಿಸಿದ್ದಾರೆ.‌ಈ ನಾಟಕ ಬರೆಯಲು ಅನೇಕ ಆಕರಗಳನ್ನು ಆಧರಿಸಿ ಸೊಗಸಾಗಿ ಬರೆದಿದ್ದಾರೆ. ಶೇಕ್ಸ್‌ಪಿಯರ್ ನ ಹೆಂಡತಿ ಆನಿ ಹ್ಯಾಥ್ವೆ ಇವಳ ದಾಂಪತ್ಯದ ಬದುಕು ಹೇಗಿತ್ತು ಎಂಬ ಪ್ರಕರಣವನ್ನು ಶ್ರೀಮತಿಯ ಸ್ವಗತದ ರೂಪದಲ್ಲಿ ಚಿತ್ರಿಸಲಾಗಿದೆ. ಸ್ವಗತ ಈ ನಾಟಕದ ತಂತ್ರ. ಸಾಮಾನ್ಯವಾಗಿ ಖ್ಯಾತನಾಮರ ಹೆಂಡತಿಯ ಬದುಕು ದುಃಖ ನೋವು ದುಮ್ಮಾನ, ಗಂಡನ ತಾತ್ಸಾರ ಅಥವಾ ಸಮಯಾಭಾವದ ಕೊರತೆ, ಗಂಡನ ಅನ್ಯಸ್ತ್ರೀಗಮನ ಇವೆಲ್ಲವೂ ಇದ್ದು ಅವುಗಳನ್ನು ತಾಳ್ಮೆಯಿಂದ ಕೌಶಲ್ಯದಿಂದ ತೂಗಿಸಿಕೊಂಡು ಹೋಗುವ ಚಾಕಚಕ್ಯತೆಯ ಗಟ್ಡಿ ಹೆಣ್ಣು ಮಾತ್ರ ಸಂಸಾರ ಸಾಗರದಲ್ಲಿ ಯಶಸ್ವಿಯಾಗಿ ಈಜಬಲ್ಲಳು.‌ಗಾಂಧಿಜೀಯವರ ಹೆಂಡತಿ ಕಸ್ತೂರಬಾ ಅವರ ದಾಂಪತ್ಯ ಬದುಕು ಸುಖಮಯವಾಗಿತ್ತೆ? ಅಂತೆಯೆ ಶೇಕ್ಸ್‌ಪಿಯರ್ ನ‌ ಹೆಂಡತಿಯ ಬದುಕೂ ಏನು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ.‌ಗಂಡನ ಖ್ಯಾತಿಯ ದೀಪದ ಬೆಳಕಿನ ದೀಪದ ಬುಡದ ಕತ್ತಲಾಗಿಯೆ ಬದುಕನ್ನು ಹೆಂಡತಿ ನವೆಯುತ್ತ ಸವಿಸುತ್ತಾಳೆ. ಶೇಕ್ಸ್‌ಪಿಯರ್ ನ‌ಹೆಂಡತಿ ಸ್ವತಃ‌ ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿ ತನ್ನ ಮೂರು‌ ಮಕ್ಕಳನ್ನೂ ಅತ್ತೆ ಮಾವಂದಿರನ್ನೂ ಸಾಕುತ್ತಾಳೆ. ಶೇಕ್ಸ್‌ಪಿಯರ್ ನ‌ ಬದುಕಿನ ಸಂಕಥನಗಳಲ್ಲಿ ಊಹಾಪೋಹಗಳೇ ಹೆಚ್ಚು. ಅವನು‌ ಹೆನ್ರಿ ರಿಜ್ಲಿಯೊಂದಿಗೆ ಸಲಿಂಗಕಾಮದ ಜೊತೆಗಾರನಾಗಿ,‌ಮುಂದೆ Dark Lady ಪ್ರಿಯಕರನಾಗಿ ಚಿತ್ರಿತಗೊಂಡಿರುವುದು ಶೇಕ್ಸ್‌ಪಿಯರ್ ಬರೆದ ೧೫೪ಕ್ಕೂ ಮಿಕ್ಕಿ ಬರೆದ ಸಾನೆಟ್ಟುಗಳ ಆಧಾರದ ಮೇಲೆ ಊಹಿಸಲ್ಪಟ್ಟ ಸಂಕಥನಗಳು. ಈ ನಾಟಕ ರಂಗ ಪ್ರಯೋಗಕ್ಕೆ ಸಜ್ಜಾಗಿದೆ. ಖ್ಯಾತ ನಟಿ ಪ್ರೊ ಲಕ್ಷ್ಮಿ ಚಂದ್ರಶೇಖರ ಶ್ರೀಮತಿ ಶೇಕ್ಸ್‌ಪಿಯರ್ ನ ಪಾತ್ರದಲ್ಲಿ ಬರಲಿದ್ದಾರೆ. ಈ ನಾಟಕವನ್ನು ಒಂದು ಐದು ಅಂಕಗಳ ನಾಟಕವನ್ನಾಗಿ ಮಾಡಬಹುದಾದ ಎಲ್ಲ ಆಕರಗಳ ಆಧಾರಗಳೂ ಇದ್ದವು. ಶೇಕ್ಸ್‌ಪಿಯರ್, ಅವನ ಹೆಂಡತಿ, ಹೆನ್ರಿ ರಿಜ್ಲಿ, ಅವನ ಮೂರು ಮಕ್ಕಳು, ಹೀಗೆ ವಿಸ್ತೃತವಾಗಿ ಒಂದು ದೊಡ್ಡ ನಾಟಕ ಬರೆಯಬಹುದಿತ್ತು. ಏಕವ್ಯಕ್ತಿ ರಂಗ ಪ್ರದರ್ಶನವು ನುರಿತ ನಟಿಯ ಅಭಿನಯದಿಂದ ಜನರ ಮನಸ್ಸನ್ನು ಸೆಳೆಯಬಹುದು‌. ಈ ಹೊಸ ಪ್ರಯೋಗವನ್ನು ಕನ್ಬಡಕ್ಕೆ ಪರಿಚಯಿಸಿದ ಉದಯ ಇಟಗಿ ಇವರನ್ನು ಅಭಿನಂದಿಸುವೆ.

    ಉದಯ ಇಟಗಿಯವರ "ಶೇಕ್ಸ್ ಪಿಯರ್ ನ ಶ್ರೀಮತಿ"

  • ಸೋಮವಾರ, ಏಪ್ರಿಲ್ 11, 2022
  • ಬಿಸಿಲ ಹನಿ
  • "Mrs. Shakespeare" ಎನ್ನುವ ನಾಟಕ ಇಂಗ್ಲೆಂಡಿನಲ್ಲಿ ಪ್ರದರ್ಶನವಾಗಿದ್ದನ್ನು ಕೇಳಿ, "ರಾಬರ್ಟ್ ನೇ" ಅವರ ಸ್ತ್ರೀವಾದಿ ಕಾದಂಬರಿ ಓದಿ, ಈ ಬಗ್ಗೆ ನಟರಾಜ್ ಹುಳಿಯಾರ್ ಅವರ ಒಂದು ಲೇಖನ ಓದಿ ಹುಟ್ಟಿದ ಈ ಕೃತಿಯು ಈಗ ಓದುಗರ ಮುಂದಿದೆ. ಓದುಗರಿಗೆ ಪರಿಚಿತವಾದ ಶೇಕ್ಸ್ ಪಿಯರ್ ನ ಸಾಲುಗಳಿಂದಲೇ ಆರಂಭವಾಗುವ ಕೃತಿ ಅವುಗಳನ್ನು ಹೇಳುತ್ತಿರುವ ಆನಿ ಹ್ಯಾಥ್ವೇ ಶೇಕ್ಸ್ ಪಿಯರ್ ಳ ಅಂತರಾಳವನ್ನು ತೆರೆದಿಡುತ್ತಾ, ಶೇಕ್ಸ್ ಪಿಯರ್ ಅವಳಿಗೆ ಹೇಗೆ ಅನಿಸಿದ್ದ, ಆರಂಭದಲ್ಲಿ ಹೇಗಿದ್ದ ,ಹೇಗೆ ಜೀವನ ನಡೆಸಿದ್ದ, ಅಂತ್ಯದಲ್ಲಿ ಹೇಗಾದ ಎಂಬ ಎಲ್ಲ ಏರಿಳಿತಗಳನ್ನು ಸಮಗ್ರವಾಗಿ ನೋಡುಗರ ಮುಂದಿಡುವ ಒಂದು ಶ್ಲಾಘನೀಯ ಪ್ರಯತ್ನ ಇಲ್ಲಿದೆ. ಹದಿನೆಂಟರ ಹರೆಯದ ಶೇಕ್ಸ್ ಪಿಯರ್ ತನಗಿಂತ ಎಂಟು ವರ್ಷ ದೊಡ್ಡವಳಾದ ಆನಿ ಹ್ಯಾಥ್ವೇ ಳನ್ನು ಪ್ರೇಮಿಸಿದನಾ? ಇವರ ಮದುವೆಯ ಬಗ್ಗೆ ಇರುವ ಊಹಾಪೋಹಗಳು ಇಲ್ಲಿ ಆನ ಹ್ಯಾಥ್ವೇ ದೃಷ್ಟಿಯಿಂದ ಬರೆಯಲ್ಪಟ್ಟಿವೆ. ಇಲ್ಲಿ ಆನೆ ತನ್ನ ಗಂಡನ ಬಗ್ಗೆ 'ಹೊಂದಿರಬಹುದಾಗಿದ್ದ' ಭಾವನೆಗಳನ್ನು ಕೆಲವೊಮ್ಮೆ ಭಾವುಕಳಾಗಿ ಮತ್ತೆ ಕೆಲವೊಮ್ಮೆ ನಿರ್ಭಾವುಕಳಾಗಿ ಹೇಳುತ್ತಾಳೆ. ಆ ಮೂಲಕ ಕಥೆಯೊಂದನ್ನು ಕಟ್ಟಿಕೊಡುತ್ತಾಳೆ. ಅವಳ ಪ್ರೇಮ-ಕಾಮ, ಈರ್ಷೆ, ಸಿಟ್ಟು ಎಲ್ಲವೂ ಒಂದು ಹದಕ್ಕೆ ತಿರುಗಿದೆ. ಶೇಕ್ಸ್ ಪಿಯರ್ ನ ಬದುಕು ಮತ್ತು ಬರಹವನ್ನು ಅವನ ಸಂಗಾತಿಯ ಕಣ್ಣುಗಳಿಂದ ನೋಡುವುದೇ ಒಂದು ಹೊಸತನ. ಇದು ಸಾಹಿತ್ಯಕ್ಕೆ ಇರುವ ಅನಂತ ಸಾಧ್ಯತೆಗಳ ಪರಿಚಯವೂ ಹೌದು. ಇಲ್ಲಿನ ಆನೆ ಹ್ಯಾಥ್ವೇ ಒಬ್ಬ ದಿಟ್ಟ ಹೆಂಗಸು; 'ಮಹಾನ್' ಶೇಕ್ಸ್ ಪಿಯರನ ಹಂಗನ್ನು ದಾಟಿದವಳು! ಉದಯ ಇಟಗಿಯವರು ಬರೆದ ಈ ನಾಟಕ ನಮ್ಮಿಂದ ಒಂದೇ ಉಸಿರಿಗೆ ಹಾಗೆಯೇ ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಓದಿದ ನಂತರ ನಾಟಕದ "ಸ್ವಾದ" ನಮ್ಮೊಳಗೆ ಸದಾ ಉಳಿಯುತ್ತದೆ. ರಂಗ ಪ್ರಯೋಗಕ್ಕೂ ಸಜ್ಜಾಗಿ ನಿಂತಿರುವ ಈ ಕೃತಿ ಖಂಡಿತವಾಗಿಯೂ ಯಶಸ್ವಿಯಾಗುತ್ತೆ ಎನ್ನುವ ಭರವಸೆಯನ್ನು ಈ ಪಾತ್ರ ಮಾಡುತ್ತಿರುವ ಶ್ರೀಮತಿ ಲಕ್ಷ್ಮೀ ಚಂದ್ರಶೇಖರ್ ರವರೂ ವ್ಯಕ್ತಪಡಿಸಿದ್ದಾರೆ.

    ಶೇಕ್ಸ್‌ಪಿಯರನ ಶ್ರಿಮತಿ ರಂಗವೇರುವ ದಿನ ಬಂದೇ ಬಿಟ್ಟಿತು

  • ಶುಕ್ರವಾರ, ಏಪ್ರಿಲ್ 08, 2022
  • ಬಿಸಿಲ ಹನಿ
  • ನನಗೆ ಗೊತ್ತು ನೀವೆಲ್ಲಾ ಈ ನಾಟಕ ನೋಡಲು ತುದಿಗಾಲಲ್ಲಿ ಕಾಯುತ್ತಿರುವೆರೆಂದು. ಆ ದಿನ ಬಂದೇ ಬಿಟ್ಟಿತು. ಇದೇ ಏಪ್ರಿಲ್ 22 ಮತ್ತು 23 ರಂದು ಬೆಂಗಳೂರಿನ ರಂಗ ಶಂಕರದಲ್ಲಿ ಮೊದಲ ಪ್ರಯೋಗವಾಗಿ ಮೂಡಿ ಬರಲಿದೆ. ದಿನಾಂಕವನ್ನು ಗುರುತಿಟ್ಟುಕೊಳ್ಳಿ. ಮಿಸ್ ಮಾಡಬೇಡಿ. ಹಾಗೆ ಇದನ್ನು ನಿಮ್ಮ ಗುಂಪುಗಳಲ್ಲಿ ಶೇರ್ ಮಾಡಿ.

    Awareness

  • ಭಾನುವಾರ, ಏಪ್ರಿಲ್ 03, 2022
  • ಬಿಸಿಲ ಹನಿ
  • ' ಅರಿವು ' ಅರಿವೆಂಬುದು ಸಿರಿಯಲ್ಲ ಗುರುವು ಬೆಳಕೆಂಬುದು ಸ್ಥಿರವಲ್ಲ ಹರಿವು ಸಂತೆಯ ಸರಕಲ್ಲ ಅವರಿವರ ಸೊತ್ತಲ್ಲ ಅರಿವೆಂಬುದು ಬಯಲ ಬುತ್ತಿ ಚಿತ್ತ ಹಸಿದವರ ತುತ್ತು ಕಾಣ ಹರಾಜಿಗಿಟ್ಟ ಕಿರೀಟವಲ್ಲ ಧರ್ಮದ ನಶೆಯಲ್ಲ ಅರಿವೆಂಬುದು ಸಮತೆಯ ಹೂ ನಿಸರ್ಗ ಸಹಜ ವಿವೇಕ ಕಾಣ ಲಿಂಗದ ಹಂಗಿಲ್ಲ ಗ್ರಂಥಗಳಲ್ಲಿ ಅವಿತಿಲ್ಲ ಅರಿವೆಂಬುದು ಬ್ರಹ್ಮಾಂಡ ಬಯಲು ಒಡಲಬೂದಿಮುಚ್ಚಿದ ಕೆಂಡ ಕಾಣ ಒಲಿಸಿಕೊಳ್ಳುವ ಸ್ವರವಲ್ಲ ನುಡಿಯ ಸೊಬಗಲ್ಲ ಅರಿವೆಂಬುದು ಅಂತರಾಳದ ಸಿರಿ ಸುಮ್ಮನಿರುವ ಸುಮ್ಮಾನ ಕಾಣ ತುಂಬಿಕೊಳ್ಳುವ ಮಾಹಿತಿಯಲ್ಲ ಗುರು ತೋರುವ ದಾರಿಯಲ್ಲ ಅರಿವೆಂಬುದು ನೆಲದ ಮರೆಯ ನಿಧಾನ ನಾವೇ ಹೀರಿಕೊಳ್ಳುವ ದಾಹ ಕಾಣ ಕೂಡಿಡುವ ಥೈಲಿಯಲ್ಲ ಅಕ್ಷರದ ಅಹಂಕಾರವಲ್ಲ ಅರಿವೆಂಬುದು ನೀರ ದೀವಿಗೆ ತನ್ನ ತಾ ಅರಿವ ಆತ್ಮಗನ್ನಡಿ ಕಾಣ ಕಣ್ಣಿಗೆ ನಿಲುಕುವ ಸತ್ಯವಲ್ಲ ಧ್ಯಾನಕ್ಕೆ ದಕ್ಕುವ ಮೌನವಲ್ಲ ಅರಿವೆಂಬುದು ಅವಿನಾಶಿ ನಿಜಕೆ ಬೆತ್ತಲಾದವರ ಅರಿವೆ ಕಾಣ ಕರ್ಮದ ಫಲವಲ್ಲ ದೇಶ ಕಾಲದ ಹಂಗಿಲ್ಲ ಅರಿವೆಂಬುದು ಕ್ಷಣಭಂಗುರ ಸಾವು ಚುಂಬಿಸಿದವರ ತುಟಿಮಿಂಚು ಕಾಣ ಅರಿವೆಂಬುದು ಸ್ಥಿರವಲ್ಲ ಹರಿವು ಇರುವುದ ಇರುವಂತೆಯೇ ಕಾಣುವ ಕಾಣ್ಕೆ ಕಾಣ - ಹಂದಲಗೆರೆ ಗಿರೀಶ್ Awareness Awareness is not wealth but a teacher Nor light is constant but a flow Awareness is not a piece of luggage kept in fair Nor the property that belongs to somebody It is an ailment found in an open place And it is a gulp of hungry souls too Awareness is not an auctioned crown Nor it is the morphine of religion Awareness is the flower of equality Or it is a natural innate wisdom Awareness has no gender obligation Nor it is hidden in the scriptures Look, awareness is an open universe Or it is like stales covered with ashes inside the stomach It’s not a loving tone Nor the beauty of a word Awareness is the richness of innermost And it is a silent happiness It doesn’t give information that can be infused Nor it is a way shown by a teacher Awareness is like a hidden wealth in the ground And it’s a thirst that we have to quench ourselves Neither it is a money bag Nor the pride of letters Awareness is a lamp of water Or it is knowing about oneself in the mirror of one’s self-conscious spirit Neither an eye-catching truth it is Nor a meditating silence Instead, awareness is immortal And those who have really turned nude None of their attire can be seen Neither it is the yield of Karma Nor the obligation of time Awareness is volatile And look at the glowing lips of those Who has already kissed the death Awareness is not constant but a flow It’s something like looking at the things as they are From Kannada: Handalagere Girish To English: Uday Itagi

    ಶ್ವೇತಾ ಹೊಸಬಾಳೆ ಶೇಕ್ಸಪಿಯರನ ಶ್ರೀಮತಿ ಕುರಿತು

  • ಬಿಸಿಲ ಹನಿ
  • "ಈ ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲಾ ಅವರವರ ಹೆಂಡ್ತಿ ಕಣ್ಣಿಗೆ ಯಾವತ್ತಿದ್ರೂ ಸಣ್ಣೋರೆ! ಯಾಕೆ ಅಂದ್ರೆ ಅವ್ರಿಗೊತ್ತಿರೋ ಅಷ್ಟು ಅವರ ದೌರ್ಬಲ್ಯಗಳು, ಹುಳುಕುಗಳು ಬೇರೆ ಯಾರಿಗೂ ಗೊತ್ತಿರೋದಿಲ್ಲ ನೋಡಿ...ನನ್ ಗಂಡ ಕೂಡಾ ಅಂಥ ಒಬ್ಬ ಯಕಃಶ್ಚಿತ್ ಮನುಷ್ಯ ಆಗಿದ್ದ ಅಂಥ ಹೇಳಿಕೊಳ್ಳೋದ್ರಲ್ಲಿ ನಂಗೆ ಯಾವ ಸಂಕೋಚಾನೂ ಇಲ್ಲ; ನನ್ ಗಂಡ ಒಬ್ನೇ ಏನು, ಎಲ್ಲಾ ಗಂಡಂದಿರ ಹಣೆಬರಹವೂ ಅಷ್ಟೇ" - ಇದು ಉದಯ್ ಇಟಗಿ ಬರೆದಿರುವ 'Shakespeareನ ಶ್ರೀಮತಿ' ನಾಟಕದಲ್ಲಿ ಮಿಸೆಸ್ ಆನಾ ಹ್ಯಾತ್ವೆ ಯ ಪಾತ್ರದ ಮಾತುಗಳು. ಇಂಥಾ ಸಾರ್ವತ್ರಿಕ ಸತ್ಯಗಳು, ಮನಸ್ಸಿನ ಮಾತುಗಳು ಈ ನಾಟಕದಲ್ಲಿ ತುಂಬಾ ಇದ್ದು ಅರೆ! ಹೌದಲ್ಲಾ ಎಂದೆನಿಸಿ ಮನಸ್ಸು ವಿಸಿಲ್ ಹೊಡೆಯುತ್ತದೆ. ಸ್ವಲ್ಪ ದಿನಗಳ ಹಿಂದೆ ಸಂಧ್ಯಾರಾಣಿ ಮತ್ತವರ ಸ್ನೇಹಿತರು ನಡೆಸುತ್ತಿರುವ 'ಯಾವ್ ಪುಸ್ಕ ಓದ್ತಿದ್ದೀರ?' ಎನ್ನುವ ಕ್ಲಬ್ ಹೌಸಿನ ಕಾರ್ಯಕ್ರಮ ದಲ್ಲಿ ಪ್ರೊ.ಲಕ್ಷ್ಮೀ ಚಂದ್ರಶೇಖರ್ ಈ ನಾಟಕವನ್ನು ತುಂಬಾ ಸೊಗಸಾಗಿ ಓದಿದ್ದರು. ಬಿ.ವಿ ಭಾರತಿ ಅದರ ಲಿಂಕನ್ನು ಶೇರ್ ಮಾಡಿಕೊಂಡಿದ್ರಿಂದ ಕಾರ್ಯಕ್ರಮ ಮುಗಿದು ಎಷ್ಟೋ ದಿನಗಳ ನಂತರವೂ ಕೇಳೋದಕ್ಕೆ ಆಗಿ ಖುಷಿ ಆಯ್ತು ಶೇಕ್ಸ್ ಪಿಯರ್ ಅವನ ನಾಟಕಗಳ ಮೂಲಕ ಇಡೀ ಜಗತ್ತಿಗೆ ಗೊತ್ತು; ಆದ್ರೆ ಅವನ ಹೆಂಡತಿ, ತೀರಾ ವೈಯಕ್ತಿಕ ವಿಷಯಗಳು ಎಷ್ಟು ಜನರಿಗೆ ಗೊತ್ತು? ಈ ಏಕವ್ಯಕ್ತಿ ನಾಟಕದ ಮೂಲಕ ಅವಳ ಅಂತರಂಗವನ್ನು ತೆರೆದಿಡುವ ಪ್ರಯತ್ನವನ್ನು ಮಾಡಿದ್ದಾರೆ ಉದಯ್ ಇಟಗಿ. ಇದೇ ಏಪ್ರಿಲ್ ೨೩ ರಂದು ಈ ನಾಟಕ ರಂಗಶಂಕರದಲ್ಲಿ ತೆರೆಯ ಮೇಲೂ ಬರಲಿದೆಯಂತೆ. ನನಗಂತೂ ನಾಟಕ ಕೇಳಿದ ಮೇಲೆ ನೋಡಲೇಬೇಕು ಎನಿಸಿದೆ. ನಾಟಕ ಇಷ್ಟ ವಾದ್ದರಿಂದ ಆಸಕ್ತ ಕೇಳುಗರಿಗಾಗಿ ನಾನೂ ಲಿಂಕನ್ನು ಶೇರ್ ಮಾಡಿದ್ದೇನೆ. ಈಗ ಸದ್ಯ ಮನೇಲೇ ಕುಳಿತು ಆರಾಮಾಗಿ ನಾಟಕ ಕೇಳಿ...ನಂತರ ಅದರ ರಂಗರೂಪವನ್ನೂ ತೆರೆಯ ಮೇಲೆ ನೋಡಿ ಆನಂದಿಸಿ. ಅದ್ಭುತ ನಾಟಕಗಳನ್ನು ಕೊಟ್ಟ ನಾಟಕಕಾರನ ಹೆಂಡತಿಯೇ ನಾಟಕವಾಗಿ, ನಾಟಕದ ಪಾತ್ರವಾಗಿ ತೆರೆಯ ಮೇಲೆ ಬಂದು ಮಾತನಾಡುವುದು what a wonderful concept what a thrill ಜಗತ್ತಿನ ಕಣ್ಣಿಗೆ ಅನಾಮಿಕಳಾಗಿಯೇ ಉಳಿದಿರುವ ಶೇಕ್ಸ್ ಪಿಯರ್ ನ ಹೆಂಡತಿಯನ್ನೂ ರಂಗದ ಮೇಲೆ ತರುವ ವಿಶೇಷ ವಸ್ತುವಿನ ನಾಟಕಕ್ಕಾಗಿ thank you very much to Uday Itagi . ನಾಟಕ ಕೇಳುವ ಖುಷಿ ಕೊಟ್ಟಿದ್ದಕ್ಕಾಗಿ Sandhya Rani ಮತ್ತು ಲಿಂಕನ್ನು ಶೇರ್ ಮಾಡಿದ್ದಕ್ಕೆ Bharathi B V ಗೂ ಥ್ಯಾಂಕ್ಯೂ. ವಿಶ್ವ ರಂಗಭೂಮಿ ದಿನದ ಶುಭಾಶಯಗಳು.

    "ಶೇಕ್ಸ್‌ಪಿಯರನ ಶ್ರೀಮತಿ" ನಾಟಕದ ಓದಿನ ಕಾರ್ಯಕ್ರಮ

  • ಶನಿವಾರ, ಫೆಬ್ರವರಿ 26, 2022
  • ಬಿಸಿಲ ಹನಿ
  • ನಿನ್ನೆ 'ಯಾವ್ ಪುಸ್ತಕ ಓದ್ತಾ ಇದ್ದೀರಾ? ಕ್ಲಬ್ ಹೌಸ್'' ವತಿಯಿಂದ ಹಮ್ಮಿಕೊಂಡಿದ್ದ ನನ್ನ "ಶೇಕ್ಸ್‌ಪಿಯರನ ಶ್ರೀಮತಿ" ನಾಟಕದ ಓದಿನ ಕಾರ್ಯಕ್ರಮ ಅದ್ಬತವಾಗಿತ್ತು. ಪ್ರತಿಕ್ರಿಯೆ ಕೂಡಾ ತುಂಬಾ ಚನ್ನಾಗಿತ್ತು. ಈ ಕಾರ್ಯಕ್ರಮವನ್ನು ಆಯೋಜಿಸಿದ ಸಂಧ್ಯಾರಾಣಿ ಮೇಡಂ ಶ್ರೀಕಾಂತ್ ಮತ್ತು ಅವಿನಾಶ್ ಕಾಮತ್ ಇನ್ನೂ ಮುಂತಾದವರಿಗೆ ನಮ್ಮ ಕೃತಜ್ಞತೆಗಳು . ಆ ನಾಟಕದ ಓದಿನ ಲಿಂಕ್ ಇಲ್ಲಿದೆ. ಬಿಡುವಾದಾಗ ಕೇಳಿ...
    https://www.clubhouse.com/room/mJXXjyqQ?utm_medium=ch_room_xerc&utm_campaign=tJPuf4D3JqxcCrlJlWFYlw-80416

    Whore!

  • ಮಂಗಳವಾರ, ಫೆಬ್ರವರಿ 08, 2022
  • ಬಿಸಿಲ ಹನಿ
  • Whore! When I was first abused My hair was full of flowers And my age was mostly ten. Dad murmured “You are like a whore” For my tinkling sound of bangles, anklets and for the fragrance of flowers “The mean minds who can’t tolerate the excitements of womanhood will grumble like this”- the first lesson I learned. Whore!! When he abused me first he was so angry For I did not follow the path he chose Not being able to control himself He stood in a state of helplessness. Why will he use such a dirty language? Why anger will come out of anger? For the helpless of not ruling me! - Second lesson I learned. Whore!!! I was shocked when a passerby called me for the first time. Just after tolerating this Again I heard the same cries of “whore” back to back And they infested on me The shock became surprise And gradually that surprise also turned to pity. For this is the howl of those who can’t digest the truth of my inner words- I learned the third lesson. Now ... I have developed a kind of love Towards the word “whore” That tolerates all the fuss, pride, helplessness, oppression and inferiority. That’s why I want to pacify and console the abusers like a baby. I want to get rid of all their evilness and ugliness By feeding them with love meals Whenever they call me “whore” For me it is heard like “Amma” only From Kannada: Chethana Teerthahalli To English: Uday Itagi ಸೂಳೆ! ಮೊದಲ ಸಲ ಬೈಸಿಕೊಂಡಾಗ ಮುಡಿ ತುಂಬ ಹೂವಿತ್ತು. ವಯಸ್ಸು ಹೆಚ್ಚೆಂದರೆ ಹತ್ತು. ಬಳೆ ಸದ್ದಿಗೆ, ಗೆಜ್ಜೆಗೆ, ಹೂ ಘಮಲಿಗೆಲ್ಲ ಅಪ್ಪ "ಸೂಳೇರ ಥರ" ಅನ್ನುತ್ತಿದ್ದರು. "ಹೆಣ್ಣುಸಂಭ್ರಮ ಸಹಿಸದ ಮನಸ್ಸುಗಳು ಹಾಗೆ ಬೈತವೆ" - ಮೊದಲನೆ ಪಾಠ ಕಲಿತೆ. ಸೂಳೆ!! ಮೊದಲ ಸಲ ಅಂವ ಬೈದಾಗ ಪೂರಾ ಕೋಪದಲ್ಲಿದ್ದ. ಅವನು ಆಯ್ದುಕೊಟ್ಟ ದಾರಿ ನಡೆಯಲೊಪ್ಪಲಿಲ್ಲ ನಾನು. ಅಹಮಿಕೆ ಅದುಮಿಕೊಳ್ಳಲಾಗದ ಅಸಹಾಯಕತೆಯಲ್ಲಿ ನಿಂತಿದ್ದ ಅವನು. ಇಂಥ ಬೈಗುಳ ಯಾಕೆ ಹೊರಡುತ್ತೆ? ಕೋಪದಿಂದ. ಕೋಪ ಯಾಕೆ ಬರುತ್ತೆ? ಆಳಲಾಗದ ಅಸಹಾಯಕತೆಗೆ! - ಎರಡನೇ ಪಾಠ ಕಲಿತೆ. ಸೂಳೆ!!! ಮೊದಲ ಸಲ ಗೊತ್ತುಗುರಿ ಇಲ್ಲದ ದಾರಿಹೋಕ ಕೂಗಿದಾಗ ಆಘಾತಗೊಂಡಿದ್ದೆ. ಸಾವರಿಸಿಕೊಂಡ ಬೆನ್ನಿಗೇ ಮತ್ತೆ, ಮತ್ತೆ ಮತ್ತೆ, ಮತ್ತಷ್ಟು ಕೂಗುಗಳು "ಸೂಳೆ" ಅನ್ನುತ್ತ ಮುತ್ತಿಕೊಂಡವು. ಆಘಾತ ಅಚ್ಚರಿಯಾಯ್ತು. ಅಚ್ಚರಿ ಅನುಕಂಪಕ್ಕೆ ತಿರುಗಿತು. ಯಾಕೆಂದರೆ, "ನನ್ನ ನಿಜದ ನುಡಿಗಳನ್ನ ಅರಗಿಸಿಕೊಳ್ಳಲಾಗದವರ ಅರಚಾಟವಿದು" - ಮೂರನೇ ಪಾಠ ಕಲಿತಿದ್ದೆ. ಈಗೀಗ.... ಯಾರೆಲ್ಲರ ಮತ್ಸರ, ಅಹಂಕಾರ, ಅಸಹಾಯಕತೆ, ದಬ್ಬಾಳಿಕೆ, ಕೀಳರಿಮೆ ಎಲ್ಲವನ್ನೂ ಸಹಿಸಿ ಸಂಭಾಳಿಸುವ 'ಸೂಳೆ' ಪದದ ಮೇಲೆ ನನಗೆ ಮಮತೆ ಹುಟ್ಟಿದೆ. ಹಾಗೆಂದು ನಿಂದಿಸುವವರನ್ನ ಮಡಿಲಿಗೆತ್ತಿಕೊಂಡು ಮಗುವಂತೆ ಮುದ್ದಿಸಿ ಸಮಾಧಾನಪಡಿಸಬೇಕನ್ನಿಸುತ್ತೆ. ಅವರೊಳಗಿನ ಏನೆಲ್ಲ ವಿಕೃತಿ ವಿಕಾರಗಳಿಗೆ ತಂಪೆರೆದು ವಾತ್ಸಲ್ಯವುಣಿಸಬೇಕೆನಿಸುತ್ತೆ. ಅವರು ನನ್ನನ್ನು 'ಸೂಳೆ' ಅಂದಾಗೆಲ್ಲಾ ಅದು ನನಗೆ 'ಅಮ್ಮಾ' ಅಂತಲೇ ಕೇಳತೊಡಗಿದೆ.

    Chethana Teerthahalli's Poem in my English Translation...

  • ಸೋಮವಾರ, ಜನವರಿ 31, 2022
  • ಬಿಸಿಲ ಹನಿ
  • ಒಬ್ಬರಿಗೊಬ್ಬರು ಸ್ವರ್ಗ ಕಾಣಿಸಿದ ಬಳಿಕ ಒಬ್ಬರಲೊಬ್ಬರು ನರಕ ಕಂಡುಕೊಂಡೆವು. "ನಿನಗೇನು ಬೇಕು?" ಕೇಳಿದೆ. ವಿರಹದ ಮುಳ್ಳು ಹಾಸು, ನೆನಪಿನ ರಝಾಯಿ - ಅಂದ. "ತೊಲಗಿಹೋಗು" ಅನ್ನೋದನ್ನ ಅದೆಷ್ಟು ಕಾವ್ಯಮಯವಾಗಿ ಹೇಳಿದ್ದ! "ನನಗೇನು ಕೊಡ್ತೀ?" ಕೇಳಿದೆ. ಜಗದ ಹೆಣ್ಣುಗಳೆಲ್ಲ ಕರಬುವ ಹಾಗೆ ಮಾಡ್ತೀನಿ - ಅಂದ. ಅಂವ ನನ್ನ ನೆನಪಲ್ಲಿ ನೊಂದು ರಾಶಿ ಪದ್ಯ ಬರೀತಾನಂತೆ! "ಕೊನೆಯದಾಗೊಮ್ಮೆ ಜಗಳಾಡೋಣವಾ?" ಕೇಳಿದ. ವಾಚಾಮಗೋಚರ ಬೈದುಕೊಂಡೆವು. ಮಾತು, ಮುತ್ತುಗಳಡಿ ಹುದುಗಿದ್ದ ಹೊಲಸೆಲ್ಲ ಉಕ್ಕಿ ರಾಚಿತು; ಒಬ್ಬರೊಳಗೊಬ್ಬರು ಇರುವ ಬಗೆ ನಿಚ್ಚಳ ತೋರಿ ಬಂತು. * ಈಡನ್ನಿನಲ್ಲಿ ಸೈತಾನ ಹಾವು ಕೇಕೆ ಹಾಕಿ ಕೇಳುತ್ತಿದೆ; - ಹೆಣ್ಣೇ! ನಿಷೇಧಿತ ಹಣ್ಣು ತಿನ್ನಲಷ್ಟೆ ಹೇಳಿದ್ದು ನಾನು. ಭೂಮಿ ತುಂಬ ಅದರ ಬೀಜ ಬಿತ್ತಿದ್ದೇಕೆ ನೀನು? - ಚೇತನಾ ತೀರ್ಥಹಳ್ಳಿ After sharing the heavenly pleasure with each other We found the hell in each other. "What do you want?" I asked him “A thorn bed of wrench and a quilt of your beautiful memories” Instead of saying "Get lost” How poetically he had put it across and asked me to quit myself! "What do you give me?" I asked him He said, “Out of pain in your memory I will write thousands of poems on you And thereby make all the women of the world feel envy about you.” "Shall we quarrel for the last time?” he asked me As a result we fell foul on each other All the dirt hidden under Our words and kisses Spilled all over the surface And it seemed obvious to both of us about our being inside each other A Satan snake in the Eden garden is asking me by laughing boisterously, “Oh, woman! I just told you to eat the forbidden fruit only But why did you sow its seeds on the earth?” From Kannada: Chetana Theerthahalli To English: Uday Itagi

    As an English Subtitler

  • ಶುಕ್ರವಾರ, ಜನವರಿ 07, 2022
  • ಬಿಸಿಲ ಹನಿ

  • This is thev short movie for which I have worked as an English subtitler.
    https://youtu.be/7hpvfg-9i6o

    The Monologues of Mandodari…

  • ಸೋಮವಾರ, ಜನವರಿ 03, 2022
  • ಬಿಸಿಲ ಹನಿ
  •  

     

    ಮಂಡೋದರಿಯ ಸ್ವಗತ ...

     

    ಹತ್ತು ಬಾರಿ ತಲೆ ಕಡಿದಾಗಲೂ

    ಹತ್ತೂ ಬಾರಿ ಅವನು ಚೀತ್ಕರಿಸಿದ್ದು ನನ್ನ ಹೆಸರನ್ನೇ...

    ಸೀತೆಯೆಂದಲ್ಲ   !!!

    ಅವನ ಎದೆಯಲ್ಲಿ ಅಮೃತ ಕಳಶವಿದೆಯೆಂದು

    ನನ್ನೊಬ್ಬಳಿಗೆ ಮಾತ್ರ ಗೊತ್ತಿತ್ತು.

    ರಾಮಬಾಣ  ಆಕಸ್ಮಿಕವಷ್ಟೇ !.

     

    ದಂಡಕಾರಣ್ಯದ  ಪ್ರಶಾಂತತೆಯಲ್ಲಿ

    ಮುದ್ದು ಶೂರ್ಪನಖಿಯ ನರಳಾಟ

    ನನ್ನವನಿಗಷ್ಟೇ ಗೊತ್ತು.

    ರಾಮನಿಗೆ ತಂಗಿಯೂ ಇಲ್ಲ ..... !!

    ತಂಗಿಯ ಪ್ರೀತಿಯೂ ಇಲ್ಲ !!!

     

    ಬೆಂಕಿಯುಂಡೆಯ ತಂದು

    ಅಶೋಕ ವನದಲ್ಲಿಟ್ಟ  ರಾತ್ರಿ ,

    ಅಂತಃಪುರದಲ್ಲಿ ತಣ್ಣನೆಯ ದೀಪವುರಿದಿತ್ತು.

    ಅಜಾನುಬಾಹು ಬರಸೆಳೆದು ಪಿಸುಗುಟ್ಟಿದ್ದ

    " ಎದೆಯಲ್ಲಿರುವುದು ಸೇಡಷ್ಟೇ, ಸೀತೆಯಲ್ಲ !.....ಅಕ್ಷಯನ ಮೇಲಾಣೆ ".

    ಹತ್ತೂ ತಲೆಗಳನ್ನ ನೇವರಿಸಿ ಸಂತೈಸಿದ್ದೆ.

     

    ನೇಗಿಲ ಕುಳದಿಂದ ಮೇಲೆದ್ದವಳು

    ಮೇಗಲ ಕುಲದಿಂದ ಮೇಲೆದ್ದವಳ

    ಸವತಿಯಾಗುವುದುಂಟೆ  ಛೇ......

    ಲಂಕೆಯ ಸಾಮಾನ್ಯ ರಕ್ಕಸಿಯಷ್ಟೂ

    ಸುಖಪಡದ ಸೀತೆಯ ಬಗ್ಗೆ ಮರುಕವಿದೆ.

     

    ಈಗ ರಾಮ ರಾಜ್ಯದಲ್ಲಿ ದಿನಃಪ್ರತಿ

     ನೂರು ಸೀತೆಯರ ಅಗ್ನಿಪರೀಕ್ಷೆ.

    ಗೆದ್ದವರಾರೂ ಇಲ್ಲ, ಬೂದಿಯಾದವರೇ ಎಲ್ಲಾ.....!

     

    ಸ್ತ್ರೀಮೇಧದ ಕಟು ಕಮಟು

    ದೂರದ ಲಂಕೆಗೆ ಅಡರಿ

    ಗೋರಿಯೊಳಗೆ ಉಸಿರುಗಟ್ಟಿ

    ಸರ್ರನೆ ಎದ್ದು ಕುಂತು ಉಸುರಿದ್ದಾಳೆ ಮಂಡೋದರಿ

    ರಾವಣನ ರಾಜ್ಯದಲ್ಲಿ ಹೀಗೆಂದೂ ಆಗಿರಲಿಲ್ಲ…. ಪ್ಚ್

     

    - ಗಂಧರ್ವ ರಾಯರಾವುತ್

     

    The Monologue of Mandodari…

     

    Ten times

    whenever his head was cut off

    ten times also

    he yelled my name only…

    but not Sita’s!!

    I knew myself that

    there was an elixir in his chest

    Ramabana was just a coincidence!  

     

    Only my husband knew

    the groaning of his dear sister Shurpanakhi 

    that was heard all over against the serenity of Dandakaranya

    Rama had neither a sister..... !!

    nor had he felt the sisterly love!!

     

    The night when he brought the fire ball

    and kept it at the Ashoka Vana

    a cold lamp was burning there in the harem.

    the long-armed man drew me closer to his chest and whispered into my ears

    “Swear on Akshaya,

    Only revenge is there in my heart

    but not Sita!”

    I consoled him by rubbing all his ten heads gently.

     

    To a woman who rose from the plough

    and from an upper caste too,

    how could I become a co-wife? 

    Alas!

    I feel pity for Sita

    for not enjoying the happiness

    not even as much worth as

    a common demoness of Lanka did 

     

    Now that in the state of Rama

    every day hundreds of Sita

    are being tested by fire

    but none succeded in it,

    Instead, every one turned into ashes only...!

     

    The pungent smell of women’s burning alive

    reached the distant Lanka even

    and feeling suffocated in the grave

    Mandodari woke up speedily and uttered

    “Never ever happened like this in the state of Ravana…. 

    Oops!”

     

    Froma Kannada: Gandharva Raya Rawuth

    To English: Uday Itagi