Demo image Demo image Demo image Demo image Demo image Demo image Demo image Demo image

I am a mosque....

  • ಶನಿವಾರ, ಡಿಸೆಂಬರ್ 25, 2021
  • ಬಿಸಿಲ ಹನಿ
  • I am a mosque 
    and he a temple
    we have given birth to the Lord Jesus
    Ayodhya has never been a problem for us 
    and now our living with no problems itself is a big problem for them.

    Mehajabin-Telugu poetess
    To English: Uday Itagi

    ನಾನು ಮಸೀದಿ ಅವನು ಮಂದಿರ
    ನಮಗೊಬ್ಬ ಏಸು ಪ್ರಭು ಹುಟ್ಟಿದ
    ಅಯೋಧ್ಯೆ ನಮಗೆಂದೂ ಸಮಸ್ಯೆ­ಯಾಗಲಿಲ್ಲ
    ನಮಗೆ ಸಮಸ್ಯೆಯಾಗಲಿಲ್ಲ ಎಂಬುದೇ ಅವರಿಗೆ ಸಮಸ್ಯೆ                        
    ಮೆಹಜಬಿನ್, ತೆಲುಗು ಕವಯತ್ರಿ

    ಇವತ್ತಿನ ಪ್ರಜಾವಾಣಿಯಲ್ಲಿ ನನ್ನ ಅನುವಾದಿತ ಕಥೆ

  • ಭಾನುವಾರ, ಡಿಸೆಂಬರ್ 12, 2021
  • ಬಿಸಿಲ ಹನಿ
  • ಇವತ್ತಿನ ಪ್ರಜಾವಾಣಿಯಲ್ಲಿ ಸುಪ್ರಸಿದ್ಧ ಕಥೆಗಾರ ಎಚ್ ಎಚ್ ಮನ್ರೋ (ಸಾಕಿ) ಅವರ ಪ್ರಸಿದ್ಧ ಕಥೆ 'ಡಸ್ಕ್" ನನ್ನ ಕನ್ನಡ ಅನುವಾದದಲ್ಲಿ. ಪ್ರಜಾವಾಣಿ ಬಳಗಕ್ಕೆ ಧನ್ಯವಾದಗಳು. ಅದರ ಲಿಂಕ್ ಇಲ್ಲಿದೆ https://www.prajavani.net/artculture/short-story/nasugatttalu-short-story-891859.html

    H. H. Munro's (Saki) well known story 'Dusk' in my Kannada translation has been published in today's 'Prajavani'. Here is the link......
    https://www.prajavani.net/artculture/short-story/nasugatttalu-short-story-891859.html 
    Thanks to Prajavani.

    A piece of commode

  • ಭಾನುವಾರ, ಡಿಸೆಂಬರ್ 05, 2021
  • ಬಿಸಿಲ ಹನಿ
  •  ಕೊಮೋಡಿನ ಚೂರು


    ಯಾರದೋ ಟಾಯ್ಲೆಟ್ಟಿನ

    ಕೊಮೋಡಿನಿಂದ ಸಿಡಿದ 

    ಒಂದು ಚೂರು ನಾನು!

    ಮುಟ್ಟಿಸಿಕೊಂಡಿದ್ದೇನೆ - ಮಲ ಮೂತ್ರಗಳನ್ನು,

    ಜಾರಿಸಿಕೊಂಡಿದ್ದೇನೆ- ಮೈಥುನದಲ್ಲಿ ಚಿಮ್ಮಿದ ವೀರ್ಯವನ್ನು

    ಹರಿಯ ಬಿಟ್ಟಿದ್ದೇನೆ - ಕಟ್ಟೊಡೆದ ಮುಟ್ಟಿನ ನೆತ್ತರನ್ನು

    ಸಹಿಸಿಕೊಂಡಿದ್ದೇನೆ – ವಿಕಾರ ವಾಂತಿಗಳನ್ನು!

    ಆದರೀಗ 

    ಕೊಚ್ಚೆಗೆ ಬಿದ್ದ ನನ್ನನ್ನು 

    ಮೆಲ್ಲನೆ ಮೇಲಕ್ಕೆತ್ತಿ 

    ಪೂಜೆಯ ಆಟವಾಡುತ್ತಿದ್ದಾರೆ

    ಬೀದಿ ಹೆತ್ತ ಮಕ್ಕಳು!

    ಮಡಿ-ಮೈಲಿಗೆ, ಪ್ರಾರ್ಥನೆ

    ಮಂತ್ರ-ತಂತ್ರ, ಆಚಾರ-ಪ್ರಚಾರ,

    ಕಾಣಿಕೆ ಹುಂಡಿಯೂ ಇಲ್ಲದೆ

    ಸುಮ್ಮನೆ ನನ್ನ ಮುಂದೆ 

    ಕೈಜೋಡಿಸಿ ನಿಂತಿವೆ

    ಈ ಹಸಿದ ಕೂಸುಗಳು!

    ಹಾಲು-ತುಪ್ಪದಭಿಷೇಕದಲ್ಲಿ ಮೀಯುವ

    ಪುಣ್ಯ ಕ್ಷೇತ್ರದ ವಿಗ್ರಹವೇ

    ಕ್ಷಮಿಸಿಬಿಡು ನನ್ನನ್ನು... 

    ಈ ನಿರ್ಮಲ ಭಕ್ತಿಯ ಮುಂದೆ

    ದೇವರಾಗದೆ ಎನಗೆ 

    ಬೇರೆ ವಿಧಿಯಿಲ್ಲ!

    *****

    ವಿಲ್ಸನ್ ಕಟೀಲ್

    A piece of commode

     

    I am 

    a broken piece of commode

    which got split from

    someone’s toilet!

    I got touched with 

    shit and urine,

    and spilt the sperm also

    that was discharged during sex

    and I also endured gruesome menstrual blood and sickly vomiting!

     

    But now that

    street children have slowly lifted me up

    from a puddle

    where I had fallen into

    and they are now worshipping me like a god. 

     

    These hungry babies just stand in front of me

    with their hands folded

    without knowing

    magics and tricks, rituals and publicity

    and without offering any money to the God 

    Oh, you idol of a holy place

    who is bathing with milk and ghee every day!

    please forgive me

    in front of this pure devotion

    to me, there is no other go

    without turning myself into God


    From Kannada: Wilson Kateel

    To English: Uday Itagi


    ವಿನೂತನ ಶೈಲಿಯ ಉದಯ ಇಟಗಿ ಅವರ ನಾಟಕ- ಶೇಕ್ಸ್ ಪಿಯರನ ಶ್ರೀಮತಿ

  • ಬುಧವಾರ, ಡಿಸೆಂಬರ್ 01, 2021
  • ಬಿಸಿಲ ಹನಿ
  •  ಸೃಜನಶೀಲರು ಎಂದರೆ ಯಾರು? ಅವರ ಅಸಾಧಾರಣ ಪ್ರತಿಭೆಯಿಂದಾಗಿ ಸೃಜನಶೀಲ ವ್ಯಕ್ತಿಗಳು ವಿಭಿನ್ನ ಎನಿಸಿಕೊಳ್ಳುತ್ತಾರೆ.

    ಸಾಹಿತಿ, ಚಿತ್ರಕಲಾವಿದ, ನಟ, ಗಾಯಕ, ಕ್ರೀಡಾಪಟು ಹೀಗೆ ಸೃಜನಶೀಲ ಸ್ಟಾರ್‌ಗಳ ಪಟ್ಟಿ ಇದ್ದೇ ಇರುತ್ತದೆ. ಇವರೆಲ್ಲ ತಮ್ಮ ವಿಶಿಷ್ಟ ಪ್ರತಿಭೆಯಿಂದಾಗಿ ಲಕ್ಷಾಂತರ ಜನರಿಂದ ಆರಾಧಿಸಲ್ಪಡುತ್ತಾರೆ ಮತ್ತು ತಮ್ಮ ಕಲೆಯ ಮೂಲಕ ಅಜರಾಮರರಾಗುತ್ತಾರೆ‌. ಇವರ ಕಲಾಕೃತಿಗಳ ಮೂಲಕ ಸದಾಕಾಲ ಜೀವಂತವಾಗಿರುತ್ತಾರೆ. ಇವರಿಗೆ ಹುಟ್ಟಿದೆ ಆದರೆ ಸಾವೆಂಬುದಿಲ್ಲ. ಸತ್ತ ಮೇಲೆ ಕೂಡ ಹೊಸ ಸ್ವರೂಪ ಪಡೆದುಕೊಂಡು ಮರು ಹುಟ್ಟು ಪಡೆಯುತ್ತಲೇ ಇರುತ್ತಾರೆ.

    ಇತಿಹಾಸ ನಿರ್ಮಿಸಿದ ಕಲಾಕಾರರ ವೈಯಕ್ತಿಕ ಬದುಕಿನ ಬಗ್ಗೆ ಸಾಮಾನ್ಯರಿಗೆ ತೀವ್ರ ಕುತೂಹಲ ಉಂಟಾಗಿ, ಅದಕ್ಕೆ ತಕ್ಕಂತೆ ಅನೇಕ ಅಭಿಮಾನಿಗಳು ಸೃಷ್ಟಿಯಾಗುತ್ತಾರೆ. 

    ಸಾರ್ವಜನಿಕ ಬದುಕಿನಲ್ಲಿ ಆರಾಧಿಸಲ್ಪಡುವ ಇವರ ವೈಯಕ್ತಿಕ ಬದುಕು ಹೇಗಿರಬಹುದು? ಆದರ್ಶ ಕನಸುಗಳ ಮಾರುವ ಇವರು, ವೈಯಕ್ತಿಕ ಬದುಕಿನಲ್ಲಿ ಅವೇ ಆದರ್ಶಗಳನ್ನು ಉಳಿಸಿಕೊಂಡಿರುತ್ತಾರಾ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ವಿಚಿತ್ರ ಸತ್ಯಗಳು ಹೊರ ಬಿದ್ದಾಗ ಸಹಜವಾಗಿ ಅವರ ಅಭಿಮಾನಿಗಳಿಗೆ ಬೇಸರವಾಗುತ್ತದೆ. 

    ಆದ್ದರಿಂದ ಪ್ರತಿಯೊಬ್ಬ ಸೆಲೆಬ್ರಿಟಿಗಳ ವೈಯಕ್ತಿಕ ಬದುಕನ್ನು ಕೆದಕಲು ಹೋಗಬಾರದು. 'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ' ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ. 

    ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಬದುಕು, ಅವನ ಸಾರ್ವಜನಿಕ ಬದುಕಿಗಿಂತ ಮುಕ್ತವಾಗಿ ಇರುತ್ತದೆ, ಮುಕ್ತವೆಂದರೆ ಆದರ್ಶ, ಸುಂದರ ಎಂಬರ್ಥವಲ್ಲ. ಅದು ವಿಕಾರ ಮತ್ತು ವಿಚಿತ್ರವಾಗಿ ಇರಬಹುದು ಕೂಡ! 

    ಈ ಹಿನ್ನೆಲೆಯಲ್ಲಿ ಅನೇಕ ಸೆಲೆಬ್ರಿಟಿಗಳ ಜೊತೆಗೆ ನೂರಾರು ದಂತಕಥೆಗಳು ಹುಟ್ಟಿಕೊಳ್ಳುತ್ತವೆ. ಸೃಜನಶೀಲ ವ್ಯಕ್ತಿ ಒಂದರ್ಥದಲ್ಲಿ ತಿಕ್ಕಲಾಗಿ ಕಾಣಿಸುವುದು ಸಹಜ. 


    ಏಕೆಂದರೆ ಅವನು ಕೇವಲ ಒಳ್ಳೆಯವನಾಗಿದ್ದರೆ,  ಅಥವಾ ಒಳ್ಳೆಯದನ್ನೇ ಆಲೋಚಿಸಿದರೆ ದೊಡ್ಡ ದೊಡ್ಡ ಪಾತ್ರಗಳನ್ನು ಸೃಷ್ಟಿ ಮಾಡಲಾರ. ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯಿಸಲಾರ. ಮಹಾಕಾವ್ಯಗಳಲ್ಲಿ ಒಳ್ಳೆಯವರ ಜೊತೆಗೆ ಕೆಟ್ಟ ಪಾತ್ರಗಳನ್ನು ಸೃಷ್ಟಿ ಮಾಡುವಾಗ ಸೃಜನಶೀಲ ಕವಿ ಕೆಟ್ಟದಾಗಿ ಕಲ್ಪಿಸಿಕೊಳ್ಳಬೇಕು. ಆದ್ದರಿಂದ ಕೆಲವೊಮ್ಮೆ ಈ ಸೃಜನಶೀಲರು ಕೆಟ್ಟವರಾಗಿ ಕಾಣಿಸುತ್ತಾರೆ.

    ಕಲ್ಪನಾ ಲೋಕದಲ್ಲಿ ವಿಹರಿಸದೇ, ವಿಭಿನ್ನ ಪಾತ್ರಗಳನ್ನು ಕಟ್ಟಿಕೊಡುವುದು ಅಸಾಧ್ಯ. ಪ್ರೀತಿ, ಪ್ರೇಮ, ಕಾಮ, ರಾಗ, ದ್ವೇಷ ಹಾಗೂ ವೈರಾಗ್ಯವನ್ನು ಗ್ರಹಿಸಿಕೊಂಡು, ನವರಸಗಳನ್ನು ಹೊರ ಹಾಕಬೇಕಾಗುತ್ತದೆ. ಹಾಗಿರುವಾಗ ಮನಸಿನಲ್ಲಿ ಅನೇಕ ವಿಕಾರ ಭಾವನೆಗಳು ಉತ್ಪತ್ತಿಯಾಗಿ, ವಿಸರ್ಜನೆಯಾಗುತ್ತವೆ.

    ಅವನ ಎಲ್ಲ ದೌರ್ಬಲ್ಯಗಳನ್ನು ಹತ್ತಿರದಿಂದ ನೋಡುವ ಹೆಚ್ಚು ಅವಕಾಶ ಅವನ ಕೈ ಹಿಡಿದ ಹೆಂಡತಿ ಮತ್ತು ಹತ್ತಿರದ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಇರುತ್ತದೆ. ಒಬ್ಬ ಸೆಲೆಬ್ರಿಟಿ ಸಾರ್ವಜನಿಕವಾಗಿ ಹೊರ ಬಂದಾಗ ಮುಖವಾಡ ಧರಿಸಿ ಬರಬೇಕಾಗುತ್ತದೆ. ವೈಯಕ್ತಿಕ ದೌರ್ಬಲ್ಯಗಳನ್ನು ಮರೆ ಮಾಚುವ ಪ್ರಯತ್ನ ಮಾಡುವುದು ಅವನ ಪ್ರತಿಷ್ಟೆಯನ್ನು ಕಾಪಾಡುವ ಕಾರಣಕ್ಕಾಗಿ. ಅದೇ ಖಾಸಗಿಯಾಗಿ ಇರುವಾಗ ಮುಖವಾಡ ಕಳಚಿ, ಸಹಜ ಮುಖದಲ್ಲಿ ಇರಬೇಕು. ಪಾತ್ರ ಮುಗಿದ ಮೇಲೆ ಬಣ್ಣ ಮತ್ತು ವಿಗ್ ಕಳಚಿದಂತೆ! 

    ಜಗದ್ವಿಖ್ಯಾತ ಕವಿ, ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ವೈಯಕ್ತಿಕ ಬದುಕಿನ ಕುರಿತು ಅಂತಹ ನೂರಾರು ಕತೆಗಳು ಇವೆ. ಜಗದ್ವಿಖ್ಯಾತರು ಅವರ ಹೆಂಡತಿಯರ ದೃಷ್ಟಿಯಿಂದ ಹೇಗಿರಬಹುದು? ಎಂದು ನೋಡುವ ಪ್ರಯತ್ನದ ಪ್ರತಿಫಲವೇ ಲೇಖಕ ಉದಯ ಇಟಗಿ ಬರೆದ ಏಕಾಭಿನಯ ನಾಟಕ 'ಶೇಕ್ಸ್‌ಪಿಯರ್‌‌ನ ಶ್ರೀಮತಿ.' ಜಗತ್ತಿನಲ್ಲಿ ಅತೀ ಹೆಚ್ಚು ಮನ್ನಣೆ, ಖ್ಯಾತಿ ಗಳಿಸಿದ ಇಂಗ್ಲಿಷ್ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್‌ ಕುರಿತು ಇಲ್ಲಿ ಹೇಳುವುದು ಅಪ್ರಸ್ತುತ ಅಂದುಕೊಳ್ಳುತ್ತೇನೆ. ಶೇಕ್ಸ್‌ಪಿಯರ್‌ ಎಲ್ಲರಿಗೂ ಚಿರಪರಿಚಿತ, ಅವನನ್ನು ಓದದವರಿಗೂ ಕೂಡ! 

    ಆ ಹೆಸರಿನಲ್ಲಿ ಅಂತಹ ಮಾಂತ್ರಿಕತೆ ಇದೆ. ಹೊಗಳಿಕೆ, ವ್ಯಂಗ್ಯ, ಟೀಕೆ, ಟಿಪ್ಪಣೆಗಳಿಗೆ ಅವನ ಹೆಸರನ್ನು ಬಳಸುತ್ತಾರೆ. ಉದಾಹರಣೆಗೆ ಯಾರನ್ನಾದರೂ, ನೀ ಬರಹಗಾರ ಅಲ್ಲ ಎಂದು ಬೈಯ್ಯಬೇಕಾದರೆ ' ಮಗಾ ನೀ ಏನ ದೊಡ್ಡ ಶೇಕ್ಸ್‌ಪಿಯರ್‌ ಆಗಿ ಏನ? ಎಂಬ ಮೂದಲಿಕೆ ಹೊರ ಬೀಳುತ್ತದೆ. 

    ಇನ್ನು ಅವನನ್ನು ಓದಿ, ಅವನ ನಾಟಕಗಳನ್ನು ನೋಡಿದವರ ಪಾಲಿಗೆ ಆರಾಧ್ಯದೈವ. ಅವನ ಕಾಲಾಂತರದಲ್ಲಿ ಅವನ ವೈಯಕ್ತಿಕ ಬದುಕಿನ ಕುರಿತು ನಿರಂತರ ಸಂಶೋಧನೆ ನಡೆಯಿತು. ಅನಕ್ಷರಸ್ಥನಾದ ಶೇಕ್ಸ್‌ಪಿಯರ್‌ ಇಷ್ಟೆಲ್ಲಾ ಬರೆಯಲು ಸಾಧ್ಯವಾಗಿರಬಹುದಾ? 'ಅವನು ನಾಟಕಗಳನ್ನು ಬರೆದೇ ಇಲ್ಲ, ಅವನ ತಂಗಿ ಅಥವಾ ಬೇರೆ ಯಾರೋ ಬರೆದಿರಬಹುದು' ಎಂಬ ತಳ ಬುಡವಿಲ್ಲದ ವಾದ ವಿವಾದಗಳ ಮಧ್ಯೆ ಅವನೊಬ್ಬ ಅದ್ಭುತ ಕವಿ, ನಾಟಕಕಾರ ಎಂಬುವುದರಲ್ಲಿ ಸಂಶಯವೇ ಇಲ್ಲ. 

    ಮಿಸೆಸ್ ಆನ್ ಹ್ಯಾತ್ವೇ ಶೇಕ್ಸ್‌ಪಿಯರ್‌ ದೃಷ್ಟಿಯಲ್ಲಿ ವಿಲಿಯಂ ಹೇಗೆ ಇದ್ದ ಎಂಬುದನ್ನು ಸದರಿ ನಾಟಕದಲ್ಲಿ ಅವಳ ಮೂಲಕ ಹೇಳಿಸಲಾಗಿದೆ. ಅವನ ಸಾವಿನ ನಂತರ ಪ್ರಕಟಗೊಂಡ ಅನೇಕ ಆಕರಗಳನ್ನು ಆಧರಿಸಿ ಬರೆಯಲಾಗಿದೆ. ಏಕ ಪಾತ್ರದ ಸ್ವಗತದ ರೂಪದ ನಾಟಕದಲ್ಲಿ ಶೇಕ್ಸ್‌ಪಿಯರ್‌ ಪತ್ನಿ ತನ್ನ ಮತ್ತು ಅವನ ಸಂಬಂಧವನ್ನು ಹೇಳುವುದರ ಜೊತೆಗೆ, ಅವನೆಷ್ಟು ಕೊಳಕ ಎಂಬುದನ್ನು ಹೇಳುತ್ತಾಳೆ. ಅವನು ಕೊಳಕನಾಗಿದ್ದನೋ, ಅವಳಿಗೆ ಕೊಳಕಾಗಿ ಕಂಡನೋ ಎಂಬುದು ಮುಖ್ಯವಾಗುವುದಿಲ್ಲ. ತನಗಿಂತ ಎಂಟು ವರ್ಷ ಚಿಕ್ಕವನಾಗಿದ್ದ ವಿಲಿಯಂ ಇವಳೊಂದಿಗೆ ಮದುವೆಯಾಗಿ ಮಕ್ಕಳಾದ ಮೇಲೆ ದುಡಿಮೆಗಾಗಿ ಲಂಡನ್ ಸೇರಿಕೊಳ್ಳುತ್ತಾನೆ. ಅಲ್ಲಿ ಹೆಸರು, ಕೀರ್ತಿ ಗಳಿಸಿಕೊಂಡು ಜಗತ್ತಿನ ರಸಿಕರ ಮನಸೂರೆಗೊಂಡರೂ, ಹೆಂಡತಿಗೆ ಕೆಟ್ಟವನಾಗಿ ಕಾಣಿಸುತ್ತಾನೆ. ಅವನು ಕಾಮುಕ, ಸಲಿಂಗಕಾಮಿ ಎಂದು ಆನ್ ನಾಟಕದುದ್ದಕ್ಕೂ ದೂರುವ ಸಂಭಾಷಣೆಗಳಿವೆ. ಇರಲಿ, ನೀವು ಆ ಮಾತುಗಳನ್ನು ನಾಟಕ ಓದಿ, ಕೇಳಿ, ನೋಡಿ ತಿಳಿಯಿರಿ.

    ಒಂದೇ ಓದಿಗೆ ಮುಗಿಯುವ ನಾಟಕ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ವ್ಯಕ್ತಿಯ ಮನೋದೌರ್ಬಲ್ಯಗಳು ಮತ್ತು ಅವುಗಳಿಂದ ಹೊರ ಬರುವ ವಿಧಾನವನ್ನು ತನ್ನ ಪಾತ್ರಗಳ ಮೂಲಕ ಹೇಳುವ ಶೇಕ್ಸ್‌ಪಿಯರ್‌ ತನ್ನ ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಲು ವಿಫಲನಾಗಿದ್ದನಾ? ಅಥವಾ ಅವನ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ದಡ್ಡ  ಹೆಂಡತಿ ವಿಫಲಳಾದಳೋ? ಎಂಬ ಅಭಿಪ್ರಾಯ ಮೂಡುವುದು ಸಹಜ. 

    ನಾನು ಮೊದಲೇ ಹೇಳಿದಂತೆ ಪ್ರತಿಯೊಬ್ಬ ಸೃಜನಶೀಲ ವ್ಯಕ್ತಿ ಹತ್ತಿರದವರಿಗೆ ಖಂಡಿತವಾಗಿ ತಿಕ್ಕಲಾಗಿ ಕಾಣಿಸುತ್ತಾನೆ. ಅದಕ್ಕೆ ಶ್ರೀಮತಿ ಆನ್ ಹೊರತಲ್ಲ. ಇಂತಹ ಒಂದು ಪ್ರಯತ್ನ ಕನ್ನಡದ ಸಂದರ್ಭದಲ್ಲಿ ಹೊಸದು, ಈ ಪ್ರಯತ್ನದಲ್ಲಿ ಮಿತ್ರ, ಇಂಗ್ಲಿಷ್ ಪ್ರಾಧ್ಯಾಪಕ ಉದಯ ಇಟಗಿ ಯಶಸ್ವಿಯಾಗಿದ್ದಾರೆ. ಹಲವಾರು ವರ್ಷ ಹೊರ ದೇಶ ಲಿಬಿಯಾದಲ್ಲಿ ಸೇವೆ ಮಾಡಿ, ರಾಜ್ಯಕ್ಕೆ ಮರಳಿದ ಮೇಲೆ ವಿಶೇಷ ಬರಹದಲ್ಲಿ ನಿರತರಾಗಿದ್ದಾರೆ. 

    ಜಗತ್ತಿನ ಅನೇಕ ಸೃಜನಶೀಲ ವ್ಯಕ್ತಿಗಳ ಕತೆ ಇದಕ್ಕಿಂತ ಭಿನ್ನವಾಗಿ ಇರಲು ಸಾಧ್ಯವಿಲ್ಲ. ದೊಡ್ಡವರ ಸಣ್ಣತನ ಮತ್ತು ತಿಕ್ಕಲುತನವನ್ನು ನಾನು ಕೂಡ ಹತ್ತಿರದಿಂದ ನೋಡಿ ಬೆರಗಾಗಿದ್ದೇನೆ. ಆದರೆ ನಮ್ಮ ವಾತಾವರಣ ಯುರೋಪಿಯನ್ ಹಾಗೂ ಹೊರ ರಾಷ್ಟ್ರಗಳಷ್ಟು ಮುಕ್ತವಾಗಿಲ್ಲ ಎಂಬ ಕಾರಣದಿಂದ ಅದನ್ನು ಬರೆಯಲಾಗುವುದಿಲ್ಲ ಅಷ್ಟೇ!

    ಸುಮಾರು ಅರವತ್ತು ಪುಟಗಳ ಸುದೀರ್ಘ ಚುರುಕಾದ ಸಂಭಾಷಣೆ ಈ ನಾಟಕದ ಹೆಗ್ಗಳಿಕೆ. ನಾಟಕ ರಸವತ್ತಾಗಿ ಇರಲಿ ಎಂಬ ಕಾರಣದಿಂದ ತುಂಬ ಅರ್ಥಪೂರ್ಣ ಸಾನೆಟ್ಟುಗಳನ್ನು ಲೇಖಕರು ಆಯ್ಕೆ ಮಾಡಿಕೊಂಡಿದ್ದಾರೆ. ಏಕವ್ಯಕ್ತಿ ನಾಟಕವನ್ನು ಅಭಿನಯಿಸಲು, ಇಂಗ್ಲಿಷ್ ಪ್ರಾಧ್ಯಾಪಕರು, ಹಿರಿಯ ಕಲಾವಿದರಾದ ಶ್ರಿಮತಿ ಲಕ್ಷ್ಮಿ ಚಂದ್ರಶೇಖರ ಅವರು ಒಪ್ಪಿಕೊಂಡಿರುವುದು ಅಷ್ಟೇ ಮಹತ್ವದ ಸಂಗತಿ. 

    ಇಂತಹ ಕುತೂಹಲಕಾರಿ ನಾಟಕ ರಚಿಸಿದ ಉದಯ ಇಟಗಿ ಅವರನ್ನು ಅಭಿನಂದಿಸುತ್ತೇನೆ. ಆದಷ್ಟು ಬೇಗ ನಾಟಕ ಸಾಹಿತ್ಯ ಆಸಕ್ತರಿಗೆ ತಲುಪಲಿ ಎಂದು ಆಶಿಸುತ್ತೇನೆ. 




    ಸಿದ್ದು ಯಾಪಲಪರವಿ ಕಾರಟಗಿ.

    ಇಂಗ್ಲಿಷ್ ಉಪನ್ಯಾಸಕ.

    #123, ಶರಣಾರ್ಥಿ, ವಿಶ್ವೇಶ್ವರಯ್ಯನಗರ

    ಕಳಸಾಪುರ ರಸ್ತೆ, ಗದಗ- ೫೮೨೧೦೩.

    9448358040

    ಕರ್ನಲ್ ಗಡಾಫಿ ಹಾಗೂ ಸಣ್ಣಪ್ಪನವರು

  • ಮಂಗಳವಾರ, ನವೆಂಬರ್ 02, 2021
  • ಬಿಸಿಲ ಹನಿ
  • ಮೊನ್ನೆಯಷ್ಟೇ ರಹಮತ್ ತರೀಕೆರೆ ಸರ್ ಅವರು ನನ್ನ ಪುಸ್ತಕ 'ಲಿಬಿಯಾ ಡೈರಿ" ಕುರಿತು 'ನ್ಯಾಯ ಪಥ' ಪತ್ರಿಕೆಯಲ್ಲಿ ಸಂಕ್ಷಿಪ್ತವಾಗಿ ಬರದಿದ್ದರು. ಇದೀಗ ಸವಿವರವಾಗಿ ವಿಮರ್ಶಿಸಿದ್ದಾರೆ. ಅವರಿಗೆ ತುಂಬು ಹೃದಯದ ಪ್ರೀತಿ ಮತ್ತು ಧನ್ಯವಾದಗಳು . ಓದಿ ತಮ್ಮ ಅಭಿಪ್ರಾಯ ತಿಳಿಸಿ. 


    https://m.facebook.com/story.php?story_fbid=4416822685074832&id=100002414310539

    ನಮ್ಮ ಮನೆಯ ಬಳಿ ಒಂದು  ತೋಟವಿದೆ. ಅಲ್ಲಿಗೆ ಆಗಾಗ್ಗೆ ಬರುವ ಹಂಪಿಯ ಫೊಟೊಗ್ರಾಫರ್ ಮಿತ್ರರಾದ ಶಿವಶಂಕರ ಬಣಗಾರ ಅವರು, ಒಮ್ಮೆ  ಮನೆಗೂ ಬಂದರು. `ಸಾರ್! ಕಲಾವಿದರನ್ನು ಹುಡುಕಿಕೊಂಡು ದೇಶಾಂತರ ಹೋಗುತ್ತೀರಿ. ಒಬ್ಬ ವಿಶಿಷ್ಟ ವ್ಯಕ್ತಿ ನಿಮ್ಮ ಸಮೀಪವೇ ಇದ್ದಾರೆ. ಸಣ್ಣಪ್ಪ ಅಂತ. ಲಿಬಿಯಾದಲ್ಲಿದ್ದು ಬಂದವರು. ಅರಬ್ಬಿ ಮಾತಾಡುತ್ತಾರೆ. ನೀವೊಮ್ಮೆ ಭೇಟಿಯಾಗಬೇಕು’ ಎಂದರು. `ತಡವೇಕೆ? ನಡೀರಿ ಹೋಗೋಣ’ ಎಂದು ಇಬ್ಬರೂ ಸಣ್ಣಪ್ಪನವರ ತೋಟಕ್ಕೆ ಹೋದೆವು. ಊರ ನಡುವಿರುವ ಪಿತ್ರಾರ್ಜಿತ ಜಮೀನಿನಲ್ಲಿ ಸಣ್ಣಪ್ಪನವರು  ಕಾಯಿಪಲ್ಲೆ ಬೆಳೆದಿದ್ದರು. ಅವರಲ್ಲೊಂದು  ಜಂಬೂನೇರಳೆಯ ಗಿಡವಿತ್ತು.  ಅವರು  ದ್ರಾಕ್ಷಿಯಂತಹ ನೇರಳೆಯ ಗೊಂಚಲನ್ನು ಕಿತ್ತು ಕೊಟ್ಟರು. ಅದನ್ನು ತಿನ್ನುತ್ತ ಅವರ ಜತೆ ಹರಟೆ ಹೊಡೆಯುತ್ತ, ಆಲ್ಬಂನಲ್ಲಿದ್ದ ಚಿತ್ರಗಳನ್ನು ನೋಡಿದೆವು. 

    ಹೊಸಪೇಟೆಯವರಾದ ಸಣ್ಣಪ್ಪನವರು ವರ್ಷಗಳ ಹಿಂದೆ ಕೆಲಸ ಹುಡುಕಿ  ಮುಂಬೈಗೆ ವಲಸೆ ಹೋದವರು. ಅಲ್ಲಿಂದ ಆಫ್ರಿಕಾದ ಸಹರಾ ಮರುಭೂಮಿಯ ದೇಶವಾದ ಲಿಬಿಯಾಕ್ಕೆ ದಾಟಿಕೊಂಡವರು. ಲಿಬಿಯಾದ ತೈಲನಿಕ್ಷೇಪ ತಾಣಗಳಲ್ಲಿ ಕೆಲಸ ಮಾಡುತ್ತಿದ್ದ  ಇಂಜಿನಿಯರುಗಳ ತಂಡದಲ್ಲಿ ಟ್ರಕ್ ಡ್ರೈವರಾಗಿದ್ದವರು. ಅವರು ನಮ್ಮೊಟ್ಟಿಗೆ ಹೇಳಿದ ಕಥೆಗಳಲ್ಲಿ ನಾಲ್ಕು ಮುಖ್ಯ ಸಂಗತಿಗಳಿದ್ದವು.  1. ಸಹರಾದ ಮರಳುಗಾಳಿನ ಭೀಕರತೆ. 2. ಗಡಾಫಿಯ ಜನಪ್ರಿಯತೆ. 3. ಲಿಬಿಯನ್ ಮಹಿಳೆಯರ ಸಾರ್ವಜನಿಕ ಭಾಗವಹಿಸುವಿಕೆ. ಅದರಲ್ಲೂ ಅವರು ಮಿಲಿಟರಿ ತರಬೇತಿ ಪಡೆದು, ಗಡಾಫಿಯ ಕಮಾಂಡೊಗಳಾಗಿರುವುದು. 4. ಅಮೆರಿಕವು  ಸುಡಾನಿನ ಎಣ್ಣೆಯ ದರೋಡೆಗಾಗಿ ಗಡಾಫಿಯನ್ನು ಫಿತೂರಿಯಿಂದ ಕೊಂದಿದ್ದು. ಸಣ್ಣಪ್ಪನವರಲ್ಲಿ ಗಡಾಫಿಯ ಬಗ್ಗೆ ಅಭಿಮಾನ ತುಂಬಿಕೊಂಡಿತ್ತು. ಅವರಿಗೆ ಗಡಾಫಿಯನ್ನು ನೋಡುವ ಆಸೆಯಿತ್ತಂತೆ. ಆತ ಒಮ್ಮೆ ಎಣ್ಣೆಹೊಲಗಳ ಪರಿಶೀಲನೆಗೆ ಬಂದಾಗ ನೋಡಲು ಬಯಸಿದರಂತೆ. ಆಗ ಅವರ ಸಹೋದ್ಯೋಗಿಗಳು `ನೀವು ವಿದೇಶದವರು. ಸೆಕ್ಯುರಿಟಿಯವರು ತಡೆಯುತ್ತಾರೆ’ ಎಂದರಂತೆ. `ಅದ್ಯಾಕೆ ತಡೆಯುತ್ತಾರೆ? ನಾನವರ ಅಭಿಮಾನಿ’ ಎಂದು ಅರಬರ ಡ್ರೆಸ್ ಹಾಕಿಕೊಂಡು ಹೋಗಿ ನಿಂತು ನೋಡಿದರಂತೆ. ಇದಾದ ಬಳಿಕ ಲಿಬಿಯಾದ ಕಥೆ ಕೇಳಲು ಕೊವಿಡ್ ಗಲಾಟೆಯಲ್ಲಿ ನನಗೆ ಸಣ್ಣಪ್ಪನವರ ತೋಟಕ್ಕೆ ಸಾಧ್ಯವಾಗಲಿಲ್ಲ. 
    ಇದಾಗಿ ಮೂರು ವರ್ಷದ ಬಳಿಕ, ನಮ್ಮ ಜಿಲ್ಲೆಯವರಾದ ಉದಯ್ ಇಟಗಿಯವರು `ಲಿಬಿಯಾ ಡೈರಿ’ ಪುಸ್ತಕ ಕಳಿಸಿಕೊಟ್ಟರು. ಅದನ್ನು ಓದುವಾಗ  ಕಾರ್ಮಿಕ ಸಣ್ಣಪ್ಪನವರು ಹೇಳಿದ್ದನ್ನೇ ಉದಯ್ ಒಬ್ಬ ಪ್ರಜ್ಞಾವಂತ ಲೇಖಕನಾಗಿ ಬರೆದಿದ್ದಾರೆ ಅನಿಸಿತು. ಉದಯ್ ಲಿಬಿಯಾದಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿದ್ದವರು. ಸಣ್ಣಪ್ಪನವರ ಮಾತುಕತೆ ಕೇಳಿದ ಮತ್ತು ಉದಯ್ ಪುಸ್ತಕ ಓದಿದ ತರುವಾಯ, ಆಫ್ರಿಕಾ ಚೀನಾ ಮತ್ತು ಮಧ್ಯ ಏಶಿಯಾದ `ಮುಸ್ಲಿಂ’ ದೇಶಗಳನ್ನು ಒಳಗೊಂಡು ವಿಶ್ವವನ್ನು ಕುರಿತಂತೆ ನಮ್ಮ `ಜ್ಞಾನ’ದ ಮೂಲಗಳು ಯಾವುವು; ಅದು ನಮಗೆ ಯಾರಿಂದ ಯಾವಾಗ ಯಾಕಾಗಿ ಬಂದಿತು ಎಂಬ ಪ್ರಶ್ನೆ ಹುಟ್ಟಿತು.  ಜಗತ್ತಿನ ಬೇರೆಬೇರೆ ದೇಶಗಳ ಬಗ್ಗೆ ಭಾರತೀಯರಿಗೆ ಮೂರು ಮೂಲಗಳಿಂದ ತಿಳುವಳಿಕೆ ಬಂದಿದೆ. 1. ಆಧುನಿಕ ಪೂರ್ವ ಕಾಲದಲ್ಲಿ ಈ ದೇಶಗಳಿಂದ ಬಂದ ಸೈನಿಕರು ರಾಜರು ವ್ಯಾಪಾರಿಗಳು ಹಾಗೂ ಸಂತರಿಂದ. 2. ಪ್ರವಾಸಕ್ಕೆಂದೊ ಉದ್ಯೋಗಕ್ಕಾಗಿಯೊ ವಿದೇಶಗಳಿಗೆ ಹೋಗಿಬಂದವರು ಬರೆದ ಕಥನಗಳಿಂದ. 3. ಯೂರೋಪು ಇಲ್ಲವೇ ಅಮೆರಿಕಗಳ (ಹಿಂದೆ ವಸಾಹತುಶಾಹಿ ಈಗ ಸಾಮ್ರಾಜ್ಯಶಾಹಿ) ಹಿತಾಸಕ್ತಿಯ ಲೇಖಕರು ಮತ್ತು ಮಾಧ್ಯಮಗಳಿಂದ. ಇವುಗಳಲ್ಲಿ, ಸಮಸ್ಯೆ ಇರುವುದು ಮೂರನೆಯ ಮೂಲದಲ್ಲಿ.  ಕಾರಣ, ಇದು ಜಗತ್ತಿನ ಬಗ್ಗೆ ತನ್ನ ಧಾರ್ಮಿಕ ಪೂರ್ವಗ್ರಹ, ಜನಾಂಗೀಯ ದ್ವೇಷ ಮತ್ತು ಬಂಡವಾಳಶಾಹಿ ಹಿತಾಸಕ್ತಿಗಳ ಸಮೇತ ಮಾಹಿತಿ ಒದಗಿಸುತ್ತದೆ. ಬೇರೆಬೇರೆ ದೇಶಗಳ ನೈಸರ್ಗಿಕ ಸಂಪತ್ತನ್ನು ಕಬಳಿಸುವ, ಅವನ್ನು ತಮ್ಮ ಕಂಪನಿ ಸ್ಥಾಪಿಸುವ ಮತ್ತು ಸರಕು ಸುರಿವ ಮಾರುಕಟ್ಟೆಯಾಗಿಸುವ ಹಾಗೂ ಅಲ್ಲಿನ ಮಾನವ ಸಂಪನ್ಮೂಲವನ್ನು ಅಗ್ಗದ ಸಂಬಳದಲ್ಲಿ ದುಡಿಸಿಕೊಳ್ಳುವ ಸ್ವಹಿತಾಸಕ್ತಿಗಳಿಂದ  ಜಗತ್ತನ್ನು ವ್ಯಾಖ್ಯಾನಿಸುತ್ತ `ಜ್ಞಾನ’ವನ್ನು ಸೃಷ್ಟಿಸುತ್ತದೆ. ತಮಗೆ ಪ್ರತಿಕೂಲವಾಗಿರುವ ರಾಷ್ಟ್ರನಾಯಕರನ್ನು ಅಥವಾ ಪ್ರಭುತ್ವಗಳನ್ನು ಸರ್ವಾಧಿಕಾರಿ ಕ್ರೂರಿ ಎಂದು ದುರುಳೀಕರಿಸುತ್ತದೆ. ಈ ದುರುಳೀಕರಣವು  ಯುದ್ಧ ಮತ್ತು ಹಿಂಸೆಗಳಲ್ಲಿ ಪರ್ಯವಸಾನವಾಗುತ್ತದೆ. ಕರ್ನಲ್ ಗಡಾಫಿ ಮತ್ತು ಇರಾಕಿನ ಸದ್ದಾಂ ಹುಸೇನ್ ಕೊಲ್ಲಲ್ಪಟ್ಟಿದ್ದು ಇದೇ ಪ್ರಕ್ರಿಯೆಯಲ್ಲಿ. ಕ್ಯೂಬಾದ ಫಿಡೆಲ್ ಕಾಸ್ಟ್ರೊ ಬಗ್ಗೆ ಕೂಡ ಇಂತಹುದೇ ದುರುಳೀಕರಣ ಮಾಡಲಾಗಿತ್ತು. ಭಾರತದ ಬಹುತೇಕ ಮಾಧ್ಯಮ ಮತ್ತು ಶೈಕ್ಷಣಿಕ ಪಠ್ಯಗಳು, ಇಂತಹ ವ್ಯಾಖ್ಯಾನಗಳನ್ನು ಪರಮಸತ್ಯವೆಂದು ನಮಗೆ  ದಾಟಿಸುತ್ತ ಬಂದಿವೆ. ಭಾರತವನ್ನು ಕೊಳಕುದೇಶವೆಂದು ಹೀಯಾಳಿಸಿದ ಟ್ರಂಪನನ್ನು ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರು ನಮ್ಮ  ಭಾಗ್ಯವಿಧಾತನೆಂದು ಬಿಂಬಿಸಿದ್ದಂತೂ ನಮ್ಮೆದುರಿಗೇ ಇದೆ.

    ಆದರೆ ಇಂತಹ ಪೂರ್ವಗ್ರಹೀತ ಸ್ಟಿರಿಯೊಟೈಪ್ ಚಿತ್ರಗಳನ್ನು ಮುರಿಯುವ ಯತ್ನಗಳೂ ನಡೆಯುತ್ತಿವೆ. ಇವು ಸಾಧ್ಯವಾಗಿರುವುದು, ಪಾಶ್ಚಿಮಾತ್ಯ ದೇಶಗಳಲ್ಲಿರುವ ಎಡ್ವರ್ಡ್ ಸೈಯದ್ ಅಥವಾ ನೋಮ್ ಚೋಂಸ್ಕಿಯವರಂತಹ ಬಂಡುಕೋರ ವಿದ್ವಾಂಸರಿಂದ. ಇಲ್ಲವೇ ಈ ದೇಶಗಳಲ್ಲಿ ಬದುಕಿ ಅನುಭವವನ್ನು ದಾಖಲಿಸಿರುವ ಸಣ್ಣಪ್ಪ ಅಥವಾ ಉದಯ್ ತರಹದವರಿಂದ.  ಈ ಹಿನ್ನೆಲೆಯಲ್ಲಿ ಕನಕರಾಜು ಮುಂತಾದ ಕನ್ನಡ ಲೇಖಕರು ಅವರು ಅರಬ್ ದೇಶಗಳ ಮೇಲೆ ಬರೆಯುತ್ತಿರುವ ಬರೆಹಗಳನ್ನೂ   ಸ್ಮರಿಸಬೇಕು.
     
    ಪ್ರಜ್ಞಾವಂತ ವ್ಯಕ್ತಿಯೊಬ್ಬ ದೇಶಗಳ ಮೇಲೆ ಹೇರಲಾಗಿರುವ ಪೂರ್ವಗ್ರಹಗಳ ಪರದೆಯನ್ನು ಒಡೆಯುವಂತೆ ಬರೆದಿರುವ ಉದಯ್ ಅವರ `ಲಿಬಿಯಾ ಡೈರಿ’ (2020)ಯ ವಿಶೇಷತೆಯೆಂದರೆ, ಇದು ಗಡಾಫಿಯ ಸರ್ವಾಧಿಕಾರಿತನವನ್ನು  ಮರೆಮಾಚುವುದಿಲ್ಲ; ಪಶ್ಚಿಮದ ದೇಶಗಳ ಆಕ್ರಮಣಕಾರಿ ಹುನ್ನಾರಗಳನ್ನು ತಪ್ಪಿಸಲು ಆತ ಶಿಕ್ಷಣ ವ್ಯವಸ್ಥೆಯಿಂದ ಇಂಗ್ಲೀಶನ್ನು ನಿಷೇಧಿಸಿದಂತಹ  ನಿರ್ಣಯವು ಹೇಗೆ ಪ್ರಮಾದವಾಗಿತ್ತು ಎಂಬುದನ್ನು ಅವರು  ಟೀಕಿಸುತ್ತಾರೆ.  ಆದರೆ ಆತ ಹೇಗೆ ಒಬ್ಬ ದೇಶಪ್ರೇಮಿಯಾಗಿ ನಾಡಿನ ಸಂಪತ್ತನ್ನು ಬಿಳಿಯ ದೇಶಗಳು ಲೂಟಿಮಾಡುವುದನ್ನು  ತಡೆದನು. ಪ್ರಜೆಗಳಿಗೆ ಹೇಗೆ ಸುಖ ಮತ್ತು ನೆಮ್ಮದಿಯಿಂದ ಇಟ್ಟಿದ್ದನು ಎಂಬ ಸತ್ಯವನ್ನು ಅಂಕಿಅಂಶಗಳಿಂದಲೂ ಸ್ವಾನುಭವದಿಂದಲೂ ಕೊಡುತ್ತಾ ಹೋಗುತ್ತಾರೆ. ಹೀಗಾಗಿ ಈ ಪುಸ್ತಕವು ಕೇವಲ ಗಡಾಫಿಯ ವ್ಯಕ್ತಿಚಿತ್ರಣವಾಗದೆ, ಅಮೆರಿಕಾದ ಆರ್ಥಿಕ ರಾಜಕೀಯ ಹಿತಾಸಕ್ತಿ ಮತ್ತು ಯುದ್ಧನಿತಿಗಳ ವಿಮರ್ಶೆಯೂ ಆಗಿದೆ:  (ಕೃತಿಯ ವಿವರಣಾತ್ಮಕ ಉಪಶೀರ್ಷಿಕೆ: `ಮೊಹಮದ್ ಗಡಾಫಿಯ ಹತ್ಯೆಯ ಹಿಂದಿನ ರಹಸ್ಯ’). 

    ಇಲ್ಲೇ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಬಳಿಕ ನೆಲ್ಸನ್ ಮಂಡೇಲಾ ಅವರು ಪ್ರಥಮ ಬಾರಿ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಅಮೆರಿಕಕ್ಕೆ ಹೋದಾಗ, ನಡೆದ ಪತ್ರಿಕಾಗೋಷ್ಠಿಯನ್ನು ಉಲ್ಲೇಖಿಸಬೇಕು. ಅವರಿಗೆ ಒಬ್ಬ ಅಮೆರಿಕನ್ ಕೇಳುತ್ತಾನೆ: ``ನೀವು ಜನಾಂಗವಾದದ ವಿರುದ್ಧ ಕಪ್ಪು ಜನರ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಆದರೆ ಮಾನವ ಹಕ್ಕುಗಳ ವಿಷಯದಲ್ಲಿ ಕೆಟ್ಟದಾಖಲೆ ಹೊಂದಿರುವವರ  ಅರಾಫತ್-ಗಡಾಫಿ-ಕಾಸ್ಟ್ರೊ ಮುಂತಾದವರ ಜತೆ ಸಖ್ಯ ಹೊಂದಿದ್ದೀರಿ. ಇದು ವೈರುಧ್ಯವಲ್ಲವೇ?". ಆಗ ಮಂಡೆಲಾ ಕೊಟ್ಟ ಉತ್ತರ: ``ಕೆಲವರು ತಮ್ಮ ಶತ್ರುಗಳು ಇಡೀ ಜಗತ್ತಿನ ಶತ್ರುಗಳಾಗಿದ್ದಾರೆಂದೂ ತಮ್ಮ ಮಿತ್ರರು ಎಲ್ಲರ ಮಿತ್ರರೂ ಆಗಬೇಕೆಂದು ಅಪೇಕ್ಷಿಸುತ್ತಾರೆ.  ಪ್ರತಿ ದೇಶಕ್ಕೂ ತನ್ನ ಸ್ನೇಹಿತರಾಷ್ಟ್ರಗಳನ್ನು ತನ್ನ ಹಿತಾಸಕ್ತಿಯ ಆಧಾರದಲ್ಲಿ ಆರಿಸಿಕೊಳ್ಳುವ ಹಕ್ಕಿದೆಯೆಂದು ಮರೆತುಬಿಡುತ್ತಾರೆ. ನಾವು ಬಿಳಿಯರ ವರ್ಣಭೇದನೀತಿ ಮತ್ತು ವಸಾಹತುಶಾಹಿ ಆಳ್ವಿಕೆಗಳ ವಿರುದ್ಧ ಹೋರಾಡುವಾಗ, ನೀವು ದುಷ್ಟರೆಂದು ಹೇಳುವ ದೇಶಗಳೆಲ್ಲ ನಮಗೆ ನೈತಿಕ ಬೆಂಬಲ ಕೊಟ್ಟಿದ್ದವು.’’

    ಸರಳವೂ  ಸ್ವಾರಸ್ಯಕರವೂ ಆದ ನಿರೂಪಣೆಯಿರುವ ಉದಯ್  ಕೃತಿಯಲ್ಲಿ, ಬರವಣಿಗೆಯ ಕಸುಬಿಗೆ ಸಂಬಂಧಪಟ್ಟಂತೆ, ಪುನರುಕ್ತಿ ಮುಂತಾದ ಸಣ್ಣಪುಟ್ಟ ದೋಷಗಳಿವೆ. ಆದರೆ ಜಗತ್ತಿನ ವಿದ್ಯಮಾನಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ನೋಡುವ ರಾಜಕೀಯ ಪ್ರಜ್ಞೆಯಿದೆ. ಇದು ಪ್ರವಾಸಕಥನವೂ ಅನುಭವ ನಿರೂಪಣೆಯೂ ಚರಿತ್ರೆಯ ಪುಸ್ತಕವೂ ಆಗಿದೆ.ಇದರಲ್ಲಿರುವ ಮರುಭೂಮಿಯ ಸಿಂಹವೆಂದು ಖ್ಯಾತಿವೆತ್ತಿದ್ದ ಉಮರ್ ಮುಖ್ತಿಯಾರ್ ಕುರಿತ ಅಧ್ಯಾಯವಂತೂ ಅಪೂರ್ವವಾಗಿದೆ. ದುಡಿಮೆಗೆಂದು ಹೊರಹೋದ ಭಾರತೀಯರು ಕುಟುಂಬವನ್ನು ಬಿಟ್ಟು ಪಡುವ ಪಾಡು ಮತ್ತು ಅವರ ಜೀವನದ ಅರ್ಥಗಳನ್ನು ಕೃತಿ ಆರ್ತವಾಗಿ ವಿಶ್ಲೇಷಿಸುತ್ತದೆ. ಭಾಷೆ ಧರ್ಮ ಸಂಸ್ಕೃತಿ ಚರಿತ್ರೆ ದೃಷ್ಟಿಯಿಂದ 'ಅನ್ಯ'ವೆನಿಸಿಕೊಂಡ ಯಾವುದೇ ದೇಶ-ಸಮಾಜವಿರಲಿ, ಮನುಷ್ಯರ ನೋವಿಗೆ ಮಿಡಿವ ಜೀವಗಳು ಎಲ್ಲೆಡೆ ಇರುತ್ತವೆ, ಅವೇ ನಿಜವಾದ ಮರುಭೂಮಿಯ ಓಯಸಿಸ್‍ಗಳು ಎಂಬುದನ್ನು ಕಾಣಿಸುತ್ತದೆ. ಈ ಕಾರಣದಿಂದ ಇದು ಲಿಬಿಯನ್ ಜನಜೀವನದ ಚಿತ್ರವೂ ಆಗಿದೆ. 

    ಭಾರತೀಯರಾದ ನಾವು ನಮ್ಮ ಆಸುಪಾಸು ವಾಸಿಸುತ್ತಿರುವ ಅನೇಕರ ಧರ್ಮ ಆಹಾರಪದ್ಧತಿ ಆಚರಣೆಗಳ ಬಗ್ಗೆ ತಿಳುವಳಿಕೆಯನ್ನು ಬಂಡವಾಳಿಗರಿಗೂ ಮತೀಯವಾದಕ್ಕೂ ತೆತ್ತುಕೊಂಡ ಮಾಧ್ಯಮಗಳಿಂದ ಪಡೆದುಕೊಳ್ಳುವ ದುರವಸ್ಥೆಗೆ ಇಳಿದಿದ್ದೇವೆ. ಇದು ಶಿಕ್ಷಣದಲ್ಲಿ ಐರೋಪ್ಯ ಮತ್ತು ಅಮೆರಿಕನ್ ದೃಷ್ಟಿಕೋನದಿಂದ ಜಗತ್ತನ್ನು ಅರ್ಥಮಾಡಿಕೊಳ್ಳುವ ಪದ್ಧತಿಯ  ದಾರುಣ  ವಿಸ್ತರಣೆಯೇ. ಇಂತಹ ಹೊತ್ತಲ್ಲಿ ಉದಯ್ ಅವರ ಅನುಭವಕೇಂದ್ರಿತ ಕೃತಿ ಕಣ್ತೆರೆಸುವ ಮತ್ತು ಪೂರ್ವಗ್ರಹ ತೊಡೆವ ಕೆಲಸ ಮಾಡುತ್ತದೆ. ಇದನ್ನು ಓದಿ ಮುಗಿಸಿದಾಗ ಉದಯ್ ಅವರಂತೆ ಸಣ್ಣಪ್ಪನವರೂ ಪುಸ್ತಕ ಬರೆಯುವಂತಿದ್ದರೆ ಹೇಗಿರುತ್ತಿತ್ತು ಎಂಬ ಭಾವವೂ ಒಮ್ಮೆ ಮೂಡಿ ಹೋಗುತ್ತದೆ.
    -ರಹಮತ್ ತರೀಕೆರೆ 

    ನನ್ನ ಏಕವ್ಯಕ್ತಿ ನಾಟಕ 'ಶೇಕ್ಸ್ ಪಿಯರನ ಶ್ರೀಮತಿ' ಕುರಿತು ಮಮತಾ ಅರಸೀಕೆರೆಯವರ ವಿಮರ್ಶೆ

  • ಸೋಮವಾರ, ಅಕ್ಟೋಬರ್ 25, 2021
  • ಬಿಸಿಲ ಹನಿ


  • ಇತ್ತೀಚಿಗಷ್ಟೆ ಬಿಡುಗಡೆಗೊಂಡ ನನ್ನ ಏಕವ್ಯಕ್ತಿ ನಾಟಕ 'ಶೇಕ್ಸ್ ಪಿಯರನ ಶ್ರೀಮತಿ' ಕುರಿತು ಮಮತಾ ಅರಸೀಕೆರೆ ಅವರು ತುಂಬಾ ಚೆನ್ನಾಗಿ ದಾಖಲಿಸಿದ್ದಾರೆ. ಅವರ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಆಭಾರಿ. ತುಂಬಾ ಥ್ಯಾಂಕ್ಸ್ ಮೇಡಂ.

    http://epaper.samyukthakarnataka.com/m5/3267254/Samyukta-Karnataka-Bengaluru-ಸಂಯುಕ್ತ-ಕರ್ನಾಟಕ-ಬೆಂಗಳೂರು/October-24-2021-Bengaluru#page/9/1


    K Nallatambi's poem in my English translation

  • ಗುರುವಾರ, ಅಕ್ಟೋಬರ್ 21, 2021
  • ಬಿಸಿಲ ಹನಿ
  •  

    ಒಂದನ್ನೊಂದು ಕಾಲದಲ್ಲಿ

     ಮಗಳು ಹಕ್ಕಿಯ ರೆಕ್ಕೆಯ

    ಚಿತ್ರ ಬಿಡಿಸುತ್ತಿದ್ದಳು

    ಗಾಬರಿಯಾದ ಅಪ್ಪ

    ಕಿಟಕಿಯ ಬಾಗಿಲ ಮುಚ್ಚಿದ

     

    ಮತ್ತೊಬ್ಬ ಅಪ್ಪ

    ರಬ್ಬರ್ ತಂದು ಅಳಿಸಿದ

    ಇನ್ನೊಬ್ಬ ಅಪ್ಪ

    ಪಕ್ಕದಲ್ಲೊಂದು

    ಪಂಜರ ಬರೆ ಎಂದ

     

    ಮಗುದೊಬ್ಬ ಅಪ್ಪನೋ

    ಕತ್ತರಿ ತಂದು ಕಾಗದದಲ್ಲಿದ್ದ

    ರೆಕ್ಕೆಯ ತುಂಡರಿಸಿದ

     

    ಈಗಿನ ಅಪ್ಪಂದಿರು ಹಾಗಲ್ಲ

    ಮಗಳ ಪಕ್ಕ ಕುಳಿತು

    ರೆಕ್ಕೆಗಳಿಗೆ ಬಣ್ಣ ಬಳಿದು

    ಹಾರುವುದ ಕಲಿಸುತ್ತಾರೆ

     

     

     

    Once upon a time

    The daughter was drawing

    a picture of a bird’s wing
    horror-struck dad
    just came running and closed the window
    Another dad
    just brought a rubber and erased it
    another dad
    asked her to draw a cage
    just beside it
    Another dad
    brought a pair of scissors
    and cut the wings
    that were already drawn
    on the paper

    Today’s fathers are not like before
    sitting next to the daughter
    they will only teach how to colour the wings
    and also how to fly in the air
    From Kannada: K. Nallatambi
    To English: Uday Itagi

    ಶೇಕ್ಸಪಿಯರನ ಶ್ರೀಮತಿ ಪುಸ್ತಕ ಬಿಡುಗಡೆ ಸಮಾರಂಭ

  • ಬಿಸಿಲ ಹನಿ
  •  


    ನನ್ನ ಲಿಬಿಯಾ ಡೈರಿ ಕುರಿತು ಪ್ರೊ. ರಹಮತ್ ತರಿಕೆರೆಯವರ ಅಭಿಪ್ರಾಯ

  • ಬುಧವಾರ, ಅಕ್ಟೋಬರ್ 20, 2021
  • ಬಿಸಿಲ ಹನಿ
  • ಮತ್ತೊಂದು ಸಂತೋಷದ ವಿಷಯ. ಈ ಹಿಂದೆ ಪ್ರಕಟವಾಗಿದ್ದ ನನ್ನ "ಲಿಬಿಯ ಡೈರಿ' ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊಫೆಸರ್ ರಹಮತ್ ತರೀಕೆರೆಯವರು ಈ ವಾರದ "ನ್ಯಾಯ ಪಥ"ದಲ್ಲಿ ಬರೆದಿದ್ದಾರೆ. ಥ್ಯಾಂಕ್ಸ್ ಟು ರಹಮತ್ ಸರ್ ಮತ್ತು ನ್ಯಾಯ ಪಥದ ಸಂಪಾದಕೀಯ ಬಳಗಕ್ಕೆ....ರಹಮತ್ ಸರ್ ನಿಮ್ಮ ಪ್ರೀತಿ ಮತ್ತು ವಿಶ್ವಾಸ ಇದೇ ರೀತಿ ಮುಂದುವರಿಯಲಿ. 


    Attachments area

    Awareness

  • ಭಾನುವಾರ, ಅಕ್ಟೋಬರ್ 03, 2021
  • ಬಿಸಿಲ ಹನಿ
  •  

    ಅರಿವು

     

    ಅರಿವೆಂಬುದು ಸಿರಿಯಲ್ಲ ಗುರುವು

    ಬೆಳಕೆಂಬುದು ಸ್ಥಿರವಲ್ಲ ಹರಿವು

     

    ಸಂತೆಯ ಸರಕಲ್ಲ

    ಅವರಿವರ ಸೊತ್ತಲ್ಲ

    ಅರಿವೆಂಬುದು ಬಯಲ ಬುತ್ತಿ

    ಚಿತ್ತ ಹಸಿದವರ ತುತ್ತು ಕಾಣ

     

    ಹರಾಜಿಗಿಟ್ಟ ಕಿರೀಟವಲ್ಲ

    ಧರ್ಮದ ನಶೆಯಲ್ಲ

    ಅರಿವೆಂಬುದು ಸಮತೆಯ ಹೂ   

    ನಿಸರ್ಗ ಸಹಜ ವಿವೇಕ ಕಾಣ

     

    ಲಿಂಗದ ಹಂಗಿಲ್ಲ

    ಗ್ರಂಥಗಳಲ್ಲಿ ಅವಿತಿಲ್ಲ

    ಅರಿವೆಂಬುದು ಬ್ರಹ್ಮಾಂಡ ಬಯಲು       ಒಡಲಬೂದಿಮುಚ್ಚಿದ ಕೆಂಡ ಕಾಣ

     

    ಒಲಿಸಿಕೊಳ್ಳುವ ಸ್ವರವಲ್ಲ

    ನುಡಿಯ ಸೊಬಗಲ್ಲ

    ಅರಿವೆಂಬುದು ಅಂತರಾಳದ ಸಿರಿ   

    ಸುಮ್ಮನಿರುವ ಸುಮ್ಮಾನ ಕಾಣ 

     

    ತುಂಬಿಕೊಳ್ಳುವ ಮಾಹಿತಿಯಲ್ಲ

    ಗುರು ತೋರುವ ದಾರಿಯಲ್ಲ

    ಅರಿವೆಂಬುದು ನೆಲದ ಮರೆಯ ನಿಧಾನ

    ನಾವೇ ಹೀರಿಕೊಳ್ಳುವ ದಾಹ ಕಾಣ

     

    ಕೂಡಿಡುವ ಥೈಲಿಯಲ್ಲ

    ಅಕ್ಷರದ ಅಹಂಕಾರವಲ್ಲ

    ಅರಿವೆಂಬುದು ನೀರ ದೀವಿಗೆ

    ತನ್ನ ತಾ ಅರಿವ ಆತ್ಮಗನ್ನಡಿ ಕಾಣ

     

    ಕಣ್ಣಿಗೆ ನಿಲುಕುವ ಸತ್ಯವಲ್ಲ

    ಧ್ಯಾನಕ್ಕೆ ದಕ್ಕುವ ಮೌನವಲ್ಲ

    ಅರಿವೆಂಬುದು ಅವಿನಾಶಿ

    ನಿಜಕೆ ಬೆತ್ತಲಾದವರ ಅರಿವೆ ಕಾಣ

     

    ಕರ್ಮದ ಫಲವಲ್ಲ

    ದೇಶ ಕಾಲದ ಹಂಗಿಲ್ಲ

    ಅರಿವೆಂಬುದು ಕ್ಷಣಭಂಗುರ

    ಸಾವು ಚುಂಬಿಸಿದವರ ತುಟಿಮಿಂಚು ಕಾಣ

     

     

     - ಹಂದಲಗೆರೆ ಗಿರೀಶ್

     

    Awareness

     

    Awareness is not wealth but a Guru

    Light is not constant but a flow

     

    Awareness is not the luggage kept in the fair

    Nor the property that belongs to somebody

    It is an ailment found in an open place

    And it is a gulp of hungry souls too

     

    Neither awareness is an auctioned crown

    Nor the morphine of religion

    Knowing is the flower of equality

    And a natural innate wisdom it is

     

    Neither awareness has gender obligation

    Nor hidden in the scriptures

    Look, awareness is an open universe

    And like stales covered with ashes inside the stomach

     

    Neither a loving tone it is

    Nor a beautiful melody

    Awareness is the richness of innermost

    And it is a silent happiness

     

    Neither it is information that can be infused

    Nor a way it is shown by a guru

    Awareness is like a hidden wealth in the ground

    And it’s a thirst that we have to quench ourselves 

     

    Neither it is a money bag

    Nor the pride of letters

    Awareness is a lamp of water

    And it is knowing about oneself in the mirror of one’s self-conscious spirit

     

    Neither an eye-catching truth it is

    Nor a meditating silence

    Instead, awareness is immortal

    And those who have really turned nude

    None of their attire can be seen

     

    Neither is the yield of Karma

    Nor the obligation of time

    Awareness is volatile

    And look at the glowing lips of those

    Who has already kissed the death

     

    From Kannada: Handalagere Girish

    To English: Uday Itagi

    ನನ್ನ ಹೊಸ ಪುಸ್ತಕ “ಶೇಕ್ಸಪಿಯರನ ಶ್ರೀಮತಿ”ಗಾಗಿ ಪ್ರೀ ಆರ್ಡರ್ ಮಾಡಬಹುದು...

  • ಭಾನುವಾರ, ಮೇ 09, 2021
  • ಬಿಸಿಲ ಹನಿ
  •  




    ಬಹಳಷ್ಟು ಜನ ನನ್ನ ಹೊಸ ಪುಸ್ತಕ “ಶೇಕ್ಸಪಿಯರನ ಶ್ರೀಮತಿ” ಯ ಕುರಿತು ಕುತೂಹಲ ವ್ಯಕ್ತಪಡಿಸಿದ್ದು ಯಾವಾಗ ಬರುತ್ತದೆ ಎಂದು ಕೇಳಿದ್ದರು. ಇದೀಗ ಆ ಕಾರ್ಯ ಕೈಗೂಡಿದ್ದು ಪುಸ್ತಕವು ಅಚ್ಚಿನ ಮನೆಯಿಂದ ಶೀಘ್ರದಲ್ಲಿಯೇ ಹೊರಬರಲಿದೆ. ಪುಸ್ತಕ ಬೇಕಾದವರು ಈ ಕೆಳಗೆ ಕೊಟ್ಟಿರುವ QR code ನ್ನು ಸ್ಕ್ಯಾನ್ ಮಾಡಿ ಪ್ರೀ ಆರ್ಡರ್ ಮಾಡಬಹುದು. ಕೊರೊನಾದ ಕಾವು ತಗ್ಗಿದ ತಕ್ಷಣ ಈ ಪುಸ್ತಕ ಬಿಡುಗಡೆಯಾಗಲಿದೆ.     


    You can pre-order my new book "Shakespearena Shrimati" ...

    A lot of people have been curious about my new book "Shakespearena Shrimati" and asked when it would be released. Now that work is done and the book will be out of printing house soon. Those who want the book can scan the QR code (Name:  T.M. Shrikanth Publisher’s Name) above and pre-order it. The book will be released as soon as the corona incubation subsides.

    *Item Name*: ಶೇಕ್ಸಪಿಯರನ ಶ್ರೀಮತಿ

    *Price*: ₹60

    Place your order by clicking this link:
    https://mydukaan.io/siddhartha70/products/sheekspiyr-nshriimti.

    Feel free to call us on +91 9916015005 if you need any help with ordering online.

    Thank you
    Siddhartha Enterprises

     

    Akshata Krishnamurthy's Poems in my English Translation

  • ಗುರುವಾರ, ಏಪ್ರಿಲ್ 22, 2021
  • ಬಿಸಿಲ ಹನಿ
  •  

    ಕಾಲದ ಬಣ್ಣ

    ನಿನ್ನ ಕಿಟಕಿಗೆ ಇನ್ನು

    ನಿರೀಕ್ಷೆಗಳಿಲ್ಲ

    ಅವನು ನೆನಪುಗಳನ್ನು

    ಸಾಯಿಸಿಬಿಟ್ಟಿದ್ದಾನೆ

     

    ನಿನ್ನ ಭೂಮಿಗೆ

    ವಸಂತನಿಲ್ಲ

    ಋತುಮತಿಯಾದವಳ ಕತ್ತಿಗೆ

    ನಿಷೇಧದ ಫಲಕ ತೂಗಿದ್ದಾನೆ

     

    ನಿನ್ನ ನಕ್ಷತ್ರಲೋಕ

    ಕೈ ಸುಟ್ಟುಕೊಂಡಿದೆ

    ಅಹಮ್ಮಿನ ಶಾಖಕ್ಕೆ

    ಕೆಂಡ ಉದುರಿಸುತ್ತಿದ್ದಾನೆ

     

    ನಿನ್ನ ಬಯಲಿನಲ್ಲಿ

    ಉಸಿರಾಟಕ್ಕೂ ದಮ್ಮು ಅಂಟಿದೆ

    ಅವನು ಕಪ್ಪು ಹೊಗೆಯಲ್ಲಿ

    ಬದುಕುವುದು ಕಲಿತಿದ್ದಾನೆ

     

    ನಿನ್ನ ಕಾನನದಲ್ಲಿ

    ಮರಗಳಿಲ್ಲ

    ಅವನು ಕ್ರೌರ್ಯ

    ಬೆಳೆಯಲು ಕರಗಿಸುತ್ತಿದ್ದಾನೆ

     

    ಒಟ್ಟಾರೆ ಬರೆದಿಟ್ಟುಕೊ ಬಿಡು

     

    ನಿನ್ನ ಇಲ್ಲಗಳೆಲ್ಲ

    ಮುಂದೊಂದು ದಿನ

    ಇದೆಯಾಗುತ್ತವೆ

     

    ಧೂಳಾಗಿಸಿದರು ನಿಟ್ಟುಸಿರಿಗೂ

    ಉಚ್ಚರಿಸುವ ಸಣ್ಣ ಬಡಿತವಿದೆ.

    ಕಾಲಕ್ಕೆ ಎಲ್ಲ ಬದಲಿಸುವ ತಾಕತ್ತಿದೆ

     

     

     

     

     

     

     

     

     

     

     

     

     

     

     

     

     

     

     

     

     

     

     

     

     

    ನಾನು ದೀಪ ಹಚ್ಚಬೇಕೆಂದಿದ್ದೆ...

     

    ಊರ ಹಾದಿಯಲ್ಲಿ ಸಿಕ್ಕವರಿಗೆ

    ಅಣ್ಣ ಅಕ್ಕ ಎಂದು ಮಾತಾಡಿಸಿದೆ

    `ಯಾರು?' ಎಂದರವರು

    ಅಪರಿಚಿತಳಾಗಿಬಿಟ್ಟೆ.

     

    ಅಂಕ ಹೆಚ್ಚಿದ್ದಕ್ಕೆ ವಿದ್ಯಾರ್ಥಿ

    ವೇತನ ಎಂದೆ

    ಯಾರ ತಾಕೀತು ಎಂದರು

    ಪ್ರಶ್ನೆಯಾಗಿಬಿಟ್ಟೆ

     

    ನನ್ನನ್ನು ಮನಸಾರೆ

    ಪ್ರೀತಿಸುತ್ತೀಯಾ ಕೇಳಿದೆ

    ಕೊಟ್ಟು ತಗೊಳ್ಳುವುದು ತಾನೇ ಎಂದರು

    ವ್ಯವಹಾರವಾಗಿಬಿಟ್ಟೆ

     

    ವಯಸ್ಸಾಗುತ್ತ ಬಂತು

    ಅಡ್ಡಾಡಲು ಕಷ್ಟ ಎಂದೆ

    ವೃದ್ದಾಶ್ರಮದ ದಾರಿ ನೇರ ಎಂದರು

    ಅನಾಥಳಾಗಿಬಿಟ್ಟೆ

     

    ನಾನು ಅಂಥವಳು

    ಇಂಥವಳು ನಾನು ಎಂದೆ

    ಹೇಳಿದಷ್ಟು ಮಾಡು ಎಂದರು

    ಕೈಗೊಂಬೆಯಾಗಿಬಿಟ್ಟೆ

     

    ದೀಪ ಹಚ್ಚುತ್ತೇನೆ

    ಎಲ್ಲರೆದೆಯಲ್ಲಿ ಎಂದೆ

    ಸುದ್ದಿ ಮಾಡು ಎಲ್ಲ

    ಗೊತ್ತಾಗಲಿ ಎಂದರು

    ಪುಕ್ಕಟ್ಟಿನ ಜಾಹೀರಾತಾಗಿಬಿಟ್ಟೆ

     

    ಅಸ್ಮಿತೆ ಹೋರಾಟ

    ಸೌಹಾರ್ದತೆಗಾಗಿ ಎಲ್ಲ ಎಂದೆ

    ಕೈಯಲ್ಲಿ ಬಂದೂಕು ಹಿಡಿದು

    ನಾವು ಜೊತೆಗಿದ್ದೇವೆ ಎಂದರು

    ನೇರ ವಧಾಸ್ಥಾನ ತಲುಪಿಬಿಟ್ಟೆ.

     

     ಅಕ್ಷತಾ ಕೃಷ್ಣಮೂರ್ತಿ

     

     

     

     

     

     

     

     

     

     

     

     

     

     

    ಹೀಗೆಂದು ಅನಿಸುತ್ತದೆ

     

    ಈಗೀಗ ಅನಿಸುತ್ತದೆ

    ಇತಿಹಾಸ

    ಮರುಕಳಿಸಿ ಬರಬಾರದೇ ಇನ್ನೊಮ್ಮೆ

     

    ಹಿಂದೊಮ್ಮೆ ನಿನಗಾಗಿಯೇ

    ಅಲಂಕರಿಸಿಕೊಳ್ಳುತ್ತಿದ್ದೆ

    ಮುಖಕೊಂದಿಷ್ಟು ಕ್ರೀಮು ಕಾಡಿಗೆ

    ಆಗಾಗ ಫೇಶಿಯಲ್ ವ್ಯಾಕ್ಸು

    `ಚಂದ ಕಾಣ್ತಿ' ಅಂದಾಗ

    ರಂಗೇರುವ ತುಟಿ

     

    ಸುರಸುಂದರಿ ಅವನ ಕಣ್ಣಲ್ಲಿ

    ಸೂರೆ ಎಲ್ಲ ಸುಖ

    ಹಗಲು ಇರುಳಲ್ಲಿ.

     

    ಬರಬರುತ್ತ ಅಜಾನು ಬಾಹು

    ಬಂಧನ

    ಎನ್ನುತ್ತ ಬರುವುದನ್ನೆ ನಿಲ್ಲಿಸಿಬಿಟ್ಟ

    ಕೆಲಸ ಒತ್ತಡ

    ಪುರುಸೊತ್ತು ಇಲ್ಲ

    ಕೊನೆಗೆ

    ನೆವ ದೂರು ಸಂಶಯ ರಾಶಿ ಮಾರಾಶಿ

    ಜಗಳ

    ಸಮಜಾಯಿಸಿ ಕೊಟ್ಟಷ್ಟು ಆರೋಪ

    ಸುಳ್ಳಿ ಕಳ್ಳಿ ಸೋತ ಮಳ್ಳಿ

     

    ಹೊತ್ತವಳು ತಪ್ಪು

    ಕಲೆಯ ಮೈ ತುಂಬ ಕರಿ

    ರೋಮವೆದ್ದು

     

    ಈಗ ವ್ಯಾಕ್ಸ ಇಲ್ಲ ಫೇಶಿಯಲ್ ಇಲ್ಲ

    ನಿಸ್ತೇಜ ಮುಖಕ್ಕೀಗ

    ಮುತ್ತು-ಮಾತು ಮರೆತ

    ಸೀಳು ತುಟಿ

    ಜೀವ ರೂಪಾಂತರಗೊಳ್ಳುತ್ತಿದೆ

    ನೀನಿಲ್ಲದೆ.

     

    ಅದಕ್ಕೆ ಹೇಳಿದ್ದು

    ಇತಿಹಾಸ ಮರಳು

    ಮತ್ತೆ ಮರಳುಮಾಡು.

     

    ಒಮ್ಮೆ ಮರುಳಾಗಲೇಬೇಕು

     

     

    ಅಕ್ಷತಾ ಕೃಷ್ಣಮೂರ್ತಿ

     

     

     

    The colour of time

     

    Thy window

    has no more expectations

    for he has already destroyed

    all your memories

     

    There is no spring at all

    in  your land

    for he has already hung

    the board of barren

    to the neck of a blossomed girl

     

    Thy constellation

    has already got its hand burnt

    for he is throwing the stales of his ego at you

     

    Even on  your plains

    you find it difficult to breathe in   

    as if you have an asthama

    but he has already learnt the art of

    living with black smoke

     

    No trees at all

    in your jungle

    for he is clearing it off

    to nourish his cruelty

     

    Write down overall

     

    All your ‘no’s

    will become ‘yes’

     in the upcoming days

     

    Even the dusted sigh too

    can spell something

    Then why not you?

    No worry!

    Time has got the guds to change everything  anyway

    From Kannada: Akshata Krishnamurthy

    To English: Uday Itagi

     

     

     

     

     

     

     

     

     

     

     

     

     

     

     

     

     

     

    I wanted to light a lamp ...

     

    Whomever I met on the way

    I addressed them 

    As brothers and sisters

    But they asked me

    “Who are you?”

    And I became a stranger.

     

    I scored good marks

    And got the scholarship

    They asked me

    “Whose influence you used?”

    Then I became a question

     

    “Do you love me wholeheartedly?”

    I asked them

    “Oh, is it just give and take policy?”

    They murmured

    Then I became a deal

     

    I said

    “I am getting aged

    And unable to walk around”

    They said

    “The way to old-age home is straight”

    Then I became an orphan

     

    I projected myself as

    I am this and that

    But they ordered me

     “Do as we say!”

    Thern I became a puppet

     

    I said

    “I will light the lamp

    In everybody’s heart”

    They said

    “Make it a news”

    Then I became a free ad

     

    I said

    “Fighting for fraternity

    Is for cordiality sake” 

    Holding a gun in their hands

    They said

    “We are there with you for the cause”

    Then I straightway reached the point of scaffold

    From Kannada: Akshata Krishnamurthy

    To English: Uday Itagi

     

     

     

     

    I feel like this…

    These days

    I feel that

    History should  repeat and

    Gain back its glory

    Just for the sake of you only

     

    I make up for myself

    With a liitle cream, an eye liner, lipstick and so on

    I also use face packs every now and then

    Whenever you compliment me saying

    `You look beautiful’

    My lips will turn red

     

     

    I looked extremely beautiful to his eyes

    So, day and night

    He enjoyed my beauty to its maximum level

     

    Day by day I became hefty

    And he stopped coming to me saying

    ‘My embrace will be like a detention

    And he has a work pressure too’

    At last

    Quarrels, complaints, excuses and heaps of suspecisions

    Sprang up between me and him

    Down the lane

    And I was alleged that

    I was a liar, a betrayer and an arguer

    More clarifications I gave

    More blames I received

     

    Now there is no waxing, no facial

    No talks and no kisses at all

    Only cleft lips

    Are seen on my life-less face

    Life is transforming

    Without you.

     

    That’s why I said

    ‘Oh, thou history

    Why don’t you come again

    And mesmirise me?’

    Else I’ll only get mesmerized ...

     

    From Kannada: Akshata Krishnamurthy

    To English: Uday Itagi